Headlines

ಬೆನ್ನುಮೂಳೆ ಮುರಿದು ನರಳುತ್ತಿದ್ದ ಸ್ನೇಹಿತನ ಕೆರೆಯಲ್ಲಿ ಮುಳುಗಿಸಿ ಕೊಂದ ಗೆಳೆಯರು! ಘನಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಮಾಗಡಿ – Kannada News | New Year Party Turns Fatal in Vajarahalli, Magadi: Broken spine Youth Killed by Friends, Drowned in Lake

ಆರೋಪಿಗಳಾದ ಪ್ರಜ್ವಲ್ ಮತ್ತು ಸುದೀಪ್ ರಾಮನಗರ, ಜನವರಿ 21: ಹೀಗೂ ಸ್ನೇಹಿತರು ಇರುತ್ತಾರಾ? ತಮ್ಮ ಸ್ವಾರ್ಥಕ್ಕೆ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ ದಾರುಣ ಘಟನೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ (Ramanagara) ಮಾಗಡಿ (Magadi) ತಾಲೂಕಿನ ವಾಜರಹಳ್ಳಿ ಗ್ರಾಮ ಸಾಕ್ಷಿಯಾಗಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಗೆಳೆಯರ ಗುಂಪೇ, ತಮ್ಮ ಜೊತೆಯಲ್ಲಿದ್ದ ಯುವಕನನ್ನು ನಿರ್ದಯವಾಗಿ ಕೆರೆಯಲ್ಲಿ…

Read More

MI vs RCB Playing XI: ಟಾಸ್ ಗೆದ್ದ ಮುಂಬೈ; ಆರ್​ಸಿಬಿ ಪ್ಲೇಯಿಂಗ್​ 11 ನಿಂದ ಹೇಜಲ್​ವುಡ್ ಔಟ್

ಐಪಿಎಲ್ 2026 (IPL 2026) ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡವನ್ನು ಎದುರಿಸಿದೆ. ಎರಡೂ ತಂಡಗಳಿಗೆ ಇದು ಈ ಆವೃತ್ತಿಯ ನಾಲ್ಕನೇ ಪಂದ್ಯವಾಗಿದೆ. ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋತಿವೆ. ಆದ್ದರಿಂದ, ಎರಡೂ ತಂಡಗಳು ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿವೆ. ಒಂದೆಡೆ ಆರ್​ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದು 1 ಪಂದ್ಯದಲ್ಲಿ ಸೋತಿದ್ದು, 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ…

Read More

Daily Devotional: ಮಕ್ಕಳಿಗೆ ಬಾಲಗ್ರಹ ಮಂತ್ರಗಳನ್ನ ಹೇಳುವುದರ ಹಿಂದಿನ ರಹಸ್ಯವೇನು ಗೊತ್ತಾ? – Kannada News | Balagraha Mantras for Kids: Traditional Protection

ಮಕ್ಕಳಿಗೆ ಬಾಲಗ್ರಹ ಮಂತ್ರಗಳನ್ನ ಹೇಳುವುದರ ಹಿಂದಿನ ರಹಸ್ಯವೇನು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಪುಟ್ಟ ಮಕ್ಕಳು, ಒಂದು ವರ್ಷದಿಂದ ಹನ್ನೆರಡು ವರ್ಷದವರೆಗೆ, ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಾರೆ, ಹಠ ಮಾಡುತ್ತಾರೆ, ಅಳುತ್ತಾರೆ ಅಥವಾ ಜ್ವರದಿಂದ ಬಳಲುತ್ತಾರೆ. ಇಂತಹ ಸಂದರ್ಭಗಳಲ್ಲಿ, ಹಿಂದೂ ಸಂಸ್ಕೃತಿ ಮತ್ತು ಸನಾತನ ಪರಂಪರೆಯಲ್ಲಿ, ಅನುಭವಿಗಳು ಮತ್ತು ಮಂತ್ರದ ಶಕ್ತಿಯನ್ನು ಪಡೆದವರು ಮಕ್ಕಳಿಗೆ ಮಂತ್ರಗಳನ್ನು ಹಾಕಿಸುವ ಪದ್ಧತಿ ಇದೆ. ಈ ಮಂತ್ರ ಪಠಣವು ಮಕ್ಕಳಲ್ಲಿನ ಜ್ವರ, ಭಯ ಮತ್ತು ಅಳು…

Read More

ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ – Kannada News | Child Protection Lapses: Karwar Children’s Home Fails Girl, Exposing Systemic Failures

ಕಾರವಾರ, ಫೆ.7: ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯೊಂದು ನಡೆದಿದೆ. ಘೋರ ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ನೊಂದಿದ್ದ ಬಾಲಕಿಗೆ ರಕ್ಷಣೆ ಸಿಗಬೇಕಾದ ಜಾಗದಲ್ಲಿಯೇ ಇಂತಹ ನಿರ್ಧಾರ ಮಾಡಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಬಾಲಕಿ ಮೂಲತಃ ಹಳಿಯಾಳ ತಾಲೂಕಿನವಳು. ಕಳೆದ ಆಗಸ್ಟ್‌ನಲ್ಲಿ ಪೋಕ್ಸೋ ಪ್ರಕರಣವೊಂದರ ಅಡಿಯಲ್ಲಿ ಈಕೆಯನ್ನು ರಕ್ಷಿಸಿ ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು. ಈಕೆ ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಆದರೆ, ಮಾನಸಿಕ…

Read More

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ

ಮಾರ್ಚ್ 22ರಿಂದ ಏಪ್ರಿಲ್ 04ರವರೆಗಿನ ಪ್ರೇಮ ಅಥವಾ ಪ್ರೀತಿಯ ಭವಿಷ್ಯ ಬಹಳ ಆಸಕ್ತಿದಾಯಕವೂ ರೋಮಾಂಚನಕಾರಿಯೂ ಆಗಿರಲಿದೆ. ನಿಮ್ಮ ಈ ವಾರದ ಕ್ಷಣಗಳು ಅಮೂಲ್ಯವಾದವುಗಳಾಗಿವೆ. ಅವಿಸ್ಮರಣೀಯತೆಯನ್ನು ರಮಣೀಯತೆಯನ್ನೂ ಕೊಡುತ್ತವೆ. ​ಮೇಷ: ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು, ತಾಳ್ಮೆಯಿಂದಿರಿ. ಹಳೆಯ ನೆನಪುಗಳು ಮರುಕಳಿಸಲಿವೆ. ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರುವ ಸಾಧ್ಯತೆಯಿದೆ. ಮಾತುಕತೆಯಲ್ಲಿ ಮೃದುತ್ವವಿರಲಿ. ​ವೃಷಭ: ಈ ವಾರ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರಲಿದೆ. ಪ್ರಿಯಕರನೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ. ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ. ಪರಸ್ಪರ…

Read More

ಮೋದಿ ಬೆಂಗಳೂರು ಭೇಟಿ ವೇಳೆ ಜಿಲೆಟಿನ್ ಪತ್ತೆ ಪ್ರಕರಣದ ಅಸಲಿ ಕಾರಣ ಕೊನೆಗೂ ಬಯಲು! – Kannada News | Real Reason Behind Gelatin Sticks Found Near Art of Living During PM Modi’s Bengaluru Visit Revealed

ಜಿಲೆಟಿನ್ ಪತ್ತೆ ಪ್ರಕರಣImage Credit source: tv9 ಬೆಂಗಳೂರು, ಮೇ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೆಂಗಳೂರು (Bengaluru) ಭೇಟಿಯ ವೇಳೆ ಆರ್ಟ್ ಆಫ್ ಲೀವಿಂಗ್ (Art of Living) ಆಶ್ರಮದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣದ ಅಸಲಿ ಕಾರಣ ಕೊನೆಗೂ ತನಿಖೆಯಲ್ಲಿ ಬಯಲಾಗಿದೆ. ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಈ ಪ್ರಕರಣವು ಯಾವುದೇ ಪ್ರಮುಖ ಉಗ್ರ ಸಂಘಟನೆಯ ಕೃತ್ಯವಲ್ಲ, ಬದಲಿಗೆ ಆಶ್ರಮದ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಸಂಚು…

Read More

ಪ್ರಭಾಸ್ ‘ಭಾರ’ಕ್ಕೆ ಬೆಂಡಾದ ಜಿಯೋ ಹಾಟ್​​ಸ್ಟಾರ್: ಒಟಿಟಿ ಮಾಡಿದ ಮನವಿಯೇನು? – Kannada News | Prabhas The Raja Saab OTT release Jio Hotstar craze details

ಪ್ರಭಾಸ್ (Prabhas), ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್. ದೇಶದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಪ್ರಭಾಸ್ ಅವರಿಗಿದ್ದಾರೆ. ಅದ್ಯಾವ ಮಟ್ಟಿಗೆ ಪ್ರಭಾಸ್ ಕ್ರೇಜ್ ಇದೆಯೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ಸುಲಭವಾಗಿ 200-300 ಕೋಟಿ ಹಣ ಗಳಿಕೆ ಮಾಡಿಬಿಡುತ್ತವೆ ಅದೂ ಮೊದಲ ಒಂದು ವಾರದ ಒಳಗೆ. ಇತ್ತೀಚೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿರಲಿಲ್ಲ. ಆದರೂ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ….

Read More

4 ಕಿ.ಮೀಗೆ 1 ರೂ ವೆಚ್ಚ, 10 ನಿಮಿಷಗಳಲ್ಲಿ ಡೆಲಿವರಿ: ರೋಗಿಗಳ ಜೀವ ಉಳಿಸುತ್ತಿವೆ ಈ ಡ್ರೋನ್​​ ಸೇವೆ

ಬೆಂಗಳೂರಿನ ಟ್ರಾಫಿಕ್​​ ಸಮಸ್ಯೆಯಿಂದಾಗಿ ತುರ್ತು ಚಿಕಿತ್ಸೆ ಅಗತ್ಯವಿರುವ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧ, ಚಿಕಿತ್ಸೆಗೆ ಅಗತ್ಯ ವಸ್ತುಗಳ ಸಾಗಾಟಕ್ಕೂ ವಾಹನಗಳ ದಟ್ಟಣೆ ಅಡ್ಡಗಾಲಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್​​ ಮತ್ತು ಡ್ರೋನ್ ಸ್ಟಾರ್ಟ್‌ಅಪ್ Airbound ಒಟ್ಟಾಗಿ ಆರಂಭಿಸಿರುವ ಪೈಲಟ್ ಯೋಜನೆ, ಟ್ರಾಫಿಕ್ ಸಮಸ್ಯೆ ಮೀರಿ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಮತ್ತು ಪರೀಕ್ಷಾ ಮಾದರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಜೀವಗಳನ್ನು ಉಳಿಸುವ ಹೊಸ ಮಾರ್ಗವನ್ನು ತೋರಿಸಿದೆ. ಈ ಪೈಲಟ್…

Read More

ಮುಸ್ಲಿಮರನ್ನೆಲ್ಲಾ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಸಿದ್ದರಾಮಯ್ಯ ಹೀಗೆಂದಿದ್ಯಾಕೆ ನೋಡಿ!

ಬಾಗಲಕೋಟೆ, ಏಪ್ರಿಲ್ 4: ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಭ್ಯ ಪದ ಬಳಸಿದ ಬಿಜೆಪಿ ನಾಯಕ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಅವರು, ಬಿಜೆಪಿ ಪರ ಪ್ರಚಾರದ ವೇಳೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಗಳನ್ನೂ ಖಂಡಿಸಿದರು. ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು ಮತ್ತು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಮತ ಕೇಳುವುದಾಗಿ…

Read More

“ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ”: ನಿವೃತ್ತಿ ಹೊಂದುತ್ತಿರುವ ಸಂಸದರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ದೆಹಲಿ, ಮಾ.18: ರಾಜ್ಯಸಭೆಯ 37 ಸದಸ್ಯರ ನಿವೃತ್ತಿಯ ಹಿನ್ನೆಲೆಯಲ್ಲಿ ಸದನವು ಇಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ನಿವೃತ್ತರಾಗುತ್ತಿರುವ ಸದಸ್ಯರ ಸೇವೆಯನ್ನು ಶ್ಲಾಘಿಸಿದ (Rajya Sabha farewell) ಪ್ರಧಾನಿ ಮೋದಿ, ಸದನಕ್ಕೆ ಅವರು ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿರುತ್ತವೆ ಎಂದು ತಿಳಿಸಿದರು. “ಜ್ಞಾನಕ್ಕಿಂತ ಅನುಭವಕ್ಕೆ ಶಕ್ತಿ ಹೆಚ್ಚು. ಶೈಕ್ಷಣಿಕ ಜ್ಞಾನವು ಸೀಮಿತವಾಗಿರಬಹುದು, ಆದರೆ ಸದಸ್ಯರು ಇಲ್ಲಿ ಕಳೆದ ಸಮಯ ಮತ್ತು ಪಡೆದ ಅನುಭವವು ದೇಶದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ” ಎಂದು ಪ್ರಧಾನಿ ಹೇಳಿದರು. ರಾಜ್ಯಸಭೆಯು…

Read More