ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಈ ಸಿಂಪಲ್ ಮನೆಮದ್ದುಗಳನ್ನು ಪ್ರಯತ್ನಿಸಿ – Kannada News | This home remedy is effective in keeping flies away from the home
ಬಹುತೇಕ ಹೆಚ್ಚಿನ ಮನೆಗಳಲ್ಲಿ ಸೊಳ್ಳೆಗಳಂತೆ ನೊಣಗಳ (Flies) ಕಾಟವೂ ಇದ್ದೇ ಇರುತ್ತದೆ. ಕೊಳಕು ಸ್ಥಳಗಳಲ್ಲಿ ವಾಸಿಸುವ ಇವು ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿರುವ ಪಾತ್ರೆಗಳು, ಆಹಾರದ ಮೇಲೂ ಸಹ ಕುಳಿತುಬಿಡುತ್ತವೆ. ಈ ಮೂಲಕ ನಾನಾ ರೀತಿಯ ರೋಗಗಳನ್ನು ಸಹ ಹರಡುತ್ತವೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ನೊಣಗಳನ್ನು ತೊಡೆದುಹಾಕಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಕೀಟ, ನೊಣ ನಿವಾರಕಗಳನ್ನು ಬಳಸುತ್ತಾರೆ. ಈ ಕೆಮಿಕಲ್ ಉತ್ಪನ್ನಗಳನ್ನು ಬಳಸುವ ಬದಲು ಕೆಲವೊಂದು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ನೊಣಗಳನ್ನು ಓಡಿಸಬಹುದು. ಆ ಮನೆಮದ್ದುಗಳು…