ಕಾಣದಂತೆ ಇದ್ದ ಖರ್ಗ್ ದ್ವೀಪದ ಮೇಲೆ ಅಮೆರಿಕದ ಕಣ್ಣು; ಏನದರ ಮಹತ್ವ?
ನವದೆಹಲಿ, ಮಾರ್ಚ್ 9: ಯುದ್ಧದ ತೀವ್ರತೆ ಹೆಚ್ಚುತ್ತಿರುವಂತೆಯೇ ಇರಾನ್ ಅನ್ನು ಕಟ್ಟಿಹಾಕಲು ಅಮೆರಿಕ ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಇರಾನ್ನ ಹಲವು ಮಿಲಿಟರಿ ಮತ್ತು ಪರಮಾಣು ಸೌಕರ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳಿಂದ ಸಾಕಷ್ಟು ದಾಳಿಗಳಾಗಿವೆ. ಈ ಮಧ್ಯೆ ಅಮೆರಿಕ ಹೊಸ ತಂತ್ರ ಹಾಕಿದೆ. ಇರಾನ್ನ ಆರ್ಥಿಕತೆಯ ಬೆನ್ನೆಲುಬಾಗಿರುವ ಒಂದು ದ್ವೀಪದ ಮೇಲೆ ಟ್ರಂಪ್ ಕಣ್ಣಾಕಿದ್ದಾರೆ. ಅದು ಖರ್ಗ್ ಐಲ್ಯಾಂಡ್ (Kharg Island). ಖರ್ಗ್ ದ್ವೀಪವು ಇರಾನ್ನ ಪ್ರಮುಖ ರಫ್ತು ಅಡ್ಡೆ ಎನಿಸಿದೆ. ಈ ದ್ವೀಪವನ್ನು ವಶಕ್ಕೆ…