ಭಾರತ ಅಮೆರಿಕದ ಉತ್ತಮ ಸ್ನೇಹಿತ; ವಿವಾದದ ಬಳಿಕ ತೇಪೆ ಹಚ್ಚಿದ ಟ್ರಂಪ್ – Kannada News | India is a Great Country; Donald Trump’s Damage Control After Hell Hole Row
ವಾಷಿಂಗ್ಟನ್, ಏಪ್ರಿಲ್ 23: ಭಾರತ ಮತ್ತು ಚೀನಾದಂತಹ ದೇಶಗಳಿಗೆ 9 ತಿಂಗಳಾದ ಬಳಿಕ ಅಮೆರಿಕಕ್ಕೆ ಬರುವ ಮಹಿಳೆಯರು ಇಲ್ಲೇ ಬಂದು ಮಗುವನ್ನು ಹೆರುತ್ತಾರೆ. ಆಗ ಆ ಮಗುವಿಗೆ ಇಲ್ಲಿನ ಪೌರತ್ವ ಸಿಗುತ್ತದೆ. ನಂತರ ಭಾರತ ಮತ್ತು ಚೀನಾದಂತಹ ನರಕಗಳಿಂದ ತಮ್ಮ ಸಂಬಂಧಿಕರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಅಮೆರಿಕದ ಜನ್ಮಸಿದ್ಧ ಪೌರತ್ವಕ್ಕಾಗಿ ಇಲ್ಲಿಗೆ ವಲಸೆ ಬರುತ್ತಾರೆ ಎಂದು ಅಮೆರಿಕದ ಪಾಡ್ಕಾಸ್ಟ್ನಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ರೇಡಿಯೋ ಜಾಕಿ ಮೈಕಲ್ ಸ್ಯಾವೇಜ್ ವಿವಾದಾತ್ಮಕವಾಗಿ ಮಾತನಾಡಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ…