ಇನ್ನೆರಡು ದಿನ ಹೊರಗೆ ಬರಬೇಡಿ; ಇರಾನ್ನಲ್ಲಿರುವ ಭಾರತೀಯರಿಗೆ ತುರ್ತು ಸೂಚನೆ ನೀಡಿದ ಭಾರತ
ನವದೆಹಲಿ, ಏಪ್ರಿಲ್ 7: ಕದನವಿರಾಮ ಅಥವಾ ಶಾಂತಿ ಮಾತುಕತೆಗೆ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ 10 ದಿನಗಳ ಗಡುವು ನಾಳೆ ಬೆಳಗ್ಗೆ ಅಂತ್ಯಗೊಳ್ಳಲಿದೆ. ಹೀಗಾಗಿ, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು ಸಂಜೆ ತುರ್ತು ಸಲಹೆಯನ್ನು ನೀಡಿದ್ದು, ಸಂಭಾವ್ಯ ಉದ್ವಿಗ್ನ ಪರಿಸ್ಥಿತಿಯ ನಡುವೆ ಇರಾನ್ ದೇಶದಲ್ಲಿರುವ ಭಾರತೀಯ ಪ್ರಜೆಗಳು ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ. ಭಾರತೀಯ ಪ್ರಜೆಗಳು ಕನಿಷ್ಠ 48 ಗಂಟೆಗಳ ಕಾಲ ತಾವು ಎಲ್ಲಿದ್ದಾರೋ ಅದೇ ಸ್ಥಳಗಳಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ….