Headlines

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 20ರ ದಿನಭವಿಷ್ಯ

ನಿಮ್ಮ ಮನೆಯ ಬಳಿ ಇರುವಂಥ ದೇವಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ನಿಮ್ಮಿಂದ ಸಾಧ್ಯವಾಗುವಂಥ ಸೇವೆಯನ್ನು ಮಾಡಿಬನ್ನಿ. ಇದರಿಂದ ನಿಮ್ಮ ಮೇಲೆ ಬಂದಂಥ ವೃಥಾ ಆರೋಪಗಳು ದೂರವಾಗುತ್ತವೆ. ಹಾಗೂ ಕೈ ತಪ್ಪಿಹೋಗಬಹುದು ಎಂದುಕೊಂಡಿದ್ದ ಅವಕಾಶಗಳು, ಪ್ರಾಜೆಕ್ಟ್ ಗಳು ದೊರೆಯಲಿವೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ಅತ್ಯಂತ ಕ್ರಿಯಾಶೀಲವಾದ ದಿನ ಇದಾಗಿರುತ್ತದೆ. ಉದ್ಯೋಗಕ್ಕೆ ರಜೆಯ ದಿನವಾಗಿದ್ದರೂ ನಿಮ್ಮ ಮನಸ್ಸು ಮುಂದಿನ ಗುರಿಗಳ ಬಗ್ಗೆ ಯೋಚಿಸುತ್ತಾ ಇರಲಿದೆ. ಕೌಟುಂಬಿಕವಾಗಿ ಸಂಭ್ರಮದ ಸಮಯವನ್ನು…

Read More

Shani Transit in Pisces 2026: ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲ, ಸುಖವೂ ಇದೆ; ಈ ರಾಶಿಗೆ ಅದೃಷ್ಟ – Kannada News | Shani Transit in Pisces 2026: Astrological Impact on Your Zodiac Sign

ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲImage Credit source: Pinterest ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು‌ ಕರ್ಮ ಫಲವನ್ನು ನೀಡುವವನು ಎಂದು ಪ್ರಸಿದ್ಧ. ಕುಂಡಲಿಯಲ್ಲಿ ಶನಿಯ ಸ್ಥಾನದ ಮೇಲೆ ಉದ್ಯೋಗ, ಉದ್ಯಮಗಳು ತೀರ್ಮಾನವಾಗುತ್ತವೆ. ಅಧಿಕಾರವನ್ನೂ ನೀಡುವನು, ನ್ಯಾಯ ಮಾರ್ಗದಲ್ಲಿ ಹೋಗುವಂತೆ ಮಾಡಿ ನ್ಯಾಯವನ್ನೂ ಕೊಡಿಸುತ್ತಾನೆ. ​​ಮೀನ ಶನಿಗೆ ಸಮ ಕ್ಷೇತ್ರ, ಚಂದ್ರ ದ್ರೇಕ್ಕಾಣ ಶನಿಗೆ ಶತ್ರು ಕ್ಷೇತ್ರ, ರವಿಯ ಹೋರೆ ಶನಿಗೆ ಪರಮ ಶತ್ರುಕ್ಷೇತ್ರ, ಗುರುವಿನ ನವಾಂಶ ಮತ್ತು ತ್ರಿಂಶಾಂಶ ಸಮ/ಮಿತ್ರ ಕ್ಷೇತ್ರ, ಶುಕ್ರನ ದ್ವಾದಶಾಂಶ ಶನಿಗೆ…

Read More

ರಾಮಭಕ್ತರೇ ಆತಂಕ ಬೇಡ, ನೀವು ನೀಡಿದ ಬೆಳ್ಳಿ ಇಟ್ಟಿಗೆ, ಒಡವೆಗಳು ಸುರಕ್ಷಿತ; ಅಯೋಧ್ಯೆ ಟ್ರಸ್ಟ್‌ನಿಂದ ಪತ್ರಿಕಾ ಪ್ರಕಟಣೆ – Kannada News | Ayodhya Ram Mandir Trust: Champat Rai, Mishra Resign; Trust Promises Inquiry and Safe Donations

ಅಯೋಧ್ಯೆ ಜೂ.27: ಇಡೀ ದೇಶವೇ ಅತ್ಯಂತ ಪವಿತ್ರ ಭಾವನೆಯಿಂದ ನೋಡುವ ಅಯೋಧ್ಯೆಯ ಶ್ರೀರಾಮ ಮಂದಿರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಆಘಾತಕಾರಿ ಬೆಳವಣಿಗೆಗಳ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಈ ವಿವಾದದ ಬೆನ್ನಲ್ಲೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಟ್ರಸ್ಟ್, “ಕಳೆದ ಕೆಲವು ದಿನಗಳಿಂದ…

Read More

‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ – Kannada News | Toxic Teaser vs Dhurandhar 2: Yash’s Film Dominates with 97M Views, What Went Wrong?

‘ಟಾಕ್ಸಿಕ್’ ಟೀಸರ್ (Toxic Movie) ರಿಲೀಸ್ ಆದಾಗ ಶುರುವಾದ ಒಂದು ಹಲ್​ಚಲ್ ಇದೆಯಲ್ಲ ಅದು ತುಂಬಾನೇ ದೊಡ್ಡದು. ಈ ಟೀಸರ್​​ನಲ್ಲಿ ಬಂದ ಯಾರೂ ಊಹಿಸದ ದೃಶ್ಯದಿಂದ ಟೀಸರ್ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತೆ ಆಯಿತು. ಆದರೆ, ‘ಧುರಂಧರ್ 2’ ಸಿನಿಮಾದ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಎರಡೂ ಟೀಸರ್ ವೀಕ್ಷಣೆಯ ವೀವ್ಸ್ ನೋಡಿದರೆ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ, ಯಾವ ಸಿನಿಮಾಗೆ ಹೆಚ್ಚು ಬೇಡಿಕೆ ಇದೆ ಎಂಬುದು ಸ್ಪಷ್ಟವಾಗಿದೆ. ‘ಟಾಕ್ಸಿಕ್’ ಟೀಸರ್ ಜನವರಿ 8ರಂದು ರಿಲೀಸ್…

Read More

ನಮ್ಮ ಸೋಲಿಗೆ ಕೋಚ್ ಕಾರಣ: ಬಂಡಾಯವೆದ್ದ ಪಾಕ್ ಆಟಗಾರರು – Kannada News | Pakistan players revolted against Head Coach Mike Hesson

T20 World Cup 2026: ಟಿ20 ವಿಶ್ವಕಪ್​ನಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್​ನಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಈ ಅಲ್ಲೋಲ ಕಲ್ಲೋಲದ ನಡುವೆ ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಪ್ರತಿ ಆಟಗಾರರಿಗೆ 50 ಲಕ್ಷ ರೂ. (PKR) ದಂಡ ವಿಧಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ಇದರ ನಡುವೆ ಸೋಲಿಗೆ ನಾವಲ್ಲ ಕಾರಣ, ಕೋಚ್ ಮೈಕ್ ಹೆಸ್ಸನ್ ಎಂದು ಪಾಕ್ ಆಟಗಾರರು ಬಂಡಾವೆದ್ದಿದ್ದಾರೆ. ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ತಂಡ ಹೊರಬಿದ್ದ ನಂತರ, ಆಟಗಾರರು ಮುಖ್ಯ…

Read More

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಖತರ್ನಾಕ್ ಮಹಿಳೆಯರು! – Kannada News | Viral Video Women stole 14 Lakh Rs Worth Gold Jewelry From Kalyan Jewellers In Prayagraj

ಪ್ರಯಾಗ್‌ರಾಜ್, ಜನವರಿ 6: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ಅಂಗಡಿಯಿಂದ ಮೂವರು ಮಹಿಳೆಯರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಈ ಕಳ್ಳತನವು 14 ನಿಮಿಷಗಳ ಕಾಲ ನಡೆಯಿತು. ಆ ಮಹಿಳೆಯರು ಯಾರಿಗೂ ಗೊತ್ತಾಗದಂತೆಯೇ ಕಳ್ಳತನ ಮಾಡಿದ್ದರು. ಆದರೆ, ಸಿಸಿಟಿವಿಯಲ್ಲಿ ಅವರ ಕಳ್ಳತನ ಸೆರೆಯಾಗಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿ ಗಾಜಿನ ಕೌಂಟರ್ ಎದುರು ಕುಳಿತಿದ್ದ ಮೂವರು ಮಹಿಳೆಯರು ಚಿನ್ನದ…

Read More

ಗ್ಯಾಸ್ ಸಮಸ್ಯೆಯಿಂದಾಗಿ ಸ್ವಾವಲಂಬನೆ ಹೆಜ್ಜೆ: ವಿನೂತನ ತಂತ್ರಜ್ಞಾನದ ವಿದ್ಯುತ್ ಸ್ಟೌ ಪರಿಚಯಿಸಿದ ಜೋಶಿ

ನವದೆಹಲಿ, (ಏಪ್ರಿಲ್ 10): ಗ್ಯಾಸ್ ಸ್ಟೌ ಮಾದರಿಯಲ್ಲೇ ಜ್ವಾಲೆ ಹರಡುವ “ವಿದ್ಯುತ್ ಸ್ಟೌ” (Electric Stove)  ಅನ್ನು ಪರಿಚಯಿಸಿ ಅದರ ಉತ್ಪಾದನೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುವ ಚಿಂತನೆ ಸಹ ನಡೆಸುತ್ತಿದ್ದು, ಎಎಲ್​ಪಿಜೆ ಗ್ಯಾಸ್ (LPG) ಪರ್ಯಾಯವಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ಸಲಹೆಯಂತೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ 50 ಲಕ್ಷ PNG ಸಂಪರ್ಕಕ್ಕೆ ಪ್ರಾಶಸ್ತ್ಯ ನೀಡಿದೆ. ಈ ಜ್ವಾಲೆ ಉತ್ಪಾದಿಸುವ ವಿದ್ಯುತ್ ಸ್ಟೌ ಪ್ರದರ್ಶಿಸಿ, ಗೃಹ…

Read More

ದೆಹಲಿಯಲ್ಲಿ ಟೇಕ್ ಆಫ್ ವೇಳೆ ಸ್ವಿಸ್ ಏರ್ ವಿಮಾನದ ಎಂಜಿನ್ ವಿಫಲ, ಕಾಣಿಸಿಕೊಂಡ ಬೆಂಕಿ, ಆರು ಪ್ರಯಾಣಿಕರಿಗೆ ಗಾಯ – Kannada News | Engine Failure Sparks Fire on Swiss Air Flight at Delhi Airport

ನವದೆಹಲಿ, ಏಪ್ರಿಲ್ 26: ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ಸಂಭವಿಸಬಹುದಾಗಿದ್ದ ಭಾರಿ ವಿಮಾನ(Flight) ದುರಂತವೊಂದು ಪೈಲಟ್‌ಗಳ ಸಮಯಪ್ರಜ್ಞೆಯಿಂದ ತಪ್ಪಿದೆ. ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ದೆಹಲಿಯಿಂದ ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ (LX147) ವಿಮಾನವು ಭಾನುವಾರ ಮುಂಜಾನೆ ರನ್‌ವೇಯಲ್ಲಿ ಓಡುತ್ತಿದ್ದಾಗ ತಾಂತ್ರಿಕ ಸಂಕಷ್ಟಕ್ಕೆ ಸಿಲುಕಿತು. ಎಂಜಿನ್‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ವಿಮಾನವು…

Read More

ಕೊಪ್ಪಳ: ಭಾನಾಪೂರ ಬಳಿ ಭೀಕರ ಅಪಘಾತ, ಮೂವರು ಸ್ಥಳದಲ್ಲೇ ಸಾವು – Kannada News | Three Dead and Six Injured as Truck Crosses Divider and Hits Omni on NH 63 Near Bhanapur in Koppal

ಕೊಪ್ಪಳ, ಜೂನ್ 27: ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಶನಿವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ನಿವಾಸಿಗಳು ಓಮಿನಿ ವಾಹನದಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನವೊಂದು ನಿಯಂತ್ರಣ ತಪ್ಪಿ, ಏಕಾಏಕಿ ಡಿವೈಡರ್ ದಾಟಿ ಬಂದು ಎದುರಿನಿಂದ ಬರುತ್ತಿದ್ದ ಓಮಿನಿ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಓಮಿನಿ…

Read More

ದರೋಡೆ ಪ್ರಕರಣ: ಇನ್​​ಸ್ಪೆಕ್ಟರ್​​ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನ; ಸವಾಲಾದ ವಿಚಾರಣೆ – Kannada News | Bengaluru Cop Robbery Case: Investigating Inspector Mahesh Kanakagiri Poses Huge Challenge as Accused Trade Blames

ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನImage Credit source: Tv9 Kannada ಬೆಂಗಳೂರು, ಜೂನ್​​ 21: ಕೇರಳ ಮೂಲದ ಉದ್ಯಮಿಯೊಬ್ಬರಿಂದ 20 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್​​ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್​​ಸ್ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳಾಗಿದ್ದು, ಅವರನ್ನು ಕಸ್ಟಡಿಗೆ ಪಡೆದು ತೀವ್ರ…

Read More