ನಮಸ್ಕಾರ ಬೆಂಗಳೂರು! ಕನ್ನಡ ಮಾತನಾಡಿ ಗಮನ ಸೆಳೆದ ಜಪಾನ್ ಯುವತಿ: ವಿಡಿಯೋ ವೈರಲ್ – Kannada News | Japanese Woman Wins Hearts in Bengaluru by Speaking Kannada, Video Goes Viral
ಕನ್ನಡ ಮಾತನಾಡಿ ಗಮನ ಸೆಳೆದ ಜಪಾನ್ ಯುವತಿ ಬೆಂಗಳೂರು, ಜನವರಿ 13: ಬೆಂಗಳೂರಿನಲ್ಲಿ (Bangalore) ಕನ್ನಡ (Kannada) ಮಾತನಾಡದೆ ಇರುವುದಕ್ಕೆ ಜಗಳವಾಗಿದ್ದು, ಹಿಂದಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಚರ್ಚೆಗಳು ಆಗುತ್ತಿರುವುದನ್ನು ಆಗಾಗ್ಗೆ ಕಾಣುತ್ತಿರುತ್ತೇವೆ. ಆದರೆ, ಅಚ್ಚರಿಯ ಸನ್ನಿವೇಶ ವೊಂದರಲ್ಲಿ, ಹಿಂದಿ ಮಾತನಾಡುವ ಜಪಾನ್ ಯುವತಿಯೊಬ್ಬರು ಪಟಪಟನೆ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಜಪಾನ್ ಯುವತಿ ಮೇಯೋ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಜತೆಗೆ, ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ….