Headlines

ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್

ಸೀಸನ್ ಪೂರ್ಣಗೊಳ್ಳುವಾಗ ಬಿಗ್ ಬಾಸ್ ಮನೆ ಆನಂದ ಸಾಗರ ಆಗುತ್ತದೆ. ಆದರೆ, ಗಿಲ್ಲಿ ನಟ ಹಾಗೂ ಅಶ್ವಿನಿ ವಿಷಯದಲ್ಲಿ ಆ ರೀತಿ ಇಲ್ಲ. ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಷಯ ಸುದೀಪ್ ಅಸಮಾಧಾನಕ್ಕೆ ಕಾರಣ ಆಗಿದೆ. ವೀಕೆಂಡ್​​​ನಲ್ಲಿ ಈ ವಿಷಯ ಪ್ರಮುಖ ಚರ್ಚೆಯ ವಿಷಯದಂತೆ ತೋರುತ್ತಿದೆ. ಆ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ – Kannada News | West Bengal Assembly Elections PM Narendra Modi holds massive roadshow in Howrah

ಹೌರಾ, ಏಪ್ರಿಲ್ 23: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣಾ ಪ್ರಚಾರದ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಂಗಾಳದ ಹೌರಾದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಬಿಜೆಪಿ ಅಭ್ಯರ್ಥಿಗಳ ಜೊತೆ ರೋಡ್ ಶೋ ನಡೆಸಿದ ಮೋದಿಯವರನ್ನು ನೋಡಲು ಜನಸಾಗರವೇ ನೆರೆದಿತ್ತು. ಈ ವೇಳೆ ಪ್ರಧಾನಿ ಮೋದಿಯವರ ಮುಖವಿರುವ ಮಾಸ್ಕ್ ಧರಿಸಿದ್ದ ಜನರು ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಇದಕ್ಕೂ ಮುನ್ನ ಮಥುರಾಪುರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ…

Read More

ಬೆಂಗಳೂರಿನ ಚಿಕ್ಕಪೇಟೆಯ ಹಾರ್ಡ್​ವೇರ್ ಗೋಡೌನ್​ಗೆ ಬೆಂಕಿ! – Kannada News | Chickpet Hardware Warehouse Fire in Bengaluru: 175 Shops Engulfed

ಬೆಂಗಳೂರು, ಫೆಬ್ರವರಿ 25: ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಇರುವ ಹಾರ್ಡ್‌ವೇರ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 175 ಅಂಗಡಿ ಮಳಿಗೆಗಳಿದ್ದವು. ಕೆಳಮಹಡಿಯಲ್ಲಿನ ಹಾರ್ಡ್‌ವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮೇಲಿನ ಅಂತಸ್ತುಗಳಿಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ. ಕಟ್ಟಡದಲ್ಲಿ ಪ್ಲಾಸ್ಟಿಕ್, ಫ್ಯಾನ್ಸಿ ಸಾಮಗ್ರಿಗಳು, ಬಟ್ಟೆ ಹಾಗೂ ಸುಡುವಂತಹ ಇತರೆ ವಸ್ತುಗಳಿದ್ದ ಕಾರಣ ಬೆಂಕಿ ವೇಗವಾಗಿ ಹರಡಿದೆ. ಅಗ್ನಿ ಅವಘಡದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ದಟ್ಟ ಹೊಗೆ…

Read More

Daily Devotional: ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?

ಬೆಂಗಳೂರು, ಜನವರಿ 10: ವಾಸ್ತುಶಾಸ್ತ್ರದ ಪ್ರಕಾರ, ನಮ್ಮ ವಾಸಸ್ಥಳ, ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಕೆಲವು ಸಸ್ಯಗಳನ್ನು ಇಡುವುದು ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಇಂತಹ ಸಸ್ಯಗಳನ್ನು ನೋಡಿದಾಗ ನಮ್ಮ ಮನಸ್ಸು ಕೂಡ ಸಕಾರಾತ್ಮಕವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇರುತ್ತದೆ. ಲೋಳೆ ರಸ ಅಥವಾ ಅಲೋವೆರಾ ಒಂದು ವಿಶೇಷವಾದ ಗಿಡವಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಅಲೋವೆರಾ ಗಿಡವನ್ನು ವಾಸ್ತುಶಾಸ್ತ್ರದ ನಿಯಮಗಳ ಪ್ರಕಾರ ಇರಿಸಿದಾಗ, ಅದು ವೃತ್ತಿ ಜೀವನ, ಆರ್ಥಿಕ ಸ್ಥಿತಿ ಮತ್ತು…

Read More

ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಕೋರ್ಟ್ ತೀರ್ಪಿನ ಬಳಿಕ ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ – Kannada News | Dharwad Yogesh Gowda Murder Case: Main Accused Basavaraj muttagi talks after Court verdict

ಧಾರವಾಡ, (ಏಪ್ರಿಲ್ 15): ಯೋಗೇಶ್ ಗೌಡ ಹತ್ಯೆ ಪ್ರಕರಣದ (Yogesh Gowda Murder Case) ಸುದೀರ್ಘ 10 ವರ್ಷಗಳ ಕಾಲ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದ್ದು, ಒಟ್ಟು ಆರೋಪಿಗಳ ಪೈಕಿ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ 17 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿ ಆದೇಶ ಹೊರಡಿಸಿದೆ. ಉಳಿದ ಆರೋಪಿಗಳಲ್ಲಿ ಇಬ್ಬರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಮಾಫಿ ಸಾಕ್ಷಿಗಳೆಂದು ಪರಿಗಣಿಸಲಾಗಿದೆ. ಇನ್ನು ಕೋರ್ಟ್ ತೀರ್ಪಿನ ಬಳಿಕ…

Read More

BEL Apprentice Recruitment 2026: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​​ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | BEL Apprentice Recruitment 2026: Machilipatnam Walk in for Graduates and Diploma Holders

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಚಲಿಪಟ್ನಂ ಘಟಕದಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತಾಂತ್ರಿಕ ಮತ್ತು ಸಾಮಾನ್ಯ ಪದವಿ ಪಡೆದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಇದು ಸುಸಂದರ್ಭವಾಗಿದೆ. ಹುದ್ದೆಗಳ ವಿವರ ಮತ್ತು ಅರ್ಹತೆ: ಈ ನೇಮಕಾತಿಯಡಿ ವಿವಿಧ ಶೈಕ್ಷಣಿಕ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಹುದ್ದೆಯ ಆಧಾರದ ಮೇಲೆ ಮಾಸಿಕ ವೇತನವನ್ನು…

Read More

ಒಬ್ಬಳ ಮೇಲೆ ಇಬ್ಬರಿಗೆ ಲವ್​: ನೇಪಾಳಿ ಯುವತಿಗಾಗಿ ನಡೆದ ಗಲಾಟೆಯಲ್ಲಿ ನಡೆದಿದ್ದು ರಕ್ತಪಾತ! – Kannada News | Bengaluru Stabbing: Love Triangle Leads to Violence in Devasandra

ಬೆಂಗಳೂರು, ಫೆಬ್ರವರಿ 04: ಯುವತಿ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಓರ್ವನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರದಲ್ಲಿ ನಡೆದಿದೆ. ರೋಷನ್​​ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು, ಆರೋಪಿ ಮಾಮು ಮತ್ತು ಸಹಚರರು ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ. ರೋಷನ್​​ ಸ್ಥಿತಿ ಸದ್ಯ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಗಿದ್ದು, ಆರೋಪಿಗಳಿಗಾಗು ಶೋಧ ಮುಂದುವರಿದಿದೆ. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ರೋಷನ್​​ ನೇಪಾಳಿ ಯುವತಿಯೋರ್ವಳ ಹಿಂದೆ…

Read More

ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ – Kannada News | Bengaluru Woman Found Dead: Parents Allege Dowry Harassment by Husband

ಬೆಂಗಳೂರು, ಜನವರಿ 26: 2 ವರ್ಷಗಳ ಹಿಂದೆ ಮದುವೆ ಆಗಿದ್ದ ಮಹಿಳೆಯೋರ್ವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕೀರ್ತಿ ಮೃತ ಮಹಿಳೆಯಾಗಿದ್ದು, ವರದಕ್ಷಿಣೆ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ. ಕಳೆದ 2 ತಿಂಗಳಿಂದ ಕಿರುಕುಳದ ಬಗ್ಗೆ ತಾಯಿ ಬಳಿ ಕೀರ್ತಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತಲೆ ತಿರುಗಿ ಬಿದ್ದಿದ್ದಳು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಪತ್ನಿ ಪೋಷಕರಿಗೆ ಪತಿ ಗುರುಪ್ರಸಾದ್​​ ಮಾಹಿತಿ ನೀಡಿದ್ದ ಎನ್ನಲಾಗಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ…

Read More

ಅಕ್ರಮವಾಗಿ ಜಾನುವಾರುಗಳ ಸಾಗಾಟ: ಸಿನೆಮಾ ಮಾದರಿ ದಾಳಿ ನಡೆಸಿದ ಮಂಗಳೂರಿನ ಕದ್ರಿ ಪೊಲೀಸರು – Kannada News | Mangaluru Police Bust Illegal Cattle Transport: 34 Rescued, 3 Arrested

ರಕ್ಷಿಸಲಾದ ಜಾನುವಾರುಗಳುImage Credit source: Tv9 Kannada ಮಂಗಳೂರು, ಫೆಬ್ರವರಿ 23: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 34 ಜಾನುವಾರುಗಳನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ‌ ಕಾರ್ಯಾಚರಣೆ ನಡೆಸಿರುವ ಖಾಕಿ ತಂಡ ಜಾಲವನ್ನು ಭೇದಿಸಿದೆ. ಜಾನುವಾರುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಈ ವೇಳೆ ಕಂಡುಬಂದಿದ್ದು, ಕೇರಳದ ಕಸಾಯಿಖಾನೆಗೆ ಇವುಗಳನ್ನು ಸಾಗಿಸಲಾಗುತ್ತಿತ್ತು. ಪ್ರಕರಣ ಸಂಬಂಧ ದಸ್ತಗೀರ್ ಸಾಬ್, ಖತಿಪ್…

Read More

Daily Devotional: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ? – Kannada News | Temple Sanctum Sanctorum Entry: Rules and Spiritual Significance

ದೇವಾಲಯವು ವಿದ್ಯುತ್ ಶಕ್ತಿಯ ಕೇಂದ್ರವಿದ್ದಂತೆ, ಭಗವಂತನ ಶಕ್ತಿಯ ಮೂಲವಾಗಿದೆ. ಪಂಚಭೂತಗಳಿಂದ ಉಂಟಾಗುವ ದೋಷಗಳು, ಶುಭಫಲಗಳು, ಕರ್ಮಫಲಗಳನ್ನು ನಿವೇದಿಸಿಕೊಳ್ಳುವ ಕೇಂದ್ರವೇ ದೇವಾಲಯ. ಗರ್ಭಗುಡಿ ಪ್ರವೇಶವನ್ನು ಎಲ್ಲರೂ ಮಾಡಬಹುದೇ? ಅದು ಶುಭವೇ ಅಥವಾ ಅಶುಭವೇ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಲ್ಲಿ ಸಾಮಾನ್ಯವಾಗಿ ಅರ್ಥ, ಅರ್ಥಾರ್ಥಿ, ಜ್ಞಾನಿ, ಜಿಜ್ಞಾಸು ಎಂಬ ನಾಲ್ಕು ವಿಧಗಳಿರುತ್ತವೆ. ಆದರೆ, ಗರ್ಭಗುಡಿಗೆ ಪ್ರವೇಶವು ಸಾಮಾನ್ಯವಾಗಿ ಕೆಲವೇ…

Read More