Headlines

ಬಗೆದಷ್ಟು ಬಯಲಾಗ್ತಿದೆ ಪಿಲಿಕುಳದ ಅಕ್ರಮ: ಕಾಳಿಂಗ ಸರ್ಪದ ಹೆಸರಲ್ಲೂ ಭ್ರಷ್ಟಾಚಾರ? – Kannada News | Pilikula Scam Deepens: Corruption Alleged Even in the Name of King Cobra

ಮಂಗಳೂರು, ಫೆಬ್ರವರಿ 19: ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ಗರಂ ಆಗಿತ್ತು. ಆ ಬೆನ್ನಲ್ಲೇ ಕಾಳಿಂಗ ಸರ್ಪದ ಹೆಸರಲ್ಲೂ ಇಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕಾಳಿಂಗ ಸರ್ಪ ಸಂತಾನಾಭಿವೃದ್ಧಿ ಕೇಂದ್ರ ತೆರೆದು 2 ಕೋಟಿಗೂ ಅಧಿಕ ಅನುದಾನ ಪಡೆದಿದ್ದ ಇಲ್ಲಿಯ ಆಡಳಿತ ಅವುಗಳ ಪಾಲನೆ ಮರೆತಿದೆ. ಹೀಗಾಗಿ ಸರಿಯಾಗಿ ಆಹಾರ, ಆರೈಕೆ ಸಿಗದೆ ಅವು ಸಾವನ್ನಪ್ಪಿವೆ ಎಂದು ದೂರಲಾಗಿದೆ. 2022ರ ಜುಲೈನಲ್ಲಿ ಮೊಟ್ಟೆಯೊಡೆದು 38…

Read More

Video: ಮಿನಿ ವ್ಯಾನ್ ಪುಡಿಪುಡಿ, ಬೈಕ್ ಸವಾರನ ಮೇಲೆ ಹರಿದ ವಾಹನ; ಮೈ ಜುಂ ಎನಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ! – Kannada News | Horrific Highway Accident: Lorry Crushes Mini Van, Hits Biker; CCTV Footage

ಹೆದ್ದಾರಿಯಲ್ಲಿ ಮಿನಿ ವ್ಯಾನ್ ಒಂದು ತಿರುವು ಪಡೆಯುತ್ತಿದ್ದ ಸಂದರ್ಭದಲ್ಲೇ, ಹಿಂದಿನಿಂದ ಅತಿ ವೇಗವಾಗಿ ಬಂದ ಲಾರಿಯೊಂದು ಮೃತ್ಯುವಿನಂತೆರಗಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ವ್ಯಾನ್ ಕ್ಷಣಾರ್ಧದಲ್ಲಿ ಪುಡಿಪುಡಿಯಾಗಿದ್ದು, ನಿಯಂತ್ರಣ ತಪ್ಪಿದ ವಾಹನವು ಎದುರಿನಿಂದ ಬರುತ್ತಿದ್ದ ಬೈಕ್ ಸವಾರನಿಗೂ ಜೋರಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಪಿಕಪ್ ವ್ಯಾನ್‌ನಲ್ಲಿದ್ದ ವಸ್ತುಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೈಕ್ ಸವಾರ ವಾಹನದ ಅಡಿಯಲ್ಲಿ ಸಿಲುಕಿರುವ ದೃಶ್ಯ ಎದೆ ನಡುಗಿಸುವಂತಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು…

Read More

ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ಚಟುವಟಿಕೆಗಳ ಬಗ್ಗೆ ಭಾರತೀಯ ಸೇನೆಯಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ – Kannada News | Indian army warning to pakistan over recent drone activities in jammu and kashmir

ನವದೆಹಲಿ, ಜನವರಿ 13: ಪಾಕಿಸ್ತಾನದೊಂದಿಗೆ ಇಂದು ಡಿಜಿಎಂಒ ಮಟ್ಟದ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನದ (Pakistan) ಕಡೆಯಿಂದ ಬರುವ ಡ್ರೋನ್‌ಗಳ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಹಾಗೇ, ಭಾರತದೊಳಗೆ ಡ್ರೋನ್ ಚಟುವಟಿಕೆ ನಿಲ್ಲಿಸಲು ಪಾಕ್​​ಗೆ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೌಶೇರಾ-ರಾಜೌರಿ ವಲಯದಲ್ಲಿ ಡ್ರೋನ್‌ಗಳು ಪತ್ತೆಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನರಲ್ ಉಪೇಂದ್ರ ದ್ವಿವೇದಿ, ಮೇ 10ರಿಂದ ಪಶ್ಚಿಮ…

Read More

Women’s T20 World Cup 2026: ಮಹಿಳಾ ಟಿ20 ವಿಶ್ವಕಪ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ – Kannada News

10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ (Women’s T20 World Cup) ಜೂನ್ 12 ರಂದು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯ ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಫೈನಲ್ ಪಂದ್ಯ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಬಾರಿ, 12 ತಂಡಗಳು 24 ದಿನಗಳಲ್ಲಿ 33 ಪಂದ್ಯಗಳನ್ನು ಆಡಲಿವೆ. ಇದು ಇದುವರೆಗೆ ನಡೆದ ಅತಿದೊಡ್ಡ ಮಹಿಳಾ ಟಿ20 ವಿಶ್ವಕಪ್ ಆಗಲಿದ್ದು, ಈ ಟೂರ್ನಿಯಲ್ಲಿ ಏಕದಿನ ಚಾಂಪಿಯನ್ ಭಾರತ ತನ್ನ ಮೊದಲ…

Read More

U19 Asia Cup 2025: ಮೊಹ್ಸಿನ್ ನಖ್ವಿಗೆ ಮತ್ತೆ ಮುಖಭಂಗ; ಪದಕ ಸ್ವೀಕರಿಸದ ಟೀಂ ಇಂಡಿಯಾ – Kannada News | BCCI PCB Standoff: India Teams Decline Awards from Naqvi Amidst Trophy Row

ಸೆಪ್ಟೆಂಬರ್ 28 ರಂದು ನಡೆದಿದ್ದ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಕೈನಿಂದ ಟ್ರೋಫಿ ಪಡೆಯಲು ನಿರಾಕರಿಸಿತು. ಇದರ ಪರಿಣಾಮವಾಗಿ ಇದುವರೆಗೂ ಟೀಂ ಇಂಡಿಯಾಗೆ ಏಷ್ಯಾಕಪ್ ಟ್ರೋಫಿ ಸಿಕ್ಕಿಲ್ಲ. ಈಗಲೂ ನಖ್ವಿ ಹಾಗೂ ಬಿಸಿಸಿಐ ನಡುವೆ ಈ ಬಗ್ಗೆ ಪ್ರತಿಷ್ಠಯೆ ಹೋರಾಟ ಮುಂದುವರೆದಿದೆ. ಇದೀಗ ಅಂಡರ್-19 ಏಷ್ಯಾಕಪ್‌ನಲ್ಲೂ (U19 Asia Cup) ಭಾರತದ…

Read More

ಇದು ಕಸವಲ್ಲ, ಆರೋಗ್ಯ ಕಣಜ; ನೆಲ್ಲಿಕಾಯಿಯ ಬೀಜದಲ್ಲಿವೆ ಅದ್ಭುತ ಆಯುರ್ವೇದೀಯ ಗುಣಗಳು; ತ್ಯಾಜ್ಯವೆಂದು ಬಿಸಾಡದಿರಿ – Kannada News | Amla seeds great medicinal properties and health benefits, Patanjali research’s great work

ಅತಿ ಪ್ರಬಲ ಹೀಲಿಂಗ್ ಗುಣ ಇರುವ ಹಣ್ಣುಗಳಲ್ಲಿ ಆಮ್ಲವೂ (Amla) ಒಂದು. ರೋಗನಿರೋಧಕ ಶಕ್ತಿಯಿಂದ ಜೀರ್ಣಕ್ರಿಯೆಯವರೆಗೆ ಅನೇಕ ಪ್ರಯೋಜನಗಳನ್ನು ಇದು ಹೊಂದಿದೆ. ಆದರೆ ಈ ನೆಲ್ಲಿಕಾಯಿಯ ಒಂದು ಭಾಗವನ್ನು ಹೆಚ್ಚಿನ ಜನರು ನಿರ್ಲಕ್ಷಿಸುತ್ತಾರೆ. ಆ ಭಾಗವೇ ಬೀಜ. ನೆಲ್ಲಿಯ ಬೀಜವನ್ನು ನಿಷ್ಕ್ರಪಯೋಜಕವೆಂದು ಭಾವಿಸಿ ಎಸೆಯುವುಂಟು. ಆಶ್ಚರ್ಯ ಎಂದರೆ ಪತಂಜಲಿ ಸಂಶೋಧನೆಯು ಈ ಆಮ್ಲದ ಬೀಜದ ಬಗ್ಗೆ ಹೊಸ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ. ಆಚಾರ್ಯ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪತಂಜಲಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಆಧುನಿಕ ವೈಜ್ಞಾನಿಕ ವಿಧಾನಗಳನ್ನು…

Read More

ಶಿವರಾಜ್ ಕುಮಾರ್​​ ಬಗ್ಗೆ ವಿಷ್ಣುವರ್ಧನ್​​ಗಿತ್ತು ಅಪಾರ ಪ್ರೀತಿ, ಕೊಟ್ಟಿದ್ದರು ಅಮೂಲ್ಯ ಉಡುಗೊರೆ

ವಿಷ್ಣುವರ್ಧನ್ (Vishnuvardhan), ಕನ್ನಡ ಚಿತ್ರರಂಗದ ಮೇರು ನಟ. ಹಲವಾರು ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಅಣ್ಣಾವ್ರ ಬಳಿಕ ಅತಿ ಹೆಚ್ಚು ಗೌರವಿಸಲ್ಪಡುವ ನಟ ವಿಷ್ಣುವರ್ಧನ್. ಆದರೆ ಒಂದು ಸಮಯದಲ್ಲಿ ವಿಷ್ಣುವರ್ಧನ್ ಮತ್ತು ರಾಜ್​​ಕುಮಾರ್ ಅವರ ನಡುವೆ ವೈಮನಸ್ಯ ಇದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ರಾಜ್​​ಕುಮಾರ್ ಅಭಿಮಾನಿಗಳು ವಿಷ್ಣುವರ್ಧನ್ ಮೇಲೆ ದಾಳಿ ಮಾಡಿದ್ದರು, ವಿಷ್ಣುವರ್ಧನ್ ಅಭಿಮಾನಿಗಳು ಸಹ ರಾಜ್​​ಕುಮಾರ್ ಅವರ ಸಿನಿಮಾಗಳ ಸೋಲಿಸಲು ಯತ್ನಿಸಿದ್ದರು ಎಂದೆಲ್ಲ ಹೇಳಲಾಗುತ್ತದೆ. ಆದರೆ ವೈಯಕ್ತಿಕವಾಗಿ ರಾಜ್​​ಕುಮಾರ್ ಮತ್ತು…

Read More

IND vs AFG: ಕೊಹ್ಲಿ ಬದಲು ಯಾರಿಗೆ ಅವಕಾಶ? ಹೇಗಿರಲಿದೆ ಪ್ಲೇಯಿಂಗ್ 11? – Kannada News

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಸರಣಿ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಗಾಯದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿಯ ಈ ಅಲಭ್ಯತೆ ಏಕದಿನ ವಿಶ್ವಕಪ್ ತಯಾರಿಯ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕೊಹ್ಲಿ ಅವರ ಗಾಯವು ಗಂಭೀರವಾಗಿರುವ ಕಾರಣ ಅವರು…

Read More

GT vs CSK: ಕೊನೆಯ ಲೀಗ್ ಪಂದ್ಯದಲ್ಲೂ ಕಣಕ್ಕಿಳಿಯದ ಧೋನಿ – Kannada News | MS Dhoni Misses Entire IPL 2026 League Stage; CSK Fans Disappointed by Injury

ಐಪಿಎಲ್ 2026 (IPL 2026) ರ 66 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (GT vs CSK) ಪರಸ್ಪರ ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ 14 ನೇ ಮತ್ತು ಕೊನೆಯ ಪಂದ್ಯ ಇದಾಗಿದೆ. ಅಂದರೆ ಲೀಗ್ ಹಂತದಲ್ಲಿ ಈ ಎರಡು ತಂಡಗಳಿಗೆ ಯಾವುದೇ ಪಂದ್ಯ ಬಾಕಿ ಉಳಿದಿಲ್ಲ. ಇದರಲ್ಲಿ ಗುಜರಾತ್ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆದರೆ ಸಿಎಸ್​ಕೆಗೆ ಪ್ಲೇಆಫ್‌ ಹಾದಿ ಭಾಗಶಃ ಮುಚ್ಚಿದೆ. ಇದರರ್ಥ ಸಿಎಸ್​ಕೆಗೆ ಈ ಸೀಸನ್​ನಲ್ಲಿ…

Read More

ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?

ಹಾಸನ, (ಮಾರ್ಚ್ 14): ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾ ಬ್ಯಾಂಕ್ (Sakleshpura canara bank) ನೀಡಬೇಕಿದ್ದ 66 ಪೈಸೆ ಹಣವನ್ನು ಕೊನೆಗೂ ಮರುಪಾವತಿಸಿದೆ. ಕೆಲವು ವರ್ಷಗಳ ಹಿಂದೆ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂ. ಸಾಲವನ್ನು (Loan)  ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದರು. ಸಕಾಲಕ್ಕೆ ಸಾಲ ತೀರುವಳಿ ಮಾಡಿದ್ದ ರೈತನಿಗೆ ಕೆಲವು ದಿನಗಳ ನಂತರ ಇನ್ನೂ 9.34 ಪೈಸೆ ಸಾಲ ಬಾಕಿ ಇದ್ದು ತಕ್ಷಣವೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದಲ್ಲದೆ ಪದೇಪದೆ ಕರೆ ಮಾಡುತ್ತಿದ್ದರು….

Read More