ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಅಂತ ಜನ ಒಪ್ಪಿದ್ದಾರೆ: ಚೇತನ್ ಅಹಿಂಸಾ – Kannada News | Chetan Ahimsa says Karnataka people approved his statement on Dr Rajkumar Samadhi

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ನೀಡಿದ್ದ ಹೇಳಿಕೆಯಿಂದ ಸಾಕಷ್ಟು ವಿವಾದ ಆಗಿತ್ತು. ರಾಜ್​ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಚೇತನ್ ಪ್ರಶ್ನಿಸಿದ್ದರು. ಅವರ ಹೇಳಿಕೆಯನ್ನು ರಾಜ್​ಕುಮಾರ್ (Dr Rajkumar) ಅಭಿಮಾನಿಗಳು ವಿರೋಧಿಸಿದರು. ಹಾಗಿದ್ದರೂ ಕೂಡ ಚೇತನ್ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್ಕಾರದ ಪಾಲಿಸಿಗೆ ಸಂಬಂಧಪಟ್ಟಂತೆ ನಾನು ಪ್ರಸ್ತಾಪ ಮಾಡಿದ್ದು….

Read More

ಹಿಂದೂ ಯುವತಿಯನ್ನ ಮತಾಂತರಕ್ಕೆ ಯತ್ನ: ಸಮೀರ್ ನನ್ನು ಪೊಲೀಸರಿಗೆ ಒಪ್ಪಿಸಿದ ಹಿಂದು ಸಂಘಟನೆಗಳು

ಹುಬ್ಬಳ್ಳಿ, (ಏಪ್ರಿಲ್ 03): ಛೋಟಾ ಬಾಂಬೆ ಎಂದೇ ಹೆಸರುವಾಸಿಯಾರುವ ಹುಬ್ಬಳ್ಳಿಯಲ್ಲಿ (Hubbli) ಮತ್ತೊಂದು ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ. ಹುಬ್ಬಳಿಯ ವಿಜಯನಗರದ ನಿವಾಸಿ ಸಮೀರ್, ಹಿಂದೂ ಯುವತಿಯನ್ನು ಪರಿಚಯಿಸಿಕೊಂಡು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಾನೆಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಈ ಸಂಬಂಧ ಹಿಂದು ಕಾರ್ಯಕರ್ತರು ಸಮೀರ್ ನನ್ನು ಹಿಡಿದು ಹಳೇ ಹುಬ್ಬಳ್ಳಿ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ ನಗರದ ವಿಕಾಸ ನಗರದ ಯುವತಿಯನ್ನು ಸಮೀರ್​​​ ಜಿಮ್ ನಲ್ಲಿ ಪರಿಚಯಿಸಿಕೊಂಡಿದ್ದು, ಬಳಿಕ ಲವ್ ಜಿಹಾದ್…

Read More

ಮೊನಲಿಸಾ ಮದುವೆಗೆ ಹೊಸ ಟ್ವಿಸ್ಟ್: ಮೊನಲಿಸಾ ನಾಪತ್ತೆ!

ಕುಂಭಮೇಳ ಮೊನಲಿಸಾ (Monalisa) ಮದುವೆ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಲೇ ಸಾಗುತ್ತಿದೆ. ಇತ್ತೀಚೆಗಷ್ಟೆ ಮೊನಲಿಸಾ ಕೇರಳದಲ್ಲಿ ಫರ್ಮನ್ ಖಾನ್ ಜೊತೆ ಮದುವೆ ಆಗಿದ್ದರು. ಕೇರಳದ ಕೆಲ ರಾಜಕೀಯ ಮುಖಂಡರ ನೇತೃತ್ವದಲ್ಲಿ ಈ ಮದುವೆ ನಡೆದಿತ್ತು. ಇದು ಲವ್ ಜಿಹಾದ್ ಎಂದು ಅವರ ತಂದೆ ಹಾಗೂ ಕೆಲ ಸಂಬಂಧಿಗಳು ಆರೋಪಿಸಿದ್ದರು. ಆದರೆ ತಮ್ಮದು ಲವ್ ಜಿಹಾದ್ ಅಲ್ಲವೆಂದು ಮೊನಲಿಸಾ ಮತ್ತು ಅವರ ಪತಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಬಳಿಕ ಮೊನಲಿಸಾರ ಅಧಿಕೃತ ಜನ್ಮ ದಿನಾಂಕದ ಪ್ರಕಾರ ಅವರು ಅಪ್ರಾಪ್ತೆಯೆಂದು…

Read More

Video: ಹಾಲಿನ ಬಾಟಲಿ ಮಗುವಿನ ಬಾಯಿಗೆ ಇಡೋ ಬದಲು ಕಿವಿಗೆ ಇಟ್ಟ ಮಹಿಳೆ

ಪುಟ್ಟ ಮಕ್ಕಳನ್ನು (little kids) ನೋಡಿಕೊಳ್ಳುವಾಗ ಅವರ ಮೇಲೆ ಎಷ್ಟು ಕಣ್ಣು ಇಟ್ಟಿದ್ದರೂ ಕಡಿಮೆಯೇ. ಪುಟಾಣಿ ಮಕ್ಕಳೇ ಹಾಗೆ, ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಇನ್ನು ಹೆತ್ತವರ ಕೆಲವು ಬೇಜವಾಬ್ದಾರಿತನದಿಂದ ಪುಟಾಣಿಗಳು ಸಮಸ್ಯೆಗೆ ಸಿಲುಕಿ ಕೊಳ್ಳುವುದಿದೆ. ಇದೀಗ ಇಂತಹದ್ದೇ ವಿಡಿಯೋ ವೈರಲ್‌ ಆಗಿದ್ದು,  ಮಹಿಳೆಯೂ ಹಾಲಿನ ಬಾಟಲಿಯನ್ನು ಮಗುವಿನ ಬಾಯಿಗೆ ಇಡೋ ಬದಲು ಕಿವಿಗೆ ಇಟ್ಟಿದ್ದಾಳೆ. ಈ ದೃಶ್ಯ ನೋಡಿದ ನೆಟ್ಟಿಗರು ಈ ಮಹಿಳೆಯ ವಿರುದ್ಧ…

Read More

ಮುಂದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಮತ್ತೋರ್ವ ಆಟಗಾರ ಎಂಟ್ರಿ – Kannada News | T20 World Cup 2026: Washington Sundar to link up with Indian squad in Delhi

ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುಎಸ್​ಎ ತಂಡವನ್ನು 29 ರನ್​ಗಳಿಂದ ಮಣಿಸಿ ಟೀಮ್ ಇಂಡಿಯಾ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅಂದರೆ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಪ್ರಮುಖ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಸಂಪೂರ್ಣ ಫಿಟ್​ ಆಗಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಪೆಕ್ಕೆಲುಬಿನ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ಅವರು ಕಿವೀಸ್ ವಿರುದ್ಧದ…

Read More

ಡ್ರೋನ್ ದಾಳಿ ವೇಳೆ ಅಮೆರಿಕದ ಯುದ್ಧ ವಿಮಾನದಿಂದ ಹೊರಬಿದ್ದ ಪೈಲಟ್ ಇರಾನ್ ವಶದಲ್ಲಿ?

ಟೆಹ್ರಾನ್, ಏಪ್ರಿಲ್ 3: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎಫ್ -35 ಮತ್ತು ಎಫ್ -15ಇ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಇರಾನ್‌ನಲ್ಲಿ (Iran War) ಅಮೆರಿಕದ ಪೈಲಟ್​ನನ್ನು ಸೆರೆಹಿಡಿಯಲಾಗಿದೆ ಎಂದು ಇರಾನ್ ಮಾಧ್ಯಮ ಇಂದು ವರದಿ ಮಾಡಿದೆ. ಆದರೆ, ಈ ಸುದ್ದಿ ನಿಜವೇ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಐಆರ್‌ಜಿಸಿ ಏರೋಸ್ಪೇಸ್ ಫೋರ್ಸ್ ಡಿಕ್ಕಿ ಹೊಡೆದ ಎಫ್ -35 ಯುದ್ಧ ವಿಮಾನದಿಂದ ಅಮೆರಿಕದ ಪೈಲಟ್ ನೈಋತ್ಯ ಇರಾನ್ ಕಡೆಗೆ ಜಿಗಿದಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ…

Read More

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಏನೇನು ಚಿನ್ನಾಭರಣಗಳಿದ್ದವು ಗೊತ್ತೇ? ಕೊನೆಗೂ ಸಿಕ್ತು ಅಧಿಕೃತ ಮಾಹಿತಿ – Kannada News | Lakkundi Gold Treasure Details Revealed: Official List of Ornaments Found in Gadag

ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ & ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿದ್ದ ಚಿನ್ನಾಭರಣ ಗದಗ, ಜನವರಿ 13: ಗದಗ (Gadag) ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ ಕೆಲಸದ ವೇಳೆ ಚಿನ್ನದ ನಿಧಿ (Gold Treasure) ಸಿಕ್ಕಿದ ವಿಚಾರ ಹತ್ತಾರು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಈವರೆಗೆ ಅರ್ಧ ಕೆಜಿ ಚಿನ್ನದ ನಿಧಿ ದೊರೆತಿದೆ ಎಂಬ ವರದಿಯಾಗಿತ್ತಷ್ಟೇ ವಿನಃ, ಅದರಲ್ಲಿ ಏನೇನಿದ್ದವು ಎಂಬ ಮಾಹಿತಿ ಇರಲಿಲ್ಲ. ಇದೀಗ ಗದಗ ಜಿಲ್ಲಾಧಿಕಾರಿ ಆ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ನಿಧಿಯಲ್ಲಿ ಏನೇನು ಆಭರಣಗಳಿದ್ದವು…

Read More

ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ

ತಿರುವಲ್ಲಾ, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಪುದುಚೆರಿಗೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಇಂದು ಕೇರಳಕ್ಕೆ (ಕೇರಳಂ) ತೆರಳಿದ್ದಾರೆ. ಕೇರಳದ ತಿರುವಲ್ಲಾದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ ನಡೆಸಿದ್ದಾರೆ. ಎಡ ಮತ್ತು ಕಾಂಗ್ರೆಸ್ ವಿರುದ್ಧ ನಡೆದ ವಾಗ್ದಾಳಿಯ ನಂತರ ಪ್ರಧಾನಿ ಮೋದಿ ಕೇರಳದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದಾರೆ. “ತಿರುವಲ್ಲಾದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಜನರು…

Read More

ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ; ವಿಡಿಯೋ ವೈರಲ್ – Kannada News | PM Modi Welcomed with Indian Traditional dance in Malaysia Watch Aamzing Video

ಕೌಲಾಲಂಪುರ, ಫೆಬ್ರವರಿ 7: ಪ್ರಧಾನಿ ಮೋದಿ ಇಂದು ತಮ್ಮ 2 ದಿನಗಳ ಭೇಟಿಗಾಗಿ ಮಲೇಷ್ಯಾಕ್ಕೆ ಆಗಮಿಸಿದರು. ಈ ವೇಳೆ 800ಕ್ಕೂ ಹೆಚ್ಚು ನೃತ್ಯಗಾರರಿಂದ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರಧಾನಿ ಮೋದಿಯವರಿಗೆ (PM Modi in Malaysia) ವಿನೂತನವಾಗಿ ಸ್ವಾಗತ ಕೋರಲಾಯಿತು. ವಿದೇಶಿ ನೆಲದಲ್ಲಿ ನೂರಾರು ಜನರು ಪ್ರದರ್ಶಿಸಿದ ಭರತನಾಟ್ಯ ಕಂಡು ಪ್ರಧಾನಿ ಮೋದಿ ಅಚ್ಚರಿಗೊಂಡರು. ಈ ವೇಳೆ ‘ಭಾರತ್ ಮಾತಾ ಕಿ ಜೈ’, ‘ಮೋದಿ, ಮೋದಿ’ ಘೋಷಣೆಗಳು ಮಾರ್ದನಿಸಿದವು. ಪ್ರಧಾನಿ ಮೋದಿ…

Read More

Virat Kohli: ಯುವ ಆಟಗಾರರ ಸವಾಲಿಗೆ ನಾನು ರೆಡಿ!

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆರ್​ಸಿಬಿ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ವಿರಾಟ್ ಕೊಹ್ಲಿ (Virat Kohli). ಗುಜರಾತ್ ಟೈಟಾನ್ಸ್ ನೀಡಿದ 155 ರನ್​ಗಳ ಸವಾಲನ್ನು ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 42 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ…

Read More