ಟಿಸಿಎಸ್ ಮತಾಂತರ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಅರೆಸ್ಟ್ – Kannada News | Nashik TCS Conversion Case: Key Accused Nida Khan Arrested in Maharashtra; SIT Deepens Probe into Harassment Allegations

ಮುಂಬೈ, ಮೇ 7: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನ (TCS) ಮಹಾರಾಷ್ಟ್ರದ ನಾಸಿಕ್‌ ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ನಿದಾ ಖಾನ್ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದಳು. ಇದೀಗ ಆಕೆಯನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆಯ ಮೂಲಕ ಬಂಧಿಸಲಾಗಿದೆ. ಮುಖ್ಯಾಂಶಗಳು ನಾಸಿಕ್ ಟಿಸಿಎಸ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಆರೋಪ. ತಲೆಮರೆಸಿಕೊಂಡಿದ್ದ ನಿದಾ…

Read More

ಬೈರತಿ ಬಸವರಾಜ್​ಗೆ ಮತ್ತೊಂದು ಸಂಕಷ್ಟ! ಆಪ್ ನಾಯಕಿಯ ಕಾರನ್ನೇ ಧ್ವಂಸಗೊಳಿಸಿದ ಆರೋಪ – Kannada News | Byrathi Basavaraj in Trouble Again: AAP Leader Accuses BJP MLA’s Supporters of Vandalism and Threats

ಬೈರತಿ ಬಸವರಾಜ್​ಗೆ ಮತ್ತೊಂದು ಸಂಕಷ್ಟ! ಬೆಂಗಳೂರು, ಮೇ 04:  ಬಿಕ್ಲು ಶಿವು ಕೊಲೆ ಪ್ರಕರಣದ ತನಿಖೆ ಎದುರಿಸುತ್ತಿರುವ ಕೆ.ಆರ್. ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ (Byrathi Basavaraj) ಅವರಿಗೆ ಈಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಈ ಹಿಂದೆ ಅವರು ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಜೈಲು ರುಚಿ ನೋಡಿದ ಬಳಿಕ ಇದೀಗ ಅವರ ಬೆಂಬಲಿಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆಪ್ ನಾಯಕಿ ದೂರು ದಾಖಲಿಸಿದ್ದಾರೆ. ನನಗೆ ಬೆದರಿಕೆ ಹಾಕಿದ್ದಾರೆ: ಆಪ್ ನಾಯಕಿ ಬಿಕ್ಲು…

Read More

ಬೆಂಗಳೂರಿಗರೇ ಗಮನಿಸಿ: 60 ದಿನಗಳ ಕಾಲ ಈ ಪ್ರಮುಖ ರಸ್ತೆ ಕ್ಲೋಸ್​​; ಬದಲಿ ಮಾರ್ಗಗಳ ಮಾಹಿತಿ ಇಲ್ಲಿದೆ – Kannada News | Bengaluru Traffic Alert: Kamaraj Road Closed for 60 Days Due to Construction Work; Check Alternative Routes Here

ಬೆಂಗಳೂರು, ಮೇ 25: ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಲಾ ಕ್ರಾಸ್ ಸಮೀಪ ಹಳೆಯ ಕಲ್ಲಿನ ಕಲ್ವರ್ಟ್ ತೆರವುಗೊಳಿಸಿ ಹೊಸ RCC ಕಲ್ವರ್ಟ್ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 60 ದಿನಗಳ ಕಾಲ ಕಾಮರಾಜ್ ರಸ್ತೆ ಬಂದ್ ಆಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತಿಳಿಸಿದೆ. ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡುಗಳನ್ನು ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಯಾವೆಲ್ಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ? ಕಾಮರಾಜ ರಸ್ತೆಯ…

Read More

ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು – Kannada News | JP Nagar Incident: Heavy Rain Causes Tree to Fall on Car, Public Outcry Over Official Inaction

ಬೆಂಗಳೂರು, ಏ.30: ಸಿಲಿಕಾನ್​ ಸಿಟಿಯ ಜೆಪಿ ನಗರ 24ನೇ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಭಾರೀ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದರೂ, ಸುಮಾರು 12 ಗಂಟೆಗಳಾದರೂ ಜಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವು ಕಾರ್ಯಾಚರಣೆ ನಡೆಸಿಲ್ಲ. ಮರ ಬಿದ್ದ ಪರಿಣಾಮವಾಗಿ ರಸ್ತೆಯ ಒಂದು ಬದಿಯ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಒಂದೇ ರಸ್ತೆಯಲ್ಲಿ ಎರಡೂ ಕಡೆ ಚಲಿಸಬೇಕಾದ ಪರಿಸ್ಥಿತಿ…

Read More

ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಸಾರಿಗೆ ನೌಕರರ ದರ್ಪ: ವಿಡಿಯೋ ನೋಡಿ – Kannada News | Gadag Bus Staff Allegedly Assault Student: Protest Erupts at Puttaraj Gavai Bus Stand

ಗದಗ, ಏಪ್ರಿಲ್​​ 23: ಬಸ್ ನಿಲ್ಲಿಸಿ ಅಂದಿದಕ್ಕೆ ವಿದ್ಯಾರ್ಥಿಗಳ‌ ಮೇಲೆ ಸಾರಿಗೆ ನೌಕರರಿಂದ ದರ್ಪ‌‌ ಮೆರೆದ ಘಟನೆಯೊಂದು ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರಿಗೆ ನೌಕರರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ವಿದ್ಯಾರ್ಥಿಗಳು ಬಸ್ ಹತ್ತಲು ಕೈ ತೋರಿಸಿದರೂ ಚಾಲಕ ಬಸ್ ನಿಲ್ಲಿಸಿಲ್ಲ. ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಗಳು ಮತ್ತು ಸಾರಿಗೆ ನೌಕರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ನೌಕರರು…

Read More

ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ – Kannada News | TV9 Nava Nakshatra 2026 Rohan Corporation Owner rohan monteiro awarded in Bengaluru

ಬೆಂಗಳೂರು, ಫೆಬ್ರವರಿ 14: ರೋಹನ್ ಕಾರ್ಪೊರೇಷನ್‌ನ ರೋಹನ್ ಮಾಂಟೆರೋ ಅವರನ್ನು ಟಿವಿ9 ನವ ನಕ್ಷತ್ರ (TV9 Nava Nakshatra) ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ರೋಹನ್ ಅವರ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ಅವರ ಡಿವನ್ ಮೊಂಟೆರೋ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರೋಹನ್ ಸನ್ಮಾನಿಸಿದರು. ರೋಹನ್ ಮೊಂಟೆರೋ ನಂಬಿಕೆ ಮತ್ತು ಗುಣಮಟ್ಟದ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಸಮಾಜಮುಖಿ ಕಾರ್ಯಗಳಿಂದ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. TV9 ಕನ್ನಡ ಸುದ್ದಿವಾಹಿನಿಯು ಪ್ರತಿ ವರ್ಷದಂತೆ ಈ ಬಾರಿಯೂ…

Read More

100, 200, 500 ರೂ.ನಲ್ಲಿ ಈ ಮಾರ್ಕ್​ ಇರುವುದೇಕೆ ಗೊತ್ತಾ? ಇಲ್ಲಿದೆ ರಹಸ್ಯ ಮಾಹಿತಿ – Kannada News | RBI Currency Notes: Bleed Marks Guide for Blind Financial Inclusion by Design

ಡಿಜಿಟಲ್​​​ ಯುಗದಲ್ಲೂ ಭಾರತದಲ್ಲಿ ಇಂದಿಗೂ ನೋಟು ಬಳಕೆ ಮಾಡಲಾಗುತ್ತದೆ. ಆದರೆ ಈ ನೋಟುಗಳಲ್ಲಿ ಇರುವ ಕೆಲವೊಂದು ವಿಶೇಷ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಇಂದಿಗೂ ನೀರಿನಂತೆ ಖರ್ಚು ಮಾಡುವ ಅದೆಷ್ಟೋ ಜನರಿಗೆ ನೋಟುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಂದಿನ ದಿನಗಳಲ್ಲಿ ನಾವು ಯುಪಿಐ (UPI) ಮೂಲಕ ಹಣ ಪಾವತಿಸುವುದು ಹೆಚ್ಚಾಗಿರಬಹುದು, ಆದರೆ ನೂರಾರು ವರ್ಷಗಳಿಂದ ಚಲಾವಣೆಯಲ್ಲಿರುವ ನೋಟುಗಳ ವಿನ್ಯಾಸದ ಹಿಂದೆ ಒಂದು ವಿಶೇಷ ಉದ್ದೇಶವಿದೆ. ನೋಟುಗಳ ಅಂಚಿನಲ್ಲಿರುವ ಆ ಸಣ್ಣ ಕಪ್ಪು ಗೆರೆಗಳನ್ನು ‘ಬ್ಲೀಡ್ ಮಾರ್ಕ್ಸ್’ (Bleed…

Read More

ಐಷಾರಾಮಿ ಕಾರಿನಲ್ಲಿ ಬಂದ್ರು, ಬೀದಿಯಲ್ಲಿದ್ದ ಹಸುವನ್ನೇ ಕದ್ದುಕೊಂಡು ಹೋದ್ರು!

ಹುಬ್ಬಳ್ಳಿ, ಮೇ 05: ನಗರದಲ್ಲಿ ಐಷಾರಾಮಿ ಕಾರುಗಳಲ್ಲಿ ಬಂದು ರಸ್ತೆ ಬದಿಯ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಶಿವಮೊಗ್ಗ ಮೂಲದ ಮುಬಾರಕ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಬೇರೆ ಬೇರೆ ಜಿಲ್ಲೆಗಳಿಂದ ಐಷಾರಾಮಿ ಕಾರುಗಳನ್ನು ತಂದು, ಅವುಗಳಿಗೆ ಕಪ್ಪು ಬಣ್ಣದ ಸ್ಟಿಕ್ಕರ್ ಅಂಟಿಸಿ ಗುರುತು ಸಿಗದಂತೆ ಸಂಚರಿಸುತ್ತಿದ್ದರು. ಹುಬ್ಬಳ್ಳಿಯ ಸೆಟಲ್‌ಮೆಂಟ್ ಹಾಗೂ ಹಳೇ ಹುಬ್ಬಳ್ಳಿ ಭಾಗದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,…

Read More

ಓವರ್‌ ಆ್ಯಕ್ಟಿಂಗ್ ಮಾಡಿದ್ರೆ 50 ಪೈಸೆ ಕಟ್ ಮಾಡ್ತೀವಿ: ರಿಝ್ವಾನ್ ಫುಲ್ ಟ್ರೋಲ್! – Kannada News | Bangladesh Players Trolls Mohammad Rizwan

ಸಿಲ್ಹೆಟ್‌ನಲ್ಲಿ ನಡೆದ ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಹೈ-ಡ್ರಾಮಾ ನಡೆದಿದೆ. ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಅವರ ವರ್ತನೆಗೆ ಬೇಸತ್ತ ಬಾಂಗ್ಲಾದೇಶ್ರ ಆಟಗಾರರು, ಬಾಲಿವುಡ್‌ನ ಪ್ರಸಿದ್ಧ ‘ಹೇರಾ ಫೇರಿ’ ಸಿನಿಮಾದ ಡೈಲಾಗ್ ಬಳಸಿ ಮೈದಾನದಲ್ಲೇ ಕಾಲೆಳೆದಿದ್ದಾರೆ.  ಮೊಹಮ್ಮದ್ ರಿಝ್ವಾನ್ ಟ್ರೋಲ್: ಪಾಕಿಸ್ತಾನ್ ತಂಡವು 437 ರನ್‌ಗಳ ಬೃಹತ್ ಗುರಿ ಬೆನ್ನಟ್ಟುತ್ತಿದ್ದಾಗ, 72ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಬೌಲಿಂಗ್ ಮಾಡಲು ಬಂದರು. ಈ ವೇಳೆ…

Read More

ಅಣ್ಣಮ್ಮ ಸಾಂಗ್​ಗೆ ಮಚ್ಚು ಹಿಡಿದು ರೌಡಿಶೀಟರ್ ಡ್ಯಾನ್ಸ್ ! ಇಬ್ಬರ ಬಂಧನ

ಬೆಂಗಳೂರು, ಮಾರ್ಚ್​ 29: ನಗರದಲ್ಲಿ ರೌಡಿಶೀಟರ್ ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ ವೀಡಿಯೋ ವೈರಲ್ ಆದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ರಂಜಿತ್ ಅಲಿಯಾಸ್ ರಂಜು ಮತ್ತು ನಂದೀಶ್ ಬಂಧಿತರು. ಕರಗದ ವೇಳೆ ಬಳಸುವ ದೇವಿಯ ಹಾಡಿಗೆ ಎಣ್ಣೆ ಪಾರ್ಟಿಯಲ್ಲಿ ಮಚ್ಚು ಹಿಡಿದು ಸ್ಟೆಪ್ಸ್ ಹಾಕಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ರಂಜಿತ್ ವಿರುದ್ಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಹಲವು ಪ್ರಕರಣಗಳಿದ್ದು,…

Read More