Headlines

ಇರಾನ್ ರಾಜಧಾನಿ ಟೆಹರಾನ್​ ಮೇಲೆ ಇಸ್ರೇಲ್​​ನಿಂದ ಕ್ಷಿಪ್ಪಣಿ ದಾಳಿ: – Kannada News | ​Israel Strikes Tehran: Missile Attacks Escalate Iran Israel Conflict

ಇರಾನ್ ರಾಜಧಾನಿ ಟೆಹರಾನ್​ ನಗರದ ಮೇಲೆ ದಾಳಿImage Credit source: Google ಟೆಹರಾನ್​, ಫೆಬ್ರವರಿ 28: ಇರಾನ್​​ ಮತ್ತು ಇಸ್ರೇಲ್​​ ನಡುವೆ ಯುದ್ಧದ ಕಾರ್ಮೋಡ ಹೆಚ್ಚಿದ್ದು, ಇರಾನ್ ರಾಜಧಾನಿ ಟೆಹರಾನ್​ ನಗರದ ಮೇಲೆ ಇಸ್ರೇಲ್​​ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭವನ ಗುರಿಯಾಗಿಸಿ ಈ ಅಟ್ಯಾಕ್​​ ನಡೆದಿದ್ದು, ಟೆಹರಾನ್​ನ ಹಲವೆಡೆ ಭಾರಿ ಸದ್ದಿನೊಂದಿಗೆ ಸರಣಿ ಸ್ಫೋಟ ಸಂಭವಿಸಿವೆ. ಕ್ಷಿಪಣಿ ದಾಳಿ, ಸರಣಿ ಸ್ಫೋಟದಿಂದ ಇರಾನ್…

Read More

ದುಬೈನಿಂದ ಜೀವಂತ ಮರಳಿದ್ದೇ ಪವಾಡ: ಭಯಾನಕ ಅನುಭವ ಬಿಚ್ಚಿಟ್ಟ ಎಂಎಲ್ಸಿ ಭೋಜೇಗೌಡ – Kannada News | War in the Middle East: MLC Bhojegowda Reveals Harrowing Experience in Dubai

ಬೆಂಗಳೂರು, ಮಾರ್ಚ್​ 03: ದುಬೈನಿಂದ ಭಾರತಕ್ಕೆ ವಾಪಸ್ ಆಗಿರುವ ಎಂಎಲ್ಸಿ ಭೋಜೇಗೌಡರು, ಇಸ್ರೇಲ್-ಇರಾನ್ ಸಂಘರ್ಷದ ಕಾರಣದಿಂದ ಉಂಟಾದ ಆತಂಕಕಾರಿ ಪರಿಸ್ಥಿತಿಯ ಬಗ್ಗೆ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಜೀವಂತವಾಗಿ ಭಾರತಕ್ಕೆ ಮರಳುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಹೋಟೆಲ್‌ಗಳಲ್ಲಿ ಉಳಿಯಲು ಭಯದ ವಾತಾವರಣ ಇತ್ತು. ಪ್ರತಿಯೊಬ್ಬರೂ ಆತಂಕದಲ್ಲಿದ್ದರು. ವಿಮಾನ ಸುರಕ್ಷಿತವಾಗಿ ನಮ್ಮ ನೆಲದಲ್ಲಿ ಲ್ಯಾಂಡ್ ಆದಾಗ ಎಲ್ಲ ಪ್ರಯಾಣಿಕರೂ ಚಪ್ಪಾಳೆ ತಟ್ಟಿ ತಮ್ಮ ಸಂತಸ ವ್ಯಕ್ತಪಡಿಸಿರೋದಾಗಿ ತಿಳಿಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: 2023ರಲ್ಲಿ ಕೂಡ ಈ ವಿಮಾನ ಪತನಗೊಂಡಿತ್ತು – Kannada News | Ajit Pawar Plane Crash: Learjet’s Dark History and Flight Safety Concerns Emerge

ನಾಗ್ಪುರ, ಜನವರಿ 28: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಇಂದು ಬೆಳಗ್ಗೆ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಅದೇ ಖಾಸಗಿ ವಿಮಾನವು ಸೆಪ್ಟೆಂಬರ್ 2023 ರಲ್ಲಿ ಕೂಡ ಅಪಘಾತಕ್ಕೀಡಾಗಿತ್ತು ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ, ವಿಮಾನದ ತಾಂತ್ರಿಕ ಸುರಕ್ಷತೆ ಮತ್ತು ನಿರ್ವಹಣಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ , ಲಿಯರ್‌ಜೆಟ್ 45 ಎಂಬ ಖಾಸಗಿ…

Read More

‘ನಮ್ಮ ಪರಮಾಣು ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’: ಇರಾನ್ ಅಧ್ಯಕ್ಷರ ಗುಡುಗು – Kannada News | No one can deny Iran its nuclear rights, says president Masoud Pezeshkian

ಟೆಹ್ರಾನ್, ಏಪ್ರಿಲ್ 19: ಇರಾನ್‌ನ ಪರಮಾಣು ಕಾರ್ಯಕ್ರಮದ ಸುತ್ತಲಿನ ಅಂತರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. “ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಅಮೆರಿಕ ಯಾರು?” ಎಂದು ಪ್ರಶ್ನಿಸುವ ಮೂಲಕ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಭಾನುವಾರ (ಏಪ್ರಿಲ್ 19) ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿನ ಮಾತುಕತೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ತನ್ನ ಪರಮಾಣು ಹಕ್ಕುಗಳನ್ನು ತ್ಯಜಿಸಬೇಕು ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಕಠಿಣವಾಗಿ…

Read More

ಕೋಟ್ಯಂತರ ಅಕ್ರಮದ ನಡುವೆಯೇ 10 ದಿನಗಳಲ್ಲಿ ನಗರ ಸಭೆ ಜೆಇ ಅಮಾನತು ವಾಪಸ್! ಅನುಮಾನಕ್ಕೆ ಎಡೆ ಮಾಡಿ‌ಕೊಟ್ಟ ಆದೇಶ!

ಕೊಪ್ಪಳ, ಮಾರ್ಚ್​ 27: ಅಕ್ರಮ ಹಣ ವ್ಯವಹಾರ ನಡೆಸಿದ ಆರೋಪದ ಹಿನ್ನೆಲೆ ಅಮಾನತುಗೊಂಡಿದ್ದ ಕೊಪ್ಪಳ (Koppal) ನಗರಸಭೆಯ ಜೂನಿಯರ್ ಇಂಜಿನಿಯರ್ ಸೋಮಲಿಂಗಪ್ಪ ಪ್ರಕರಣದಲ್ಲಿ ಹೊಸ ತಿರುವು ಎದುರಾಗಿದೆ. ಪೌರಾಡಳಿತ ಇಲಾಖೆ ಕೇವಲ 10 ದಿನಗಳಲ್ಲೇ ಅಮಾನತು ಆದೇಶವನ್ನು ಹಿಂಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನೂರಾರು ಕಾಮಗಾರಿಗಳಲ್ಲಿ ಲೋಪ ಸೋಮಲಿಂಗಪ್ಪ ವಿರುದ್ಧ ಸುಮಾರು 10 ಕೋಟಿ ರೂಪಾಯಿ ಅಕ್ರಮ ಆರೋಪ ಕೇಳಿಬಂದಿತ್ತು. 2023-24 ಹಾಗೂ 2024-25ನೇ ಸಾಲಿನ ಸುಮಾರು 336 ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿತ್ತು….

Read More

ಬೆಂಗಳೂರಿನ ಈ ಊರಿನಲ್ಲಿ ನಡೆಯುತ್ತೇ ಅಪರೂಪದ ವಜ್ರಾಭರಣಗಳ ಜಾತ್ರೆ – Kannada News | Kempegowda’s Heritage: Devanahalli’s Grand Kote Venugopala Swamy Festival and Rare VajrabharaNa

ಬೆಂಗಳೂರು, ಫೆ.3: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅದ್ದೂರಿ ರಥೋತ್ಸವ (Devanahalli Ratha Utsav) ಮತ್ತು ಅಪರೂಪದ ವಜ್ರಾಭರಣಗಳ ಜಾತ್ರೆ. ದೇವನಹಳ್ಳಿ ಎಂದರೆ ಕೇವಲ ವಿಮಾನ ನಿಲ್ದಾಣ ಮಾತ್ರವಲ್ಲ, ಶತಮಾನಗಳ ಇತಿಹಾಸವಿರುವ ರಾಜ-ಮಹಾರಾಜರ ಕಾಲದ ವೈಭವಕ್ಕೂ ಸಾಕ್ಷಿ. ನಾಡಪ್ರಭು ಕೆಂಪೇಗೌಡರ ಪೂರ್ವಿಕರು ಈ ದೇವಾಲಯಕ್ಕೆ ಬೆಲೆಕಟ್ಟಲಾಗದ ವಜ್ರಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದರು. ರಾಜರ ಕಾಲ ಮುಗಿದ ನಂತರ ಈ ಆಭರಣಗಳು ಸರ್ಕಾರದ ಖಜಾನೆ ಸೇರಿವೆ. ವರ್ಷಕ್ಕೊಮ್ಮೆ ನಡೆಯುವ ಈ…

Read More

‘ಟಾಕ್ಸಿಕ್’ ಸಿನಿಮಾ ಪದೇ ಪದೇ ಪೋಸ್ಟ್‌ಪೋನ್; ಅಭಿಮಾನಿಗಳ ಬೇಸರದ ಬಗ್ಗೆ ಯಶ್ ಮಾತು – Kannada News | Yash Explains ‘Toxic’ Movie Delay: Global Strategy and Fan Disappointment

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಪದೇ ಪದೇ ಮುಂದೂಡಲ್ಪಡುತ್ತಿದೆ. ಇದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಜೂನ್ 4ಕ್ಕೆ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ, ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೊಮ್ಮೆ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ. ಈ ವಿಳಂಬದ ಬಗ್ಗೆ ನಟ ಹಾಗೂ ನಿರ್ಮಾಪಕ ಯಶ್ ಅವರು ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದು, ಭಾರತೀಯ ಪ್ರೇಕ್ಷಕರು ಮತ್ತು ಅಭಿಮಾನಿಗಳ ಬೇಸರವನ್ನು ಒಪ್ಪಿಕೊಂಡಿದ್ದಾರೆ….

Read More

ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​: ಹೂವಿನ ವ್ಯಾಪಾರ ಬಲು ಜೋರು

ಬೆಂಗಳೂರು, ಮಾರ್ಚ್​​ 26: ಶ್ರೀರಾಮ ನವಮಿ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ. ಹಬ್ಬದ ಆಚರಣೆಗಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಹೂವುಗಳನ್ನು ಖರೀದಿಸಲು ಆಗಮಿಸುತ್ತಿದ್ದು, ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗವಿಲ್ಲದಷ್ಟು ಜನಸಂದಣಿ ಉಂಟಾಗಿದೆ. ಶ್ರೀರಾಮ ನವಮಿ ಪ್ರಯುಕ್ತ ಕೆ.ಆರ್. ಮಾರುಕಟ್ಟೆ ಸಂಪೂರ್ಣ ಜನಜಂಗುಳಿಯಿಂದ ಕೂಡಿದ್ದು, ಹೂವಿನ ವ್ಯಾಪಾರ ಭರಾಟೆ ಜೋರಾಗಿದೆ. ನಗರದ ಜನರು ಹಬ್ಬಕ್ಕೆ ಬೇಕಾದ ಹೂವುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಈ ವರ್ಷ ಶ್ರೀರಾಮ ನವಮಿಗಾಗಿ ಹೂವಿನ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ವಿಪರೀತ ಜನಸಂದಣಿಗೆ…

Read More

ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ – Kannada News

ಕೊಪ್ಪಳ, ಜೂನ್ 12: ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿದೆ. ಪ್ರಸ್ತುತ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣವಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಜಲಾಶಯದಲ್ಲಿ 24 ಟಿಎಂಸಿ ನೀರಿತ್ತು. ಈ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ, ಮಲೆನಾಡು ಭಾಗದಲ್ಲಿ ಮಳೆಯ ಕೊರತೆಯಿಂದ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಕೇವಲ…

Read More

ಸೀಸನ್​ನ ಕೊನೆಯ ಪಂಚಾಯ್ತಿಯಲ್ಲಿ ಧ್ರುವಂತ್-ಅಶ್ವಿನಿಗೆ ಮರೆಯಲಾಗದ ಉಡುಗೊರೆ ಕೊಟ್ಟ ಕಿಚ್ಚ – Kannada News | Bigg Boss Kannada 12: Sudeep praises Ashwini and Dhruvanth’s game

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಬಂದಿದೆ. ಮುಂದಿನ ಭಾನುವಾರ ಫಿನಾಲೆ ನಡೆದು ವಿನ್ನರ್ ಘೋಷಣೆ ಆಗಲಿದೆ. ಹಾಗಾಗಿ ಇಂದು (ಶನಿವಾರ) ಈ ಸೀಸನ್​​ನ ಕೊನೆಯ ವಾರದ ಪಂಚಾಯಿತಿ ಆಗಿತ್ತು. ಮನೆಯಲ್ಲಿ ಆರಂಭದಿಂದಲೂ ಇತರೆ ಸದಸ್ಯರಿಂದ ಅತಿ ಹೆಚ್ಚು ನಿಂದನೆಗೆ, ಟೀಕೆಗೆ, ಬೆನ್ನ ಹಿಂದಿನ ಮಾತಿಗೆ ಕಾರಣ ಆಗಿರುವುದು ಧ್ರುವಂತ್ ಮತ್ತು ಅಶ್ವಿನಿ. ಅದರಲ್ಲೂ ಧ್ರುವಂತ್ ಅವರನ್ನು ಇಡೀ ಮನೆಯ ಸದಸ್ಯರು ದ್ವೇಷಿಸುತ್ತಿದ್ದ ಸಮಯವೂ ಒಂದಿತ್ತು. ಆದರೆ ಈ ಸೀಸನ್​​ನ ಕೊನೆಯ ವಾರದ…

Read More