ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನ ಈ ಮಾರ್ಗದಲ್ಲಿ 2 ರೈಲುಗಳು ರದ್ದು, 6 ರೈಲುಗಳ ಸಂಚಾರ ಭಾಗಶಃ ರದ್ದು – Kannada News
ಬೆಂಗಳೂರು, ಜೂನ್ 4: ಬೆಂಗಳೂರಿನ (Bengaluru) ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವೆ ಹಳಿಗಳ ಇಂಜಿನಿಯರಿಂಗ್ ಕಾಮಗಾರಿ (ಲೈನ್ ಬ್ಲಾಕ್) ಹಮ್ಮಿಕೊಳ್ಳಲಾಗಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈಋತ್ಯ ರೈಲ್ವೆ (SWR) ತಿಳಿಸಿದೆ. ಜೂನ್ 7 ಮತ್ತು ಜೂನ್ 8 ರಂದು ಎರಡು ಪ್ರಮುಖ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, 6 ಮೆಮು (MEMU) ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಕಚೇರಿ ಹಾಗೂ…