Headlines

ಪ್ರೀತಿಸಿ ಮದ್ವೆ: ಹಸುಗೂಸು ಸೇರಿ 3 ಹೆಣ್ಮಕ್ಕಳನ್ನ ಪತ್ನಿ ಕೈಗಿಟ್ಟು ಪತಿ ಪರಾರಿ – Kannada News | A Man leaving His Wife Over three Baby girls at Bengaluru

ಬೆಂಗಳೂರು, (ಜನವರಿ 04): ಮೂರೂ ಹೆಣ್ಣು ಮಕ್ಕಳು (Children) ಎಂದು ಪತ್ನಿಗೆ ಕೈಕೊಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ಈ ಸಂಬಂಧ ಈಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್, ಪತ್ನಿಗೆ ಕೈಕೊಟ್ಟು ಪರಾರಿಯಾದ ವ್ಯಕ್ತಿ. ಹರೀಶ್ ಮೂಲತಃ ರಾಜಸ್ಥಾನದವನಾಗಿದ್ದು, ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದಾನೆ. ಈತ ವರಲಕ್ಷ್ಮೀ ಎಂಬ ಸ್ಟಾಫ್ ನರ್ಸ್​ನ ಪ್ರೀತಿಸಿ ಮದುವೆ ಆಗಿದ್ದ. ಬಳಿಕ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಿದ್ದ. ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಈ…

Read More

Bengaluru Air Quality: ಮಾಲಿನ್ಯ ಮುಕ್ತವಾಯ್ತು ಕರ್ನಾಟಕ! ಬೆಂಗಳೂರು, ಮೈಸೂರು, ಮಂಗಳೂರಿನ ಇಂದಿನ AQI ಎಷ್ಟು ಗೊತ್ತಾ? – Kannada News | Bengaluru AQI Today: Air Quality Levels in Karnataka Cities on May 23

ಬೆಂಗಳೂರು, ಮೇ 23: ಇಂದು ಕರ್ನಾಟಕದ ಪ್ರಮುಖ ನಗರಗಳು ಮತ್ತು ರಾಜಧಾನಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ(AQI) ಒಟ್ಟಾರೆಯಾಗಿ ತೃಪ್ತಿಕರ ಮತ್ತು ಉತ್ತಮ ಮಟ್ಟದಲ್ಲಿದೆ. ಇತ್ತೀಚಿನ ಮಳೆ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಮುಖ್ಯಾಂಶಗಳು ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ ತೃಪ್ತಿಕರ ಮಟ್ಟದಲ್ಲಿ ದಾಖಲಾಗಿದೆ. ಮಳೆಯ ಕಾರಣದಿಂದಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ಅತ್ಯುತ್ತಮ ಶುದ್ಧ ಗಾಳಿ ವಾತಾವರಣವಿದೆ. ಬೆಂಗಳೂರಿನ ಇಂದಿನ…

Read More

ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ ಆಗೋದು ಪಕ್ಕಾ? – Kannada News | Kerala CM Race: Intense Competition Among Three Leaders as Congress Collects MLA Opinions

ತಿರುವನಂತಪುರಂ, ಮೇ 07: ಕೇರಳದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತಲ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರ ನಡುವೆ ಸ್ಪರ್ಧೆ ಹಿನ್ನೆಲೆ ಹೈಕಮಾಂಡ್ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಈ ಪ್ರಕ್ರಿಯೆಗಾಗಿ ಎಐಸಿಸಿ ವೀಕ್ಷಕರಾದ ಮುಕುಲ್ ವಾಸನಿಕ್ ಮತ್ತು ಅಜಯ್ ಮಾಕೇನ್ ಅವರು ಕೇರಳದ ತಿರುವನಂತಪುರಂನ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. 63 ಕಾಂಗ್ರೆಸ್…

Read More

ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ – Kannada News | Kolar’s Tata Airbus Mini Helicopter Unit Launched by Modi and Macron Virtually

ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆImage Credit source: Google ಕೋಲಾರ, ಫೆಬ್ರವರಿ 17: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮುಂಬೈನಿಂದ ವರ್ಚುವಲ್ ಮೂಲಕ​​ ಉದ್ಘಾಟಿಸಿದ್ದಾರೆ. ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್ ಇಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಕೋಲಾರ ತಾಲೂಕಿನ ವೇಮಗಲ್​ನಲ್ಲಿ…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಒಣ ಹವಾಮಾನ ಮುಂದುವರಿಕೆ – Kannada News | Bengaluru temperature: Dry weather all over karnataka, clear sky in bengaluru

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಒಣ ಹವಾಮಾನ ಮುಂದುವರಿಕೆ ಬೆಂಗಳೂರು, ಫೆಬ್ರುವರಿ 03: ರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ (Weather Forecast) ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕ ಎಲ್ಲೆಲ್ಲಿ ಒಣಹವೆ? ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ…

Read More

Daily Devotional: ಶುಭಕಾರ್ಯಗಳಲ್ಲಿ ದಂಪತಿಗಳು ಹೇಗೆ ಕೂರಬೇಕು ಗೊತ್ತಾ?

ಶುಭಕಾರ್ಯಗಳಲ್ಲಿ ದಂಪತಿಗಳು ಹೇಗೆ ಕೂರಬೇಕು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೋಮ, ಯಜ್ಞ, ವಿವಾಹ, ಗೃಹ ಪ್ರವೇಶ, ದೇವರ ಪೂಜೆ, ಮತ್ತು ಜ್ಯೋತಿಷಿ ಭೇಟಿಯಂತಹ ಧಾರ್ಮಿಕ ಮತ್ತು ಶುಭ ಕಾರ್ಯಗಳಲ್ಲಿ ಪತ್ನಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ. ಹೀಗೆ ಕುಳಿತರೆ ಕಾರ್ಯಗಳು ಪರಿಪೂರ್ಣ ಫಲ ನೀಡುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸೇವಾ ಕಾರ್ಯಗಳು, ಅನುದಾನ ನೀಡುವುದು, ಧರ್ಮ ಕೆಲಸಗಳು, ಹಾಗೆಯೇ ಮನೆಯಲ್ಲಿ ಮಲಗುವಾಗ, ಗುರು ಹಿರಿಯರಿಗೆ ನಮಸ್ಕರಿಸುವಾಗ, ಮತ್ತು…

Read More

ಕಾಂಗ್ರೆಸ್​​​ ಮುಖಂಡನ ಪವರ್ ಮುಂದೆ ಡಮ್ಮಿಯಾದ ಅರಣ್ಯಾಧಿಕಾರಿಗಳು: ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ – Kannada News | Chikkamagaluru: Illegal Resort Threatens Western Ghats’ Tiger Buffer Zone and Chandradrona Parvata

ಚಿಕ್ಕಮಗಳೂರು, ಜ.21: ಅರಣ್ಯಗಳ ಮಧ್ಯೆ ರೆಸಾರ್ಟ್ ನಿರ್ಮಾಣ (Illegal Resort in Western Ghats) ಮಾಡಲು ಕಾಂಗ್ರೆಸ್​​​ ಮುಂಖಡರೊಬ್ಬರು ಮುಂದಾಗಿದ್ದಾರೆ. ಅರಣ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣವಾಗುತ್ತಿದೆ ಎಂದು ಹೇಳಲಾಗಿದೆ. ಇದು ಒಂದು ಕಡೆ ಹುಲಿ‌ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಆಗಿದ್ದು, ಮತ್ತೊಂದು ಕಡೆ ಸೂಕ್ಷ್ಮ ಪ್ರದೇಶವಾಗಿದೆ. ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯದೆ ಕಾನೂನಿನ ವಿರೋಧವಾಗಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಇದು ಅಕ್ರಮವಾಗಿ…

Read More

ದೂರುದಾರರ ಮೊಬೈಲ್​​ ಸಂಖ್ಯೆ ಪೊಲೀಸರಿಂದಲೇ ದುರುಪಯೋಗ?: ಚರ್ಚೆಗೆ ಗ್ರಾಸವಾದ ಮಹಿಳೆಯ ಪೋಸ್ಟ್​​ – Kannada News | Bengaluru Police Under Fire After Woman Alleges Officer Misused Her Complaint Contact for Private WhatsApp Texts

ಬೆಂಗಳೂರು, ಜೂನ್​​ 18: ನೀಡಿದ್ದ ದೂರಿನಲ್ಲಿದ್ದ ಮೊಬೈಲ್​ ಸಂಖ್ಯೆಯನ್ನು ಪೊಲೀಸರೇ ದುರುಪಯೋಗಪಡಿಸಿಕೊಂಡು ವಾಟ್ಸ್ಯಾಪ್​​ನಲ್ಲಿ ಮೆಸೇಜ್​​ ಮಾಡುತ್ತಿರೋದಾಗಿ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ನಿವಾಸಿ ಜಾನ್ಹವಿ ದೇಸಾಯಿ ಅವರು ಜೂನ್ 17ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ತಾವು 2025ರ ಆಗಸ್ಟ್ 31ರಂದು ಪೊಲೀಸ್ ದೂರು ದಾಖಲಿಸಿದ್ದೆ ಎಂದು ತಿಳಿಸಿದ್ದಾರೆ. ದೂರು ದಾಖಲಿಸಿದ ಹಲವು ತಿಂಗಳ ಬಳಿಕ ತಮ್ಮ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಸಂದೇಶ ಬಂದಿರುವುದನ್ನು ಪ್ರಶ್ನಿಸಿರುವ ಅವರು, ತಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಗ್ಗೆ…

Read More

ಅತ್ತಿಗೆ ರಶ್ಮಿಕಾ ಬಗ್ಗೆ ವಿಜಯ್ ಸಹೋದರ ಆನಂದ್ ದೇವರಕೊಂಡ ಹೇಳಿದ್ದೇನು? – Kannada News | Vijay Deverakonda brother Anand Deverakonda Insta post about Rashmika Mandanna

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹವಾಗಿದ್ದಾರೆ. ಇವರಿಬ್ಬರ ವಿವಾಹ ಉದಯಪುರದ ಐಟಿಸಿ ಮೆಮಂಟೋಸ್​​ನಲ್ಲಿ ಅದ್ಧೂರಿಯಾಗಿ ನಡೆದಿದೆ. ಎರಡೂ ಕುಟುಂಬದ ಆಪ್ತರು, ಬಹಳ ಆಪ್ತ ಸ್ನೇಹಿತರು ಸಂಬಂಧಿಗಳ ಎದುರು ಈ ಜೋಡಿ ಅಧಿಕೃತವಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ರಶ್ಮಿಕಾ ಅವರು ಇದೀಗ ಅಧಿಕೃತವಾಗಿ ದೇವರಕೊಂಡ ಮನೆ ಸೊಸೆ. ದೇವರಕೊಂಡ ಕುಟುಂಬದವರು ಹೊಸ ಸದಸ್ಯೆಯನ್ನು ಬಲು ಪ್ರೀತಿಯಿಂದ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರು ರಶ್ಮಿಕಾಗೆ ತಮ್ಮ ಕುಟುಂಬದಲ್ಲಿ ತಲೆ-ತಲಾಂತರಗಳಿಂದ ಬಂದಿದ್ದ…

Read More

ಪಾಕಿಸ್ತಾನ್ ತಂಡ ಭಾರತ ವಿರುದ್ಧ ಆಡಲು ಹೆದರುತ್ತಿದ್ದೆ ಅಂದುಕೊಳ್ಳುತ್ತಿದ್ದಾರೆ! – Kannada News | Danish Kaneria Slams Pakistan’s T20 World Cup 2026 boycott

ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ನಡೆಯನ್ನು ಪಾಕ್​ನ ಮಾಜಿ ಆಟಗಾರ ದಾನಿಶ್ ಕನೇರಿಯಾ ಖಂಡಿಸಿದ್ದಾರೆ. ಈ ಬಗ್ಗೆ ಖಾಸಗಿ ಚಾನೆಲ್​ ಜೊತೆ ಮಾತನಾಡಿರುವ ಅವರು, ಪಾಕ್​ನ ಈ ನಿರ್ಧಾರದಿಂದ ಎಲ್ಲರೂ ನಮ್ಮ ತಂಡ ಭಾರತದ ವಿರುದ್ಧ ಆಡಲು ಹೆದರುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನ್ ತಂಡವು ಭಾರತದಲ್ಲಿ ಆಡಲು ನಿರಾಕರಿಸಿತ್ತು. ಅಲ್ಲದೆ ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸಬೇಕೆಂದು ಬೇಡಿಕೆಯಿಟ್ಟಿದ್ದರು. ಅದರಂತೆ ಇದೀಗ ಶ್ರೀಲಂಕಾದಲ್ಲಿ ಭಾರತ…

Read More