Headlines

ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ’ ಚಿಹ್ನೆಯನ್ನು ಬರೆಯಿರಿ. ಇದರಿಂದ ನಕಾರಾತ್ಮಕ ಆಲೋಚನೆಗಳು ದೂರ ಆಗಲಿದೆ. ಕುಟುಂಬ ಸದಸ್ಯರ ಮಧ್ಯೆ ಸಾಮರಸ್ಯ ಮೂಡಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ನೀವೇ ನಂಬುವುದಕ್ಕೆ ಸಾಧ್ಯವಿಲ್ಲದ ಗಾಸಿಪ್ ನಿಮ್ಮ ಬಗ್ಗೆ ಹರಿದಾಡಲಿದೆ. ಸಂಬಂಧಿಕರ ಬಳಿ ಈ ಹಿಂದೆ ನೀವು ಮಾಡಿದಂಥ ಸಾಲವೋ ಅಥವಾ ಆಸ್ತಿ ವ್ಯವಹಾರವೋ ವಿಪರೀತ ಒತ್ತಡವನ್ನು ಸೃಷ್ಟಿ ಮಾಡಲಿದೆ. ನಕ್ಕು ಸುಮ್ಮನಾಗ ಬೇಕಾದ ಆಕ್ಷೇಪ, ಆಪಾದನೆಗಳ…

Read More

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಅಮೆರಿಕಾದಿಂದ LPG ಸರಕು; ಮಂಗಳೂರು ಬಂದರಿಗೆ ಬಂತು‘ಪೈಕ್ಸಿಸ್ ಪಯನಿಯರ್’!

ಬೆಂಗಳೂರು, ಮಾರ್ಚ್​ 22: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಇಂಧನ ಸರಬರಾಜಿನ ಬಗ್ಗೆ ಉಂಟಾದ ಆತಂಕದ ನಡುವೆಯೇ ಅಮೆರಿಕಾದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಣೆ ಭಾರತಕ್ಕೆ ತಲುಪಿದೆ. ಸಿಂಗಾಪುರ್ ಧ್ವಜದಡಿಯಲ್ಲಿ ಸಾಗುವ ‘ಪೈಕ್ಸಿಸ್ ಪಯನಿಯರ್’ ಹಡಗು ಭಾನುವಾರ ಬೆಳಗ್ಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. ಬಂದರಿಗೆ ಬಂದಿರುವ ಹಡಗಿನಲ್ಲಿರುವ LPG ಪ್ರಮಾಣ ಎಷ್ಟು? ನವ ಮಂಗಳೂರು ಬಂದರು ಪ್ರಾಧಿಕಾರದ ಮಾಹಿತಿ ಪ್ರಕಾರ 47,236 ಟನ್ ಸಾಮರ್ಥ್ಯದ ಈ ಹಡಗು ಬೆಳಗ್ಗೆ ಸುಮಾರು 6 ಗಂಟೆಗೆ ಬರ್ತ್…

Read More

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ – Kannada News | Vijyalakshmi Darshan visits Parappana Agrahara to see Darshan second time in a week

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮತ್ತು ಕೆಲವು ಕುಟುಂಬದ ಆಪ್ತರು, ಆತ್ಮೀಯರು ಆಗಾಗ್ಗೆ ಜೈಲಿಗೆ ಹೋಗಿ ಬರುತ್ತಿರುತ್ತಾರೆ. ಇದೀಗ ಪತ್ನಿ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಇದು ಈ ವಾರದಲ್ಲಿ ಅವರ ಎರಡನೇ ಭೇಟಿ ಆಗಿದೆ. ವಿಜಯಲಕ್ಷ್ಮಿ ಅವರು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಆಗಿ…

Read More

ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ – Kannada News | Capex growth along with fiscal discipline, Brokerage firm JM Financial expects from 2026 Budget

ನವದೆಹಲಿ, ಜನವರಿ 30: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರುವರಿ 1ರಂದು ಪ್ರಸ್ತುತಪಡಿಸುತ್ತಿರುವ ಬಜೆಟ್ 2026-27 ಬಗ್ಗೆ ನಿರೀಕ್ಷೆಗಳು ಹಲವಿವೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹೂಡಿಕೆದಾರರು ಈ ಬಜೆಟ್​ನಿಂದ ಏನು ನಿರೀಕ್ಷಿಸುತ್ತಾರೆ? ಆರ್ಥಿಕ ಬೆಳವಣಿಗೆಗೆ ನೀರೆರೆದು ಪೋಷಿಸಲು ಸರ್ಕಾರ ಯಾವ ಪ್ಲಾನ್ ಮಾಡಿದೆ? ವಿತ್ತೀಯ ಶಿಸ್ತು ಕಾಯ್ದುಕೊಳ್ಳುತ್ತಲೇ ಬಂಡವಾಳ ವೆಚ್ಚ ಹೆಚ್ಚಿಸಲು ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಹೂಡಿಕೆದಾರರಿಗೆ ಇರುವ ಕುತೂಹಲ ಮತ್ತು ನಿರೀಕ್ಷೆ. ಕಳೆದ ಬಜೆಟ್​ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಿಂತ ಅನುಭೋಗಕ್ಕೆ…

Read More

‘ನನ್ನ ಮಗ ಸುರಕ್ಷಿತವಾಗಿ ಬರಬೇಕು’: ಮೋದಿಗೆ ಮನವಿ ಮಾಡಿದ ಯುವಕನ ತಾಯಿ! – Kannada News | Tumakuru’s Manoj Stranded in Iran War: Family Urges Govt for Repatriation

‘ನನ್ನ ಮಗ ಸುರಕ್ಷಿತವಾಗಿ ಬರಬೇಕು’: ಮೋದಿಗೆ ಮನವಿ ಮಾಡಿದ ಇರಾನ್​ನಲ್ಲಿ ಸಿಲುಕಿರುವ ಯುವಕನ ತಾಯಿ! ತುಮಕೂರು, ಮಾರ್ಚ್​ 03: ಉದ್ಯೋಗ ಅರಸಿ ಇರಾನ್‌ಗೆ ತೆರಳಿದ್ದ ತುಮಕೂರಿನ (Tumkuru) ಯುವಕ ಯುದ್ಧ ಪರಿಸ್ಥಿತಿಯ ನಡುವೆ ಅಲ್ಲಿಯೇ ಸಿಲುಕಿರುವ ಘಟನೆ ಆತಂಕ ಮೂಡಿಸಿದ್ದು, ಆತನನ್ನು ಕರೆತರುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ನಿವಾಸಿ ಮನೋಜ್ (25) ಇರಾನ್‌ನಲ್ಲಿ ಮರ್ಚೆಂಟ್ ನೇವಿ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್–ಇರಾನ್ ಯುದ್ಧ ಆರಂಭವಾದ ನಂತರ ಸಂಪರ್ಕ ಕಡಿತಗೊಂಡಿರುವುದು ಕುಟುಂಬದವರಲ್ಲಿ ಕಳವಳ ಉಂಟುಮಾಡಿದೆ….

Read More

Siddaramaiah Political Life: ಪಕ್ಷೇತರ ಶಾಸಕನಿಂದ ಎರಡು ಬಾರಿ ಸಿಎಂ ಹುದ್ದೆಯವರೆಗೆ; ಸಿದ್ದರಾಮಯ್ಯನವರ ಸುದೀರ್ಘ ರಾಜಕಾರಣದ ಹಾದಿ ಇಲ್ಲಿದೆ

ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಅವಧಿಗೆ ಸಿಎಂ ಆಗಿದ್ದ ಸಿದದ್ದರಾಮಯ್ಯ ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ದಾಖಲೆ ಬರೆದಿದ್ದಾರೆ. 1983ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದ ಇವರು, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ‘ಅಹಿಂದ’ ವರ್ಗಗಳ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರು. ಸಿದ್ದರಾಮಯ್ಯ ರಾಜಕೀಯದ ಹಾದಿ ಮೈಸೂರಿನ ಸಿದ್ದರಾಮನಹುಂಡಿಯವರಾದ ಸಿದ್ದರಾಮಯ್ಯನವರು, 1983ರಲ್ಲಿ ಮೊದಲ ಬಾರಿಗೆ…

Read More

ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ – Kannada News | Hubballi Blood Banks Face Severe Shortage Due to Heatwave; Blood Donations Drop Drastically

ಹುಬ್ಬಳ್ಳಿ, ಏಪ್ರಿಲ್ 27: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪ ಜನಜೀವನವನ್ನು ತತ್ತರಿಸಿಸಿದೆ. ಇದರ ಪರಿಣಾಮವಾಗಿ, ರಾಜ್ಯದ ಹಲವು ರಕ್ತ ನಿಧಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ತಾಪಮಾನ ಏರಿಕೆಯಿಂದಾಗಿ ರಕ್ತದಾನ ಮಾಡಲು ಹೆಚ್ಚಿನ ಜನರು ಹಿಂದೇಟು ಹಾಕುತ್ತಿದ್ದಾರೆ. ಹುಬ್ಬಳ್ಳಿ ನಗರದ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್‌ನಲ್ಲಿ ಪ್ರತಿದಿನ 90 ರಿಂದ 100 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ, ಪ್ರಸ್ತುತ ಬೇಸಿಗೆಯ ಹಿನ್ನೆಲೆಯಲ್ಲಿ ಈ ಸಂಖ್ಯೆ 10 ರಿಂದ 15 ಯೂನಿಟ್‌ಗಳಿಗೆ ಕುಸಿದಿದೆ. ಬಿಸಿಲಿನಲ್ಲಿ ಸುಸ್ತು, ತಲೆಸುತ್ತು ಬರುವ…

Read More

ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ? ಟಿವಿ9 ಜತೆ ಮನದಾಳ ಬಿಚ್ಚಿಟ್ಟ ಟಾಪರ್

ಯಾದಗಿರಿ, ಮಾರ್ಚ್ 10: ಯಾದಗಿರಿ ಜಿಲ್ಲೆಯ ಪ್ರತಿಭಾವಂತ ಯುವಕ ಸಂದೀಪ್ ಬಾಡದ್ ಅವರು ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 89ನೇ ರ್ಯಾಂಕ್ ಗಳಿಸಿ, ತಮ್ಮ ಹುಟ್ಟೂರಿಗೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಇದೀಗ ತಮ್ಮ ಯುಪಿಎಸ್ಸಿ ಸಾಧನೆ ಬಗ್ಗೆ ಟಿವಿ9 ಜತೆ ಮುಕ್ತವಾಗಿ ಮಾತನಾಡಿದ್ದಾರೆ. ಪೋಷಕರಿಗೆ ಯುಪಿಎಸ್​​ಸಿ ಬಗ್ಗೆ ಅರಿವೇ ಇರಲಿಲ್ಲ ಎಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಂದೀಪ್ ಹೇಳಿದ್ದಾರೆ. ಅಲ್ಲದೆ, ತಮ್ಮ ಯಶಸ್ಸಿನ ಸೀಕ್ರೆಟ್ ತಿಳಿಸಿದ ಅವರು, ಕನಸು ಕಾಣಿ, ಪ್ರಯತ್ನ ಪಟ್ಟರೆ ಯಾವುದು…

Read More

ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ: ಕದ್ದ ಆಭರಣ ಮಾರಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದವರು ಲಾಕ್!

ಬೆಂಗಳೂರು, ಮಾರ್ಚ್ 18: ಆನ್‌ಲೈನ್ ಜೂಜಿನ (Online Gambling) ವ್ಯಸನಕ್ಕೆ ಒಳಗಾಗಿ, ತಾವೇ ಕೆಲಸ ಮಾಡುತ್ತಿದ್ದ ಆಭರಣ ಪಾಲಿಷ್ ಅಂಗಡಿಯಲ್ಲಿ ವ್ಯಕ್ತಿಗಳಿಬ್ಬರು ಕಳ್ಳತನ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನರೇಂದ್ರ ಮತ್ತು ಕುಲ್ದೀಪ್ ಎಂದು ಗುರುತಿಸಲಾಗಿದೆ. ನರೇಂದ್ರ ಕಳೆದ ಒಂದು ತಿಂಗಳಿನಿಂದ ಧನಲಕ್ಷ್ಮೀ ರೋಡಿಯಂ ಎಂಬ ಆಭರಣ…

Read More

ಎಲ್ಲರ ಚಿತ್ತ ಲಕ್ಕುಂಡಿಯತ್ತ: ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಆರಂಭ – Kannada News | Historic Lakkundi Unveils Secrets: Excavation at Kote Veerabhadreshwara Temple

ಗದಗ, ಜ.16: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಇಂದಿನಿಂದ ಪ್ರಾರಂಭಗೊಂಡಿದೆ. ಸಿದ್ಧರಕೊಳ್ಳ ಎಂಬ ಸ್ಥಳದಲ್ಲಿ ಕೇವಲ 10 ಮೀಟರ್‌ ವ್ಯಾಪ್ತಿಯಲ್ಲಿ ಉತ್ಖನನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯು ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಸೇರಿದಂತೆ ಅನೇಕ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದು, ಬಾದಾಮಿಗಿಂತಲೂ ಹೆಚ್ಚು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಅಪಾರ ಪ್ರಮಾಣದ ಇತಿಹಾಸ ಬೆಳಕಿಗೆ ಬರಲಿದೆ ಎಂಬ ನಂಬಿಕೆ…

Read More