ಸತತವಾಗಿ ಕುಸಿಯುತ್ತಿದ್ದ ಷೇರುಪೇಟೆ ದಿಢೀರನೇ ಚೇತರಿಕೆ; ಮಾರುಕಟ್ಟೆ ತಿರುಗಿ ನಿಲ್ಲಲು ಏನು ಕಾರಣ? – Kannada News | Stock Market updates on Jan 12th, sensex and nifty gain big after successive losses
ನವದೆಹಲಿ, ಜನವರಿ 12: ಇವತ್ತು ಬೆಳಗ್ಗೆ ಟ್ರೇಡಿಂಗ್ ಅವಧಿಯಲ್ಲಿ ಷೇರು ಮಾರುಕಟ್ಟೆ (Stock Market) ಕಳೆಗುಂದಿತ್ತು. ಸತತ ಐದು ಸೆಷನ್ಸ್ ಕುಸಿದಿದ್ದ ಮಾರುಕಟ್ಟೆ, ಇವತ್ತು ಆರನೇ ಸೆಷನ್ನಲ್ಲೂ ಭರ್ಜರಿ ಇಳಿಕೆಯ ಹಾದಿಯಲ್ಲಿತ್ತು. ಮಾಧ್ಯಮಗಳಲ್ಲೂ ಕೂಡ ಸತತ ಆರು ದಿನ ಷೇರು ಮಾರುಕಟ್ಟೆ ಕುಸಿದಿದೆ ಎನ್ನುವಂತಹ ಸುದ್ದಿ ಪ್ರಕಟವಾಯಿತು. ಆದರೆ, ನೋಡನೋಡುತ್ತಿದ್ದಂತೆಯೇ ಮಾರುಕಟ್ಟೆ ಹಸಿರುಬಣ್ಣಕ್ಕೆ ತಿರುಗಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಪಾಸಿಟಿವ್ ಆಗಿವೆ. ಸೆನ್ಸೆಕ್ಸ್ ಇವತ್ತು ಟ್ರೇಡಿಂಗ್ ಕೊನೆಯಲ್ಲಿ 83,878 ಅಂಕಗಳಲ್ಲಿ ಅಂತ್ಯಗೊಂಡಿತು. 302 ಅಂಕ…