‘ರಾಮಾಯಣ’ ಟ್ರೇಲರ್ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ – Kannada News | Ramayana Trailer Out: Fans Disappointed Over Sunny Deol’s Missing Hanuman Glimpse
ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ (Ramayana) ಭವ್ಯ ಟ್ರೇಲರ್ ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ವಿಶ್ಯುಯಲ್ ವೈಭವ ಹಾಗೂ ಪಾತ್ರಧಾರಿಗಳ ಲುಕ್ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ. ಟ್ರೇಲರ್ನಲ್ಲಿ ಒಂದು ಪ್ರಮುಖ ಪಾತ್ರದ ಅನುಪಸ್ಥಿತಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ರಾಮಾಯಣ ಮಹಾಕಾವ್ಯದ ಅತಿ ದೊಡ್ಡ ಶಕ್ತಿಯಾಗಿರುವ ಆಂಜನೇಯನ ದರ್ಶನ ಮೊದಲ ಝಲಕ್ನಲ್ಲಿ ಸಿಗದಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟ್ರೇಲರ್ನಲ್ಲಿ ಮಿಸ್ ಆದ ಹನುಮಂತ ಚಿತ್ರದಲ್ಲಿ ಬಾಲಿವುಡ್ನ ಹಿರಿಯ ನಟ ಸನ್ನಿ…