ಧಾರುಣವಾಗಿ ಕುಸಿದ ‘ರಾಜಾ ಸಾಬ್’ ಗಳಿಕೆ, ‘ಆದಿಪುರುಷ್’, ‘ಸಾಹೋ’ಗಿಂತಲೂ ಕಳಪೆ – Kannada News | Prabhas starrer The Raja Saab movie collects only 4 crore on Box office
ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 09ರಂದು ಬಿಡುಗಡೆ ಆಗಿತ್ತು. ಪ್ರಭಾಸ್ ಅವರ ಈ ಹಿಂದಿನ ಸಿನಿಮಾಗಳ ರೀತಿಯೇ ಬಿಡುಗಡೆ ಆದ ಮೊದಲ ದಿನ ಭಾರಿ ಗಳಿಕೆಯನ್ನು ಸಿನಿಮಾ ಮಾಡಿತ್ತು. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸುಮಾರು 112 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಿನಿಮಾ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನದಿಂದಲೇ ಸಿನಿಮಾದ ಉರುಳುವಿಕೆ ಪ್ರಾರಂಭವಾಯ್ತು. ಸಿನಿಮಾ ನೋಡಿದವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳ ಕ್ರಿಂಜ್ ಆದ ಕತೆ, ದೃಶ್ಯಗಳನ್ನು ಸಿನಿಮಾ…