ಮಂಗಳೂರಿನ ಜೊತೆ ನಂಟು, ಬಾಲ್ಯ ನೆನಪಿಸಿಕೊಂಡ ಶಾರುಖ್ ಖಾನ್ – Kannada News | Shah Rukh Khan talks about his relation with Mangalore

ಶಾರುಖ್ ಖಾನ್ (Shah Rukh Khan), ಭಾರತದ ಟಾಪ್ ಸೂಪರ್ ಸ್ಟಾರ್. ವಿಶ್ವದಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಭಾರತೀಯ ನಟ ಶಾರುಖ್ ಖಾನ್ ಎನ್ನಲಾಗುತ್ತದೆ. ನಿನ್ನೆಯಷ್ಟೆ ಶಾರುಖ್ ಖಾನ್ ಮಂಗಳೂರಿಗೆ ಬಂದಿದ್ದರು. ತಮ್ಮ ಮೊದಲ ಸಿನಿಮಾ ‘ದೀವಾನಾ’ ಬಿಡುಗಡೆ ಆಗಿ 35 ವರ್ಷಗಳಾಗಿದ್ದು ಅದರ ಸಂಭ್ರಮಾಚರಣೆಗಾಗಿ ಶಾರುಖ್ ಖಾನ್ ಅವರು ಮಂಗಳೂರಿಗೆ ಬಂದಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಶಾರುಖ್ ಖಾನ್ ಅವರನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ಶಾರುಖ್ ಖಾನ್ ಅವರು…

Read More

ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾದ ಫರ್ನಿಚರ್ ಅಂಗಡಿ: ಕೋಟ್ಯಾಂತರ ರೂ. ಮೌಲ್ಯದ ಪೀಠೋಪಕರಣಗಳು ಅಗ್ನಿಗಾಹುತಿ

ಬೆಳಗಾವಿ, ಮೇ 30: ಜಿಲ್ಲೆಯ ಮೂಡಲಗಿ ತಾಲೂಕಿನ ಸಂಗನಕೆರೆ ಕ್ರಾಸ್ ಬಳಿ ಇರುವ ಎಸ್‌ಎಂಕೆ ಫರ್ನಿಚರ್ ಅಂಗಡಿಯಲ್ಲಿ ಮಧ್ಯರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಮತ್ತು ಇತರೆ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೆಂಕಿ ಸ್ಫೋಟದ ಮಾದರಿಯಲ್ಲಿ ಹರಡಿರುವುದು ಕಂಡುಬಂದಿದೆ. ಅದೃಷ್ಟವಶಾತ್, ಮಧ್ಯರಾತ್ರಿ ಘಟನೆ ನಡೆದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಂಗಡಿಗೆ ಕಾವಲಿದ್ದ ಸೆಕ್ಯೂರಿಟಿ ಗಾರ್ಡ್ ಹೊರಗಡೆ ಮಲಗಿದ್ದರಿಂದ ಆತ ಸುರಕ್ಷಿತವಾಗಿ ಪಾರಾಗಿದ್ದಾನೆ. ಬೆಂಕಿ…

Read More

ಇಸ್ರೇಲ್​ಗೆ ಶೇ 12.5, ಭಾರತಕ್ಕೆ ಶೇ. 10 ಸುಂಕ; ಅಮೆರಿಕದ ಪರಮಮಿತ್ರ ದೇಶಕ್ಕೆ ಹೆಚ್ಚಿನ ಟ್ಯಾರಿಫ್ ಯಾಕೆ? – Kannada News | Us imposes new tariffs on over 60 countries having forced labour system india at lower bracket

ವಾಷಿಂಗ್ಟನ್, ಜುಲೈ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಲವಂತದ ಕಾರ್ಮಿಕ ಪದ್ಧತಿಯನ್ನು (Forced Labour) ತಡೆಯುವ ಉದ್ದೇಶದಿಂದ ಭಾರತ, ಚೀನಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳ ಮೇಲಿನ ಆಮದುಗಳ ಮೇಲೆ ಶೇ. 10ರಿಂದ ಶೇ. 12.5ರವರೆಗೆ ಹೊಸ ಸುಂಕಗಳನ್ನು (Tariffs) ವಿಧಿಸಿದ್ದಾರೆ. ಬಲವಂತದ ಕಾರ್ಮಿಕರಿಂದ ತಯಾರಾದ ಉತ್ಪನ್ನಗಳ ಆಮದನ್ನು ತಡೆಗಟ್ಟುವಲ್ಲಿ ತಮ್ಮ ವ್ಯಾಪಾರಿ ಪಾಲುದಾರ ದೇಶಗಳು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ಈ ಸುಂಕಗಳನ್ನು ವಿಧಿಸಿದೆ. ವಿವಿಧ ದೇಶಗಳಿಗೆ…

Read More

Video: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ – Kannada News | The beautiful friendship between a dog and a gorilla

ಈ ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧವೇ ಈ ಸ್ನೇಹ (friendship). ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳ ನಡುವಿನ ಶುದ್ಧ ಸ್ನೇಹಕ್ಕೆ ಈ ವಿಡಿಯೋನೇ ಸಾಕ್ಷಿ. ತನ್ನ ಬೆಸ್ಟ್ ಫ್ರೆಂಡ್ ಶ್ವಾನವನ್ನು (dog) ಕಂಡೊಡನೆ ಗೊರಿಲ್ಲಾ ಕುಣಿದಾಡಿದ್ದು, ಓಡಿ ಹೋಗಿ ತಬ್ಬಿಕೊಂಡು ಮುದ್ದಾಡಿರುವ ವಿಡಿಯೋ ವೈರಲ್‌ ಆಗಿದೆ. Bobby Lloyd ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಗೊರಿಲ್ಲಾ ಹಾಗೂ ಶ್ವಾನವು ಮುಖಾಮುಖಿಯಾಗಿರುವ…

Read More

Maa Bagdahi Temple: ಬಡ ಕುರುಬನ ಭಕ್ತಿಗೆ ಒಲಿದ ದೇವಿ; ಕಲ್ಲುಗಳನ್ನೇ ಕಾಣಿಕೆಯಾಗಿ ಪಡೆಯುವ ವಿಶಿಷ್ಟ ಶಕ್ತಿ ಪೀಠ

ಭಾರತದಾದ್ಯಂತ ಇರುವ ಶಕ್ತಿ ಪೀಠಗಳಲ್ಲಿ ದೇವಿಗೆ ರೇಷ್ಮೆ ಸೀರೆ, ಬಂಗಾರ, ಹಣ್ಣು-ಹಂಪಲು ಅಥವಾ ವೈಭವದ ನೈವೇದ್ಯಗಳನ್ನು ಅರ್ಪಿಸುವುದು ಸಾಮಾನ್ಯ. ಆದರೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಅರಣ್ಯದ ನಡುವೆ ನೆಲೆಸಿರುವ ‘ಮಾ ಬಾಗದಾಯಿ’ ದೇವಾಲಯವು ಈ ಎಲ್ಲಾ ಸಂಪ್ರದಾಯಗಳಿಗಿಂತ ಭಿನ್ನವಾಗಿದೆ. ಇಲ್ಲಿ ಭಕ್ತರು ದೇವಿಗೆ ಅರ್ಪಿಸುವುದು ಕೇವಲ ಐದು ಕಲ್ಲುಗಳು ಮತ್ತು ಒಂದು ಹೂವು! ಕಲ್ಲುಗಳ ಅರ್ಪಣೆಯ ಹಿಂದಿರುವ ‘ಕುರುಬ ಭಕ್ತಿ’ಯ ಕಥೆ: ಶತಮಾನಗಳಷ್ಟು ಹಳೆಯದಾದ ಈ ವಿಶಿಷ್ಟ ಆಚರಣೆಯ ಹಿಂದೆ ಹೃದಯಸ್ಪರ್ಶಿ ಕಥೆಯೊಂದಿದೆ. ಜನಪದರ ನಂಬಿಕೆಯಂತೆ, ಸುಮಾರು…

Read More

ಮಳೆ ಅಬ್ಬರಕ್ಕೆ ಅಂಬೋಲಿ ಫಾಲ್ಸ್​​ಗೆ ಜೀವ ಕಳೆ: ಜಲಪಾತ ನೋಡಲು ಮುಗಿಬಿದ್ದ ಪ್ರವಾಸಿಗರು

ಬೆಳಗಾವಿ, ಜುಲೈ 10: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಹಿನ್ನೆಲೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜಲಪಾತಗಳಿಗೆ ಜೀವಕಳೆ ಬಂದಿದೆ. ಆದರೆ ಬೆಳಗಾವಿ ಜಿಲ್ಲೆಯ 9 ಫಾಲ್ಸ್​​ಗಳಿಗೆ ಅರಣ್ಯ ಇಲಾಖೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವ ಹಿನ್ನೆಲೆ ಮಹಾರಾಷ್ಟ್ರದ ಫಾಲ್ಸ್​​ಗಳತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಪಶ್ಚಿಮ ಘಟ್ಟದ ಕಾಡಂಚಿನಲ್ಲಿ ಧುಮ್ಮಿಕ್ಕುವ ಅಂಬೋಲಿ ಫಾಲ್ಸ್​​ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ನೂರು ಅಡಿಗೂ ಹೆಚ್ಚು ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು…

Read More

ಬಿಹಾರ ಉಪಚುನಾವಣೆ: ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷಕ್ಕೆ ಪರೀಕ್ಷೆ: ಬಂಕಿಪುರದಲ್ಲಿ ತ್ರಿಕೋನ ಸ್ಪರ್ಧೆ – Kannada News | Bihar By election: Prashant Kishor’s Jan Suraaj Party Faces Crucial Test in Bankipur

ನವದೆಹಲಿ, ಆಗಸ್ಟ್ 03: ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ ಮೂರು ಪ್ರಮುಖ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30 ರಂದು ನಡೆದಿದ್ದ ಉಪಚುನಾವಣೆಯ ಮತಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಈ ಫಲಿತಾಂಶವು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಾತ್ರವಲ್ಲದೆ, ಬಿಹಾರದ ಪ್ರಶಾಂತ್ ಕಿಶೋರ್(Prashant Kishor) ನೇತೃತ್ವದ ‘ಜನ್ ಸುರಾಜ್’ ಪಕ್ಷಕ್ಕೂ ಅತ್ಯಂತ ನಿರ್ಣಾಯಕವಾಗಿದೆ. ಬಿಜೆಪಿ…

Read More

ಅತಿಥಿಗಳ ನಡುವೆ ಕೂಲರ್​​ಗಾಗಿ ಜಗಳ; ಸಾವಿನ ಮನೆಯಾದ ಮದುವೆಮನೆ – Kannada News | Uttar Pradesh Wedding guests fight over air cooler 1 dead 4 injured in Azamgarh

ನವದೆಹಲಿ, ಏಪ್ರಿಲ್ 30: ಉತ್ತರ ಪ್ರದೇಶದ (Uttar Pradesh) ಅಜಮ್‌ಗಢದಲ್ಲಿ ಮದುವೆಯೊಂದು ದುರಂತವಾಗಿ ಬದಲಾಗಿದೆ. ಮದುವೆಯ ಪಾರ್ಟಿಯಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಜಿಯಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ನಗರದ ಪ್ರದೇಶದಲ್ಲಿ ಮದುವೆ (Wedding) ನಡೆಯುತ್ತಿತ್ತು. ವಧು-ವರರ ಕುಟುಂಬದ ನಡುವೆ ಕ್ಷುಲ್ಲಕ ವಿಷಯಕ್ಕೆ ವಿವಾದ ಪ್ರಾರಂಭವಾಯಿತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವರನ ಕಡೆಯ ಕೆಲವರು ಮತ್ತು ವಧುವಿನ ಕಡೆಯ ಕೆಲವರು ಡೆಸರ್ಟ್…

Read More

ದೆಹಲಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನಿವಾಸದಲ್ಲಿ ಅಗ್ನಿ ಅವಘಡ – Kannada News | Fire Erupts at Union Minister Ravi Shankar Prasad’s Delhi Residence

ನವದೆಹಲಿ, ಜನವರಿ 14: ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ದೆಹಲಿ ನಿವಾಸದಲ್ಲಿ ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. 8.05ರ ಸುಮಾರಿಗೆ ಅಗ್ನಿಶಾಮಕ ದಳ ಅಲ್ಲಿಗೆ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯೊಳಗೆ, ಒಂದು ಕೋಣೆಯೊಳಗಿನ ಹಾಸಿಗೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು.ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು, ಮತ್ತಷ್ಟು ಹರಡುವುದನ್ನು ತಡೆದಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ.     ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    Source link

Read More

ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ – Kannada News | Chikkamagaluru Heavy Rain: Fields and Farmlands Inundated as Tunga and Bhadra Rivers Swell

ಚಿಕ್ಕಮಗಳೂರು, ಆಗಸ್ಟ್​​ 03: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ (Rain) ಅಬ್ಬರ ಮುಂದುವರೆದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತುಂಗಾ-ಭದ್ರಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.‌ ಶೃಂಗೇರಿಯ ಗಾಂಧಿ ಮೈದಾನ ಇಡೀ ಜಲಾವೃತವಾಗಿತ್ತು. ಭದ್ರೆಯ ಅಬ್ಬರಕ್ಕೆ ಹೊಲ-ಗದ್ದೆ ತೋಟಗಳು ಜಲಾವೃತವಾಗಿವೆ. ನಾಲ್ಕು ದಿನದ ಹಿಂದೆ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರು ಸುರಿಯುತ್ತಿರುವ ಮಳೆ ಕಂಡು ಆತಂಕಕ್ಕೀಡಾಗಿದ್ದಾರೆ. ನದೀತೀರದ ತೋಟಗಳು ಜಲಾವೃತ: ಲಕ್ಷಾಂತರ ರೂ ಹಾನಿ ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ…

Read More