Headlines

TV9-Sensodyne Campaign |ಈ ಅಭಿಯಾನದ ಮೂಲಕ ನಿಮ್ಮ ದಂತ ವಯಸ್ಸನ್ನು ತಿಳಿಯಿರಿ: ಉತ್ತಮ ಬಾಯಿ ಆರೋಗ್ಯಕ್ಕೆ ಮೊದಲ ಹೆಜ್ಜೆ

ಬೆಂಗಳೂರು. ಮಾ.31: ಬಾಯಿ ಆರೋಗ್ಯ ಸಮಸ್ಯೆಗಳು ಸಾರ್ವತ್ರಿಕವಾಗಿ ಹೆಚ್ಚುತ್ತಿರುವ ಸವಾಲಾಗಿದೆ. ಹಿಂದಿನ ಅಂದಾಜಿಗಿಂತಲೂ ಆರೋಗ್ಯ ರಕ್ಷಣೆಯು ಇಂದು ದೊಡ್ಡ ಸವಾಲಾಗಿರುವುದರಿಂದ, ತಡೆಗಟ್ಟುವ ಆರೋಗ್ಯ ರಕ್ಷಣೆಯು ಎಲ್ಲರ ಮಿಷನ್ ಆಗಿದೆ. ಈ ನಿಟ್ಟಿನಲ್ಲಿ, TV9 ನೆಟ್‌ವರ್ಕ್ ಮತ್ತು ಸೆನ್ಸೋಡೈನ್‌ನಂತಹ ಸಂಸ್ಥೆಗಳು, ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸವಾಲನ್ನು ಎದುರಿಸಲು ಮುಂದಾಗಿವೆ. ನಿಮ್ಮ ದಂತ ವಯಸ್ಸನ್ನು ತಿಳಿದುಕೊಳ್ಳುವುದು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಬಾಯಿ ಆರೋಗ್ಯದ ಕಡೆಗೆ ತೆಗೆದುಕೊಳ್ಳುವ ಪ್ರಮುಖ ಮೊದಲ ಹೆಜ್ಜೆಯಾಗಿದೆ. ಬಾಯಿ ಆರೋಗ್ಯವಿಲ್ಲದೆ…

Read More

ಗರ್ಲ್​ಫ್ರೆಂಡ್ ಕೈಯಿಂದಲೇ ಹತ್ಯೆಯಾದ 18 ಮಕ್ಕಳ ತಂದೆ

ಪ್ರತಾಪ್​ಗಢ, ಮಾರ್ಚ್​ 23: ಗಲ್ಫ್ರೆಂಡ್ ಕೈಯಿಂದಲೇ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು ಹತ್ಯೆ(Murder)ಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್​ಗಢದಲ್ಲಿ ನಡೆದಿದೆ. ಅವರ ಶವವನ್ನು ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಗೆ 18 ಮಂದಿ ಮಕ್ಕಳಿದ್ದರು. ಚೀಲದಲ್ಲಿ ತುಂಬಿಸಿ ಅವರನ್ನು ಕಾಲುವೆಗೆ ಎಸೆಯಲಾಗಿತ್ತು.ಮಾರ್ಚ್ 18 ರಿಂದ ನಾಪತ್ತೆಯಾಗಿದ್ದರು. ಈ ಕೊಲೆಯನ್ನು ಮೃತ ವ್ಯಕ್ತಿಯ ಗೆಳತಿ ಸುಮನ್ ಮತ್ತು ಆಕೆಯ ಸಹಚರರು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುಲ್ಶನ್ ತಲೆಗೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಇದು ಅವರ ಸಾವಿಗೆ ಕಾರಣ…

Read More

ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ! – Kannada News | Karnataka Liquor Price Drop: Beer and Premium Scotch Get Cheaper Under New AiB Policy

ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ ಬೆಂಗಳೂರು, ಮೇ 15: ರಾಜ್ಯದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯು ಸಿಹಿ ಸುದ್ದಿ ಕೊಟ್ಟಿದೆ. ರಾಜ್ಯ ಸರ್ಕಾರವು ಮೇ 11 ರಿಂದ ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯನ್ನು ಜಾರಿಗೊಳಿಸಿದ್ದು, ಇದರಿಂದ ಪ್ರೀಮಿಯಂ ಬಿಯರ್ (Beer) ಹಾಗೂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆದರೆ ಸಾಮಾನ್ಯ ಜನರು ಬಳಸುವ ಕಡಿಮೆ ದರದ ಮದ್ಯದ ಬೆಲೆ ಏರಿಕೆಯಾಗಿದೆ. ಮುಖ್ಯಾಂಶಗಳು ನೂತನ ಅಬಕಾರಿ ನೀತಿಯಿಂದ ಬಿಯರ್ ದರದಲ್ಲಿ ಶೇ 25…

Read More

Siddaramaiah Resigns: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಬೆಂಗಳೂರು, ಮೇ 28: ಹೈಕಮಾಂಡ್​ ಸೂಚನೆಯಂತೆ ಕರ್ನಾಟಕ ಮುಖ್ಯಮಂತ್ರಿ (Chief Minister) ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಕೊನೆಗೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯ ಹಿನ್ನೆಲೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಸಿಎಂ ಪದತ್ಯಾಗದ ಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಮೂಲಕ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ವರ್ಷಗಳಿಂದಲೂ ಊಹಾಪೋಹಗಳಿಗೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ವಿಚಾರಕ್ಕೆ ಅಂತಿಮ ತೆರೆ ಬಿದ್ದಿದೆ. ಮುಖ್ಯಾಂಶಗಳು ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ…

Read More

ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಬೆಂಗಳೂರು, (ಮಾರ್ಚ್ 31): ಕೆಐಎಎಲ್ (kempegowda international airport bengaluru) ಆಡಳಿತ ಕಚೇರಿಯ ವಿಳಾಸಕ್ಕೆ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ವಿಳಾಸ ಸರಿಯಾಗಿದ್ದರಿಂದ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್‌ನೊಳಗೆ ಇದ್ದದ್ದು ಯಾವುದೋ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಭೀತಿ ಹುಟ್ಟಿಸುವ ಮಾಟ-ಮಂತ್ರದ ಸಾಮಗ್ರಿಗಳು ಇದ್ದವು. ಇದರಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಇದೀಗ ಈ ಪಾರ್ಸೆಲ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದು,…

Read More

ದೇವರನ್ನು ನಂಬದ ಜಾವೇದ್ ಅಖ್ತರ್ ಈಗ ನಮಾಜ್ ಶುರು ಮಾಡಿದ್ರಾ? ಕೇಸ್ ಹಾಕುವುದಾಗಿ ಎಚ್ಚರಿಕೆ – Kannada News | Javed Akhtar reaction on AI video claiming he turned to God

ಹಿರಿಯ ಚಿತ್ರಕಥೆಗಾರ, ಸಾಹಿತಿ ಜಾವೇದ್ ಅಖ್ತರ್ ಅವರು ಓರ್ವ ನಾಸ್ತಿಕ (Atheist) ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂದರೆ, ಜಾವೇದ್ ಅಖ್ತರ್ ಅವರು ದೇವರ ಮೇಲೆ ನಂಬಿಕೆ ಹೊಂದಿಲ್ಲ. ದೇವರ ಅಸ್ತಿತ್ವವನ್ನು ಅವರು ಒಪ್ಪುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಆದರೆ ಈಗ ಅವರು ತಮ್ಮ ಅಭಿಪ್ರಾಯ ಬದಲಾಯಿಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಟೋಪಿ ಧರಿಸಿ ನಮಾಜ್ ಕೂಡ ಮಾಡಲು ಆರಂಭಿಸಿದ್ದಾರೆ ಎಂದು ಅಂತೆ-ಕಂತೆ ಹಬ್ಬಿಸಲಾಗಿದೆ. ಅದರ ವಿರುದ್ಧ ಜಾವೇದ್ ಅಖ್ತರ್…

Read More

TTD Tirumala: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್; ಇನ್ಮುಂದೆ 24 ಗಂಟೆ ಲಗೇಜ್ ಕೌಂಟರ್ ಸೇವೆ ಲಭ್ಯ!

ತಿರುಮಲ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಭಕ್ತರ ಲಗೇಜ್‌ಗಳ ಸುರಕ್ಷತೆ ಮತ್ತು ಸುಲಭ ನಿರ್ವಹಣೆಗಾಗಿ ಒಟ್ಟು 80 ಲಗೇಜ್ ಕೌಂಟರ್‌ಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಒಟ್ಟು 394 ಸಿಬ್ಬಂದಿ ಮೂರು ಪಾಳಿಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇಂದಿನಿಂದ ಈ ಎಲ್ಲಾ ಲಗೇಜ್ ಕೇಂದ್ರಗಳು ದಿನದ 24 ಗಂಟೆಯೂ ಭಕ್ತರ ಸೇವೆಗೆ ಮುಕ್ತವಾಗಿರಲಿವೆ. ವಿಶೇಷವಾಗಿ ಹಬ್ಬಗಳು ಮತ್ತು ರಜಾ ದಿನಗಳಲ್ಲಿ ಉಂಟಾಗುವ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಈ…

Read More

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ-ಪ್ರೀತಿ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ – Kannada News | Zodiac Relationship Predictions June 21 27: Unraveling Hidden Truths

ವಾರದ ಪ್ರೇಮ ಪ್ರೀತಿ ಭವಿಷ್ಯImage Credit source: Getty Images ಜೂನ್ 21ರಿಂದ ಜೂನ್ 27ರವರೆಗೆ ಹನ್ನೆರಡು ರಾಶಿಗಳಲ್ಲಿ ರಹಸ್ಯ ಮಾತುಕತೆ ಕಾಣಿಸುವುದು ಮತ್ತು ಅದು ಅಪಾರ್ಥಕ್ಕೆ ದಾರಿಯಾಗಲಿದೆ. ಸತ್ಯವನ್ನು ಮಾತ್ರ ತಿರುಚಿವುದು ಬೇಡ. ಅನಂತರ ತೊಂದರೆಯಲ್ಲಿ ಸಿಕ್ಕಿಬೀಳಬೇಕಾಗುವುದು. ಯಥಾರ್ಥ ವಿಚಾರಗಳನ್ನು ಹೇಳಿ, ಸುಖವಾಗಿರಿ. ​ ಮೇಷ ರಾಶಿ : ಮಂಗಳನ ಉಗ್ರ ನೋಟ ನಿಮ್ಮ ಹೃದಯದ ಗೋಡೆಯ ಮೇಲೆ ರಹಸ್ಯ ಕಾವ್ಯ ಬರೆಯುತ್ತಿದೆ. ಸಂಗಾತಿಯ ಕಣ್ಣುಗಳಲ್ಲಿ ನಿಮಗಾಗಿ ಕಾಯುತ್ತಿರುವ ಆ ರಹಸ್ಯ ಒಲವಿನ ಸುಳಿವು ನಿಮಗಿನ್ನೂ…

Read More

ಧರ್ಮೇಂದ್ರ, ಮಮ್ಮುಟ್ಟಿ, ಮಾಧವನ್, ಅಲ್ಕಾ ಯಾಗ್ನಿಕ್‌ ಸೇರಿ ಹಲವರಿಗೆ ಇಂದು (ಮೇ 25) ಪದ್ಮ ಪ್ರಶಸ್ತಿ ಪ್ರದಾನ – Kannada News | Padma Awards 2026 Dharmendra Mammootty Alka Yagnik R Madhavan honoured on 25 May

Dharmendra, R. Madhavan, Mammootty ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ಪ್ರಶಸ್ತಿ 2026’ (Padma Awards 2026) ಪ್ರದಾನ ಸಮಾರಂಭವು ರಾಜಧಾನಿ ನವದೆಹಲಿಯಲ್ಲಿ ಇಂದು (ಮೇ 25) ಸಂಜೆ 5 ಗಂಟೆಗೆ ಅದ್ಧೂರಿಯಾಗಿ ಜರುಗಲಿದೆ. ಈ ಬಾರಿ ಚಿತ್ರರಂಗ, ಸಂಗೀತ, ರಂಗಭೂಮಿ ಮುಂತಾದ ಕ್ಷೇತ್ರದ ಹಲವು ಧೀಮಂತ ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಈ ವರ್ಷ…

Read More

ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಅಮಾನವೀಯ ಹಲ್ಲೆ; ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!

ಮೂಡಿಗೆರೆ , ಮಾ,21: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಾಲ್ ಮತ್ತು ಸಿಬ್ಬಂದಿ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಅನುಮತಿ ಪಡೆಯದೆ ಆಟವಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ 7 ವಿದ್ಯಾರ್ಥಿಗಳನ್ನು ರೂಮಿನಲ್ಲಿ ಕೂಡಿ ಹಾಕಿ ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ಟ್‌ನಿಂದ ಥಳಿಸಲಾಗಿದೆ. ಶುಕ್ರವಾರ ರಾತ್ರಿ ವಿದ್ಯಾರ್ಥಿಗಳ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ಸಿಟ್ಟಿನಲ್ಲಿದ್ದ ಪ್ರಿನ್ಸಿಪಾಲ್, ಶನಿವಾರ ಬೆಳಿಗ್ಗೆ ಅನುಮತಿ ಪಡೆಯದೆ ಮೈದಾನದಲ್ಲಿ…

Read More