Headlines

ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ – Kannada News | Ballari Banner Clash: DIG Vertika Katiyar Transferred, New SP Appointed

ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ ಬೆಂಗಳೂರು, ಜನವರಿ 07: ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್​ ವಿಚಾರವಾಗಿ ಗಲಾಟೆ ಸಂಬಂಧ ಎಸ್ಪಿ ತಲೆದಂಡದ ಬೆನ್ನಲ್ಲೇ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್​ಮೆಂಟ್​ ವಿಭಾಗಕ್ಕೆ ವರ್ತಿಕಾರನ್ನು ಟ್ರಾನ್ಸ್​​ಫರ್​​ ಮಾಡಲಾಗಿದ್ದು, ಬಳ್ಳಾರಿ ವಲಯದ ಐಜಿಪಿಯಾಗಿ ಡಾ.ಪಿ.ಎಸ್.ಹರ್ಷ ಅವರನ್ನು ನೇಮಕ ಮಾಡಲಾಗಿದೆ. ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಎಸ್ಪಿ ಸ್ಥಾನಕ್ಕೆ ಡಾ. ಸುಮನ ಪೆನ್ನೆಕರ್…

Read More

ತಮಿಳು ಸರಿಗಮಪ ಬಳಿಕ ಹೇಗಿದೆ ಶಿವಾನಿ ನವೀನ್ ಲೈಫ್? – Kannada News | Shivani Naveen Life Changed After Tamil Saregamapa Here are her Cute photos

ಶಿವಾನಿ ನವೀನ್ ಅವರು ಕಳೆದ ವರ್ಷ ತಮಿಳುನಾಡಿನಲ್ಲಿ ಮಿಂಚು ಹರಿಸಿದ್ದರು, ಇದಕ್ಕೆ ಕಾರಣ ಆಗಿದ್ದು ತಮಿಳಿನ ಸರಿಗಮಪ ಶೋ. ಅಲ್ಲಿ ಅವರು ಭಾಗವಹಿಸಿ ಸಾಕಷ್ಟು ಗಮನ ಸೆಳೆದಿದ್ದರು. ಈಗ ಶಿವಾನಿ ಅವರು ವಿವಿಧ ಶೋಗಳನ್ನು ನೀಡುತ್ತಿದ್ದಾರೆ. ಶಿವಾನಿ ಅವರು ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19’ರಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಮೊದಲ ರನ್ನರ್-ಅಪ್ ಆಗಿದ್ದರು. ಅವರಿಗೆ ಸಂಗೀತದ ಬಗ್ಗೆ ಅಪಾರ ಪ್ರೀತಿ ಇದೆ. ಪ್ರತಿ ಹಂತದಲ್ಲೂ ಕಲಿಕೆ ಮಾಡುತ್ತಾ ಸಾಗುತ್ತಿದ್ದಾರೆ. ತಮಿಳಿನ ಸರಿಗಮಪ…

Read More

ಹೊಸ ರಿಯಾಲಿಟಿ ಶೋ ಮೂಲಕ ಬಂದ ಸೃಜನ್ ಲೋಕೇಶ್; ಬಿಗ್ ಬಾಸ್ ಬಳಿಕ ಪ್ರಸಾರ – Kannada News | Srujan Lokesh Shruthi And Sadhu Kokila In Gicchi Gili Gili Junior Show

‘ಬಿಗ್ ಬಾಸ್ ಕನ್ನಡ ಸೀಸನ್ 12’ ಜನವರಿ 17 ಹಾಗೂ 18ರಂದು ಪ್ರಸಾರ ಕಾಣಲಿದೆ. ಈ ಶೋ ಮುಗಿದ ಬಳಿಕ ವೀಕೆಂಡ್​​ನಲ್ಲಿ ಪ್ರಸಾರ ಮಾಡೋಕೆ ಒಂದು ರಿಯಾಲಿಟಿ ಶೋ ಬೇಕಲ್ಲ. ಅದಕ್ಕೆ ಶೋ ಸಿದ್ಧವಾಗಿದೆ. ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಅದುವೇ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’. ಸೃಜನ್ ಲೋಕೇಶ್, ಸಾಧು ಕೋಕಿಲ ಹಾಗೂ ಶ್ರುತಿ ಶೋನ ನೇತೃತ್ವ ವಹಿಸಲಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ಧ್ವಂಸಗೊಂಡಿದ್ದ ಸೋಮನಾಥ ದೇವಾಲಯವನ್ನು ಮತ್ತೆ ಕಟ್ಟುವುದು ನೆಹರುಗೆ ಇಷ್ಟವಿರಲಿಲ್ಲ: ಸುಧಾಂಶು ತ್ರಿವೇದಿ – Kannada News | Nehru Opposed Somnath Temple Reconstruction: Sudhanshu Trivedi Claims

ನವದೆಹಲಿ, ಜನವರಿ 07: ಸಾವಿರ ವರ್ಷಗಳ ಹಿಂದೆ ಮೊಹಮ್ಮದ್ ಘಜ್ನಿ ಗುಜರಾತ್​ನ ಸೋಮನಾಥ ದೇವಾಲಯ(Somnath Temple)ವನ್ನು ನೆಲಸಮಗೊಳಿಸಿದ್ದ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವೆಂದು ಪರಿಗಣಿಸಲಾಗಿರುವ ಸೋಮನಾಥ ದೇವಾಲಯವು ಭಾರತೀಯ ಸನಾತನ ಪರಂಪರೆಯ ಸಂಕೇತವಾಗಿದೆ. ಘಜ್ನಿಯಿಂದ ದೇವಾಲಯ ಧ್ವಂಸಗೊಂಡಿದ್ದ ಈ ಸೋಮನಾಥ ದೇವಾಲಯದ ಮರು ನಿರ್ಮಾಣ ಮಾಡುವುದು ಜವಾಹರ್​ಲಾಲ್ ನೆಹರು ಅವರಿಗೆ ಇಷ್ಟವಿರಲಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ಸುಧಾಂಶು ತ್ರಿವೇದಿ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನವರಿ 11ರಂದು ಈ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಸೋಮನಾಥ…

Read More

ಥಿಯೇಟರ್​​ನಲ್ಲಿ ಫ್ಲಾಪ್; ಒಟಿಟಿಯಲ್ಲಿ? ನೆಟ್​​ಫ್ಲಿಕ್​ಗೆ ಬರ್ತಿದೆ ‘ಅಖಂಡ 2’ – Kannada News | Akhanda 2 Netflix Release: Can Balayya’s Flop Film Find OTT Success

ಥಿಯೇಟರ್​​ನಲ್ಲಿ ಸಿನಿಮಾ ಹಿಟ್ ಆಗಿ, ಅದೇ ಚಿತ್ರವನ್ನು ಒಟಿಟಿಯಲ್ಲಿ ನೋಡಿ ಇಷ್ಟ ಪಡದೇ ಇದ್ದ ಉದಾಹರಣೆ ಸಾಕಷ್ಟಿದೆ. ಅದೇ ರೀತಿ ಥಿಯೇಟರ್​​​ನಲ್ಲಿ ನಿರ್ಮಾಪಕರಿಗೆ ನಷ್ಟ ಮಾಡಿದ ಕೆಲ ಚಿತ್ರಗಳು ಒಟಿಟಿಯಲ್ಲಿ ಜನರಿಂದ ಮೆಚ್ಚುಗೆ ಪಡೆದಿದ್ದೂ ಇದೆ. ಈಗ ತೆಲುಗಿನ ‘ಅಖಂಡ 2’ (Akhanda 2) ಒಟಿಟಿಗೆ ಕಾಲಿಡುತ್ತಿದೆ. ಇದರ ಭವಿಷ್ಯವನ್ನು ಒಟಿಟಿ ವೀಕ್ಷಕರು ನಿರ್ಧರಿಸಲಿದ್ದಾರೆ. ‘ಅಖಂಡ’ ಸಿನಿಮಾ 2021ರಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರದಲ್ಲಿ ಬಾಲಯ್ಯ ನಟಿಸಿದ್ದರು. ಅದೇ ರೀತಿ 2025ರಲ್ಲಿ ‘ಅಖಂಡ 2’…

Read More

ಜಪಾನ್​​ನಿಂದ ಬಂದು ರಾಮ್ ಚರಣ್​​ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು? – Kannada News | Celebrity Chef Takamasa Osawa visited Ram Charan house cook Biriyani

ರಾಮ್ ಚರಣ್​ಗೂ (Ram Charan) ಜಪಾನಿಗೂ ಆತ್ಮೀಯ ಬಂಧವಿದೆ. ಅವರ ಸಿನಿಮಾಗಳಿಗೆ ಜಪಾನ್​​ನಲ್ಲಿ ಭಾರಿ ಬೇಡಿಕೆ ಇದೆ. ಜಪಾನಿನಲ್ಲಿ ರಾಮ್ ಚರಣ್​​ಗೆ ದೊಡ್ಡ ಅಭಿಮಾನಿ ವರ್ಗವಿದೆ. ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮೊದಲ ಮಗುವಾದಾಗಲೂ ಸಹ, ‘ಎಲ್ಲ ಮ್ಯಾಜಿಕ್​​ ಜಪಾನಿನಲ್ಲೇ ನಡೆಯಿತು’ ಎಂದು ತಮಾಷೆ ಸಹ ಮಾಡಿದ್ದರು ರಾಮ್ ಚರಣ್. ಇದೀಗ ರಾಮ್ ಚರಣ್ ಮನೆಗೆ ಬಿರಿಯಾನಿ ಮಾಡಲು ಜಪಾನಿನಿಂದ ಶೆಫ್ ಒಬ್ಬರು ಬಂದಿದ್ದಾರೆ. ಬಿರಿಯಾನಿ ಅಸಲಿಗೆ ಏಷ್ಯಾದ ಖಾದ್ಯ. ಸ್ಪಷ್ಟವಾಗಿ ಬಿರಿಯಾನಿಯ ಉಗಮ ಎಲ್ಲಿ ಆಗಿದ್ದು…

Read More

SBI Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | SBI SCO Recruitment 2026: 1146 Specialist Officer Posts, Apply by Jan 10!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ತನ್ನ ಶಾಖೆಗಳ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 1146 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು ಹುದ್ದೆಗಳಲ್ಲಿ, 582 VP ವೆಲ್ತ್ (SRM) ಹುದ್ದೆಗಳು, 237 AVP ವೆಲ್ತ್ (RM) ಹುದ್ದೆಗಳು ಮತ್ತು 327 ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಾಗಿವೆ. ಅರ್ಹ…

Read More

Hallmark Silver: ಚಿನ್ನದಂತೆ ಬೆಳ್ಳಿಗೂ ಸದ್ಯದಲ್ಲೇ ಬರಲಿದೆ ಹಾಲ್ಮಾರ್ಕ್ ಗುರುತು – Kannada News | Hallmarking the silver may become mandatory soon, says report

ನವದೆಹಲಿ, ಜನವರಿ 7: ಚಿನ್ನದ ಪರಿಶುದ್ಧತೆಯ ಮಟ್ಟ ತೋರಿಸುವ ಹಾಲ್ಮಾರ್ಕ್ ಗುರುತು ವ್ಯವಸ್ಥೆಯನ್ನು ಬೆಳ್ಳಿಗೂ (Silver) ತರಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಹಕರಿಗೆ ನೈಜ ಬೆಳ್ಳಿ ವಸ್ತುಗಳು ದೊರಕಲು ಈ ಹಾಲ್ಮಾರ್ಕಿಂಗ್ ವ್ಯವಸ್ಥೆ ನೆರವಾಗಲಿದೆ. ಶೀಘ್ರದಲ್ಲೇ ಬೆಳ್ಳಿಗೂ ಹಾಲ್ಮಾರ್ಕಿಂಗ್ ಮುದ್ರೆ ಹಾಕುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​ನ (ಬಿಐಎಸ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿ ಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ. ಬೆಳ್ಳಿ ಆಭರಣಗಳು ಮತ್ತು ಗಟ್ಟಿಗಳಿಗೆ ಹಾಲ್ಮಾರ್ಕ್ ಗುರುತು ಮಾಡುವ ಕಾರ್ಯ ಈಗಾಗಲೇ ಮಾಡಲಾಗುತ್ತಿದೆ. ಈವರೆಗೂ…

Read More

ಸ್ಥಳೀಯ ಸಂಸ್ಥೆ ಚುನಾವಣೆ: JDS ಜೊತೆ ಮೈತ್ರಿಗೆ ಮಂಡ್ಯದಲ್ಲಿ ಬಿಜೆಪಿಗರ ಅಪಸ್ವರ – Kannada News | Mandya BJP Leaders Oppose Alliance with JDS for Local Body Elections

ಮಂಡ್ಯ, ಜನವರಿ, 07: ಜಿಲ್ಲೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೋರ್ ಕಮಿಟಿ ಸದಸ್ಯರ ಮುಂದೆ ಈ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಜಿಲ್ಲೆಯ ಇತರ ಪರಾಜಿತ ಅಭ್ಯರ್ಥಿಗಳು ಇದಕ್ಕೆ ದನಿಗೂಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ಆಗ್ರಹಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ…

Read More

ಬೇಕಿದ್ರೆ ಆಡಿ, ಇಲ್ಲಾಂದ್ರೆ ಹೊರ ನಡೀರಿ… ಬಾಂಗ್ಲಾಗೆ ಖಡಕ್ ಸೂಚನೆ! – Kannada News | ICC rejects Bangladesh’s T20 World Cup Matches Shifting request

ಟಿ20 ವಿಶ್ವಕಪ್​​ನ ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ. ಟಿ20 ವಿಶ್ವಕಪ್​ ಟೂರ್ನಿ ಆಡುವುದಾದರೆ ಭಾರತದಲ್ಲೇ ಆಡಿ, ಇಲ್ಲದಿದ್ದರೆ ವಾಕ್ ಓವರ್ ನೀಡಿ ಎಂದು ಐಸಿಸಿ ಬಿಸಿಬಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ…

Read More