ಬೆಂಗಳೂರಿನ ಚಿಣ್ಣರಿಗೆ ಹೊಸ ಹಾಟ್‌ಸ್ಪಾಟ್! ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್ – Kannada News | Bengaluru’s Cubbon Park Bal Bhavan Gets Rs.1.5 Cr Olympic Level Skating Park by May
ಬ್ಬನ್ ಪಾರ್ಕ್ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್ ಬೆಂಗಳೂರು, ಜನವರಿ 16: ನೈಸರ್ಗಿಕ ಸೌಂದರ್ಯದಿಂದ ಮನಸೂರೆಗೊಳ್ಳುವ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಬಾಲಭವನವು ಚಿಣ್ಣರು ಹಾಗೂ ಯುವಕರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ವಾರಾಂತ್ಯಗಳಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಭೇಟಿ ನೀಡುವ ಈ ಸ್ಥಳದಲ್ಲಿ ಈಗ ಮತ್ತೊಂದು ಪ್ರಮುಖ ಆಕರ್ಷಣೆ ಸೇರ್ಪಡೆಯಾಗಲು ಸಿದ್ಧವಾಗಿದೆ. ಬಾಲಭವನದಲ್ಲಿ ಅತಿ ಶೀಘ್ರದಲ್ಲೇ ಆಧುನಿಕ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ. ಒಂದೂವರೆ ಕೋಟಿ ವೆಚ್ಚದ ಪ್ರಾಜೆಕ್ಟ್ ಬಾಲಭವನ ಸೊಸೈಟಿ ಹಾಗೂ ಯುವಜನ ಸಬಲೀಕರಣ ಮತ್ತು…