Headlines

ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ – Kannada News | PM Modi and Donald Trump hold 40 minute call discuss on Hormuz crisis

ನವದೆಹಲಿ, ಏಪ್ರಿಲ್ 14: ಪ್ರಧಾನಿ ಮೋದಿಗೆ (PM Narendra Modi) ಇಂದು ಸಂಜೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಾರ್ಮುಜ್ ಜಲಸಂಧಿಯ ದಿಗ್ಬಂಧನ, ಇರಾನ್ ಮೇಲಿನ ದಾಳಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ 40 ನಿಮಿಷ ಮಾತುಕತೆ ನಡೆಸಿದ್ದಾರೆ. ಈ ವರ್ಷ ಇಬ್ಬರು ನಾಯಕರ ನಡುವಿನ ಮೂರನೇ ಕರೆ ಇದಾಗಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ವಿಷಯದ ಕುರಿತು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚಿಸಿದ್ದಾರೆ ಎಂದು ಅಮೆರಿಕದ ರಾಯಭಾರ…

Read More

ಸರ್ಕಾರದಿಂದ ನೇರ ಕಾನೂನು ಸಲಹೆ; ವಾಟ್ಸಾಪ್​ನಲ್ಲಿ ಉಚಿತ ನ್ಯಾಯಸೇತು ಚಾಟ್​ಬೋಟ್ ಸೇವೆ – Kannada News | Get free legal advice, assistance from govt supported Nyaya Setu chatbot on WhatsApp

ನವದೆಹಲಿ, ಜನವರಿ 5: ಕಾರ್ಪೊರೇಟ್, ಅಪರಾಧ, ಕುಟುಂಬ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಕಾನೂನು ವ್ಯಾಜ್ಯಗಳಿದ್ದಲ್ಲಿ ವಾಟ್ಸಾಪ್​ನಲ್ಲಿ ಉಚಿತವಾಗಿ ತಜ್ಞರ ಸಲಹೆ (Free legal advice) ಪಡೆಯಬಹುದು. ಇಂಥದ್ದೊಂದು ಸೇವೆಯನ್ನು ಸರ್ಕಾರವೇ ಆರಂಭಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು (Ministry of law and justice) ವಾಟ್ಸಾಪ್​ನಲ್ಲಿ ನ್ಯಾಯ ಸೇತು (Nyaya Setu) ಎನ್ನುವ ಕಾನೂನು ಸೇವೆಯನ್ನು 2026ರ ಜನವರಿ 1ರಂದು ಆರಂಭಿಸಿದೆ. ಯಾರು ಬೇಕಾದರೂ ಇದರಿಂದ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಸಾಧ್ಯ. ಯಾವ ರೀತಿಯ ಕಾನೂನು…

Read More

ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!

ಚಿಕ್ಕಬಳ್ಳಾಪುರ, ಮೇ 11: ಅನಿಲ್ ಎಂಬ ರೈತರ ಚಿಕ್ಕಬಳ್ಳಾಪುರ ಜಿಲ್ಲೆಯ ಅಡ್ಡಗಲ್ ಗ್ರಾಮದಲ್ಲಿ ಸೇಬು ಬೆಳೆದು ಯಶಸ್ಸಿನ ಕಥೆ ಬರೆದಿದ್ದಾರೆ. ಸಾಮಾನ್ಯವಾಗಿ ತಂಪಾದ ವಾತಾವರಣದಲ್ಲಿ ಬೆಳೆಯುವ ಸೇಬನ್ನು, ಬಿಸಿಲಿನ ವಾತಾವರಣವಿರುವ ಚಿಕ್ಕಬಳ್ಳಾಪುರದಲ್ಲಿ ಬೆಳೆಸುವುದು ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಅನಿಲ್ ಅವರು, ಹೊಸ ಪ್ರಯತ್ನವಾಗಿ ಸೇಬು ಕೃಷಿಯತ್ತ ಆಸಕ್ತಿ ವಹಿಸಿದರು. ಗುಬ್ಬಿಯ ಶೇಷಣ್ಣ ಅವರ ಮಾರ್ಗದರ್ಶನ ಪಡೆದ ಅನಿಲ್, ಅವರ ಸಲಹೆಯಂತೆ ಸಸಿಗಳನ್ನು ನೆಟ್ಟರು. ಇದು ಅವರ ಮೊದಲ ಬೆಳೆಯಾಗಿದ್ದು, ಒಂದು ಎಕರೆಯಲ್ಲಿ ಸುಮಾರು…

Read More

Gold Rates: ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 15: ಇರಾನ್ ಯುದ್ಧದ ಪರಿಣಾಮವೆಂಬಂತೆ ಚಿನ್ನದ ಬೆಲೆ (Gold Rates) ಸತತವಾಗಿ ಇಳಿಯುತ್ತಿದೆ. ಬೆಳ್ಳಿ ಬೆಲೆಯೂ ತಗ್ಗುತ್ತಿದೆ. ಚಿನ್ನದ ಬೆಲೆ ಕಳೆದ ಈ ತಿಂಗಳು ಒಂದು ಗ್ರಾಮ್​​ಗೆ 1,230 ರೂನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 15,865 ರೂನಿಂದ 14,635 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 16,000 ರೂ ಗಡಿಯೊಳಗೆ ಬಂದಿದೆ. ಮಾರ್ಚ್ ಆರಂಭದಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 315 ರೂ ಇತ್ತು. ಎರಡು ವಾರದಲ್ಲಿ ಬೆಲೆ ಗ್ರಾಮ್​​ಗೆ ಬರೋಬ್ಬರಿ 40…

Read More

ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಮತ್ತೊಂದು ಲೆಕ್ಕ; ವರ್ಕೌಟ್ ಶುರು ಮಾಡಿದ ಗಿಲ್ಲಿ ನಟ

ಗಿಲ್ಲಿ ನಟ ಅವರು (Gilli Nata) ‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆದ್ದ ಬಳಿಕ ಅಪಾರ ಜನಪ್ರಿಯತೆ ಪಡೆದುಕೊಂಡರು. ಅವರಿಗೆ ಇನ್​​ಸ್ಟಾಗ್ರಾಮ್ ಅಲ್ಲಿ 2.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಬಿಗ್ ಬಾಸ್​​ಗೆ ಬಂದು ಸ್ಪರ್ಧಿಯೊಬ್ಬರು ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು ಇದೇ ಮೊದಲು. ಈಗ ಗಿಲ್ಲಿ ನಟ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ. ಏಕೆಂದರೆ ಅವರು ಜಿಮ್​​ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ಗಿಲ್ಲಿ ನಟ ಅವರು ತಮ್ಮ ಫಿಟ್ನೆಸ್​​ಗೆ…

Read More

ತಮಿಳುನಾಡು ರಾಜಕೀಯದಲ್ಲಿ ಸಿಎಂ ಆದ ಸೆಲೆಬ್ರಿಟಿಗಳಿವರು; ವಿಜಯ್​ಗೂ ಸಿಗುತ್ತಾ ಕುರ್ಚಿ?

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಕ್ಸಿಟ್ ಪೋಲ್‌ಗಳ ಪ್ರಕಾರ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಈ ಬಾರಿ ನಿರ್ಣಾಯಕ ಪಾತ್ರ ವಹಿಸಲಿದೆ. ಡಿಎಂಕೆ ಮತ್ತು ಎಐಎಡಿಎಂಕ ನಡುವಿನ ತೀವ್ರ ಪೈಪೋಟಿಯಲ್ಲಿ ವಿಜಯ್ ಕಿಂಗ್ ಮೇಕರ್ ಆಗುವ ಅಥವಾ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸವೇ ಇದೆ. ಈ ಹಿಂದೆ ನಟ ಮತ್ತು ನಿರ್ದೇಶಕರಾಗಿದ್ದ ಎಂ.ಜಿ….

Read More

ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನೋತ್ಸವ: ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು

ತುಮಕೂರು, ಏಪ್ರಿಲ್​​ 01: ನಡೆದಾಡುವ ದೇವರು ಎಂದು ಪ್ರಸಿದ್ಧರಾದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವವನ್ನು ಇಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಗದ್ದುಗೆಯನ್ನು ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಕ್ತಾದಿಗಳು ಆಗಮಿಸಿ ಗದ್ದುಗೆಯ ದರ್ಶನ ಪಡೆಯುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮಠದ ಆವರಣದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಕಾರ್ಯಕ್ರಮವನ್ನು…

Read More

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಿಡುಗಡೆ ಮಾಡಿದ ‘ಮೃತ್ಯುದೇವತೆ’ ಸಿನಿಮಾ ಹಾಡು – Kannada News | Mruthyu Devathe Kannada movie new song released by Om Sai Prakash

ವಿನಯಾ ಪ್ರಸಾದ್, ಸಾರಿಕಾ ರಾವ್, ಡಯಾನಾ, ಹಿಮಶ್ರೀ, ಮಾಹೀನ್, ನವೀನ್ ಮಹದೇವ್, ಸೂರ್ಯ, ಪವನ್ ಶೆಟ್ಟಿ, ವರ್ಷಿತಾ ಮುಂತಾದವರು ‘ಮೃತ್ಯುದೇವತೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹಾಡನ್ನು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (Om Sai Prakash) ಅವರಿಂದ ಬಿಡುಗಡೆ ಮಾಡಿಸಲಾಯಿತು. ಸಮಾಜದಲ್ಲಿ ಪ್ರತಿದಿನ ಹೆಣ್ಣು ಮಕ್ಕಳ ಮೇಲೆ ಅನ್ಯಾಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಟ್ರ್ಯಾಪ್​ಗೆ ಒಳಗಾದ 3 ಹೆಣ್ಣು ಮಕ್ಕಳು ಹೇಗೆ ಅದರಿಂದ ಹೊರಗೆ ಬರುತ್ತಾರೆ ಎಂಬ ಮಹಿಳಾಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್…

Read More

ರೆಡಿನಾ… ಮೊದಲ ಓವರ್​ ನಂದೇ! RCB ಫ್ಯಾನ್ಸ್​ಗೆ ಶಾಕ್ ನೀಡಿದ ಕೊಹ್ಲಿ – Kannada News | Virat kohli sparks laughter with bowling tease in dharamshala

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 254 ರನ್​ ಕಲೆಹಾಕಿದ್ದರು. ಅದರಂತೆ 255 ರನ್​ಗಳ ಗುರಿ ಬೆನ್ನತ್ತಲು ಬಂದ ಗುಜರಾತ್ ಟೈಟಾನ್ಸ್ ಬ್ಯಾಟರ್​ಗಳನ್ನು ನೋಡಿ ವಿರಾಟ್ ಕೊಹ್ಲಿ ಚೆಂಡನ್ನು ಕೈಗೆತ್ತಿ ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್​ಗೆ ಕ್ಯಾಪ್ ನೀಡಿ ಮೊದಲ ಓವರ್​ ನಾನೇ…

Read More

‘ಮ್ಯಾಂಗೊ ಪಚ್ಚ’ ಸಿನಿಮಾ ಬಗ್ಗೆ ನಟ ಸುದೀಪ್ ಮಾತು: ವಿಡಿಯೋ – Kannada News

ಸುದೀಪ್ (Sudeep) ಅವರ ಪತ್ನಿ ಮತ್ತು ಪುತ್ರಿ ನಿರ್ಮಾಣ ಮಾಡಿರುವ, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜಯ್ ನಟಿಸಿರುವ ‘ಮ್ಯಾಂಗೊ ಪಚ್ಚ’ ಸಿನಿಮಾ ನಿನ್ನೆ (ಜೂನ್ 5) ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆ ಬಳಿಕ ಸುದೀಪ್ ಅವರು ಪತ್ರಿಕಾಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾತನಾಡಿದರು. ಈ ವೇಳೆ ಸಿನಿಮಾ ಬಗ್ಗೆ, ಸಿನಿಮಾ ಬಿಡುಗಡೆ ಆದ ಬಳಿಕ ನಡೆದ ಕೆಲವು ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ಸಿನಿಮಾನಲ್ಲಿ ತಮ್ಮ ಸೋದರಳಿಯನ ನಟನೆ, ಸಿನಿಮಾದ ಮೇಕಿಂಗ್ ಇನ್ನೂ ಕೆಲ ವಿಷಯಗಳ…

Read More