ಬೆಂಗಳೂರಿನಲ್ಲಿ ಮನೆ ಕಟ್ಟೋರು, ಕಟ್ಟಿದವರು ಈ ವಿಚಾರ ತಿಳಿದಿರಲೇಬೇಕು!
ಬೆಂಗಳೂರು, ಏಪ್ರಿಲ್ 8: ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ (Bengaluru) ಸ್ವಂತ ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ, ನಗರ ಪಾಲಿಕೆಯ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅನೇಕರು ಅರಿಯದೇ ‘ಅಕ್ರಮ ಕಟ್ಟಡ’ಗಳ ಮಾಲೀಕರಾಗಿಬಿಡುತ್ತಾರೆ. ಇಂತಹವರಿಗೆ ರಾಜ್ಯ ಸರ್ಕಾರವು ಈಗ ದೊಡ್ಡ ಮಟ್ಟದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಇತ್ತೀಚೆಗೆ ಪ್ರಕಟಿಸಲಾಗಿದ್ದು, ಸೆಟ್ ಬ್ಯಾಕ್ ಉಲ್ಲಂಘನೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಸಂದರ್ಭದಲ್ಲಿ, ಸೆಟ್ ಬ್ಯಾಕ್…