Headlines

ಸರ್ಕಾರದ ಮನೆಗಳ ಕರ್ಮಕಾಂಡ ಬಯಲು: ಭಯದಲ್ಲೇ ಬದುಕುತ್ತಿವೆ ನೂರಾರು ಕುಟುಂಬಗಳು – Kannada News | KHB Kengeri Flats: Bangaluru Residents Suffer from Poor Quality Housing

ಬೆಂಗಳೂರು, ಜನವರಿ 05: ಸದ್ಯ ರಾಜಧಾನಿಯಲ್ಲಿ ಕೋಗಿಲು (Kogilu Layout Row) ನಿವಾಸಿಗಳ ವಸತಿ ಬಗ್ಗೆ ದೊಡ್ಡ ಚರ್ಚೆ ಕೇಳಿ ಬರ್ತಿದೆ. ಕಡಿಮೆ ದುಡ್ಡನಲ್ಲಿ ಸರ್ಕಾರ ಕೊಗಿಲು ನಿವಾಸಿಗಳಿಗೆ ಮನೆ ನೀಡುವುದಕ್ಕೆ ಮುಂದಾಗಿದೆ. ಆದರೆ ಈ ನಡುವೆ ಇದೀಗ ಲಕ್ಷಾಂತರ ರೂ. ಖರ್ಚು ‌ಮಾಡಿ‌ ಮನೆ ಪಡೆದಿರುವ ಕರ್ನಾಟಕ ಹೌಸಿಂಗ್ ಬೋರ್ಡ್ (KHB) ನಿವಾಸಿಗಳು ನಮ್ಮ ಗೋಳು ಕೇಳಿ ಎನ್ನುತ್ತಾರೆ. ಸದ್ಯ ನೂರಾರು ಕುಟುಂಬಗಳು ಭಯದಲ್ಲೇ ಬದುಕುವಂತಾಗಿದೆ. ಕೋಗಿಲು ಬಡಾವಣೆ ಅನಧಿಕೃತ ಮನೆಗಳ ತೆರವು ವಿಚಾರದಲ್ಲಿ ರಾಜಕೀಯ…

Read More

ಬಿಗ್ ಬಾಸ್ ಮನೆ ಒಳಗೆ ‘ಡೆವಿಲ್’ ಬಗ್ಗೆ ಗಿಲ್ಲಿ ಮಾತಾಡಿದ್ದ: ಅಸಲಿ ವಿಷಯ ತಿಳಿಸಿದ ಸ್ಪಂದನಾ – Kannada News | Spandana Somanna says Gilli Nata talked about The Devil movie in side Bigg Boss Kannada Season 12 house

ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಟಿವಿ9 ಜೊತೆ ಮಾತನಾಡಿ ಬಿಗ್ ಬಾಸ್ ಮನೆಯೊಳಗಿನ ಅನೇಕ ವಿಚಾರಗಳನ್ನು ಸ್ಪಂದನಾ (Spandana Somanna) ಅವರು ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಜೊತೆ ಸ್ಪಂದನಾ ಉತ್ತಮ ಬಾಂಧವ್ಯ ಹೊಂದಿದ್ದರು. ಈ ಬಾರಿ ಧನುಷ್ ಅಥವಾ ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಸ್ಪಂದನಾ ಹೇಳಿದ್ದಾರೆ. ಅಲ್ಲದೇ, ಬಿಗ್ ಬಾಸ್ ಮನೆ…

Read More

ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ – Kannada News | Chikkamagaluru: Father Kills Son Over Alcohol Dispute

ಚಿಕ್ಕಮಗಳೂರು, ಜನವರಿ 05: ಕುಡಿತದ ಚಟ ಓರ್ವ ವ್ಯಕ್ತಿಯನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗಬಲ್ಲದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಎಣ್ಣೆ ವಿಚಾರವಾಗಿ ಶುರುವಾದ ಸಣ್ಣ ಗಲಾಟೆ ಕೊನೆಗೆ ತಂದೆಯಿಂದಲೇ (Father) ಮಗನ ಕೊಲೆ (murder) ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ರವಿವಾರ ಘಟನೆ ನಡೆದಿದೆ. ಮಗ ಪ್ರದೀಪ್(40) ನನ್ನ ತಂದೆ ರಮೇಶ್ ಆಚಾರ್(65) ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಡೆದದ್ದೇನು? ಅಪ್ಪ ಮತ್ತು ಮಗ…

Read More

‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ – Kannada News | Vivek Agnihotri shares his review after watching Dhurandhar movie

ಆದಿತ್ಯ ಧಾರ್ ನಿರ್ದೇಶನ ಮಾಡಿದ ‘ಧುರಂಧರ್’ (Dhurandhar) ಸಿನಿಮಾವನ್ನು ನೋಡಿ ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ವಿಮರ್ಶೆ ತಿಳಿಸುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಈಗ ‘ಧುರಂಧರ್’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರಿಗೆ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಆದಿತ್ಯ ಧಾರ್ (Aditya Dhar) ಅವರ ನಿರ್ದೇಶನ, ಕಲಾವಿದರ ನಟನೆ ಹಾಗೂ ತಂತ್ರಜ್ಞರ ಕೆಲಸವನ್ನು ವಿವೇಕ್ ಅಗ್ನಿಹೋತ್ರಿ ಅವರು ಮನಸಾರೆ ಹೊಗಳಿದ್ದಾರೆ….

Read More

ಅರಸು ದಾಖಲೆ ಮುರಿಯಲಿರುವ ಸಿದ್ದರಾಮಯ್ಯ: ಬೆಂಬಲಿಗರಿಂದ ನಾಟಿ ಕೋಳಿ ಔತಣ – Kannada News | Long Term CM: Siddaramaiah fans arrange 2 thousand KG chicken banquet In Bengaluru On Jan 6th

ಬೆಂಗಳೂರು, (ಜನವರಿ 05): ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗುವ ಬಯಕೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು. ಸದ್ಯ ಆ ಆಸೆ ಈಡೇರಲಿದೆ. ಹೌದು…ಸಿದ್ದರಾಮಯ್ಯ ಅವರು ನಾಳೆ ಅಂದರೆ ಜನವರಿ 6ರಂದು ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎನ್ನುವ ದಾಖಲೆ ಬರೆಯಲಿದ್ದಾರೆ. ಇದರೊಂದಿಗೆ ದಿವಂಗತ ದೇವರಾಜ ಅರಸು ಅವರ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆಯಲಿದ್ದಾರೆ. ಈ ಸಂಭ್ರಮವನ್ನು ವಿಭಿನ್ನವಾಗಿ ”ನಾಟಿ ಕೋಳಿ ಔತಣಕೂಟ” ಆಯೋಜಿಸಿ ಸಂಭ್ರಮಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಜನವರಿ 6ರಂದು ನೆಲಮಂಗಲದ ಭಕ್ತನ…

Read More

ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ಕಾಂಗ್ರೆಸ್​​ಗೆ ಟಕ್ಕರ್​ ಕೊಡಲು ಕೇಸರಿ ಪಡೆ ರಣತಂತ್ರ – Kannada News | Karnataka BJP Core Committee Meeting: Major Decision

ಬೆಂಗಳೂರು, ಜನವರಿ 05: ಮಲ್ಲೇಶ್ವರಂನ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಮೀಟಿಂಗ್​ನಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕೋಗಿಲು ಲೇಔಟ್​​ನಲ್ಲಿ ಅಕ್ರಮ ಮನೆಗಳ ತೆರವು, ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿರುವ ಮಾರಾಮಾರಿ, ಪರಿಷತ್​​ ಚುನಾವಣೆ ಮತ್ತು ವಿಧಾನಸಭೆ ಬೈ ಎಲೆಕ್ಷನ್​ ಸೇರಿ ಪ್ರಮುಖ ವಿಚಾರಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಪಕ್ಷದ ಮುಂದಿನ ನಡೆ ಬಗ್ಗೆಯೂ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಸಭೆಯ ತೀರ್ಮಾನಗಳೇನು? ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗಲಾಟೆ ವಿಚಾರದಲ್ಲಿ…

Read More

ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಗೌಡ ಆಕ್ರೋಶ – Kannada News | Gilli Nata Ashwini Gowda Rashika Shetty Bigg Boss Kannada Season 12 new episode promo

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನ ಜನವರಿ 4ರ ಸಂಚಿಕೆಯಲ್ಲಿ ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ನಟ, ರಾಶಿಕಾ ಶೆಟ್ಟಿ ಮುಂತಾದವರು ಹರಿಹಾಯ್ದಿದ್ದರು. ಅದರಿಂದಾಗಿ ಅಶ್ವಿನಿ ಗೌಡ ಅವರು ಯಾರ ಜೊತೆಯೂ ಸೇರದೇ ಕೇವಲ ಧ್ರುವಂತ್ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ (Gilli Nata) ಸೇರಿಕೊಂಡು ಅಶ್ವಿನಿಯನ್ನು ಹೀಯಾಳಿಸಿದ್ದಾರೆ. ಅಶ್ವಿನಿಗೆ ಕ್ಯಾಪ್ಟನ್ ಆಗುವ ಸಾಮರ್ಥ್ಯ ಇಲ್ಲ ಎಂದು ಗಿಲ್ಲಿ ಮತ್ತು ರಾಶಿಕಾ ಹೇಳಿದರು. ಅದನ್ನು ಕೇಳಿಸಿಕೊಂಡು…

Read More

ಆಂಧ್ರಪ್ರದೇಶದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ; ಸ್ಥಳೀಯ ನಿವಾಸಿಗಳ ಸ್ಥಳಾಂತರ – Kannada News | Major gas leak in Andhra Pradesh Konaseema local residents evacuated

ಕೊನಸೀಮಾ, ಜನವರಿ 5: ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಪೈಪ್‌ಲೈನ್‌ನಿಂದ ಭಾರಿ ಅನಿಲ ಸೋರಿಕೆಯಾಗಿದ್ದು, ಆ ಗ್ಯಾಸ್​​ಗೆ ಬೆಂಕಿ (Fire Accident) ಹೊತ್ತಿಕೊಂಡಿದೆ. ಇದರಿಂದಾಗಿ ಇಡೀ ಹಳ್ಳಿಯಲ್ಲಿ ಬೆಂಕಿಯ ದಟ್ಟ ಹೊಗೆ ತುಂಬಿದೆ. ಮಾಲಿಕಿಪುರಂ ಮಂಡಲದ ಇರುಸಮಂಡದ ಬಳಿ ಅನಿಲ ಸೋರಿಕೆ ಮತ್ತು ಬೆಂಕಿಯಿಂದಾಗಿ ಇಡೀ ಗ್ರಾಮವೇ ಹೊಗೆಯಿಂದ ಆವೃತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಅಧಿಕಾರಿಗಳು ಆ ಗ್ರಾಮದ ಜನರನ್ನು ಅವರ ಮನೆಗಳಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ…

Read More

ಅದ್ಧೂರಿಯಾಗಿ ನಡೆದ ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ ಭಕ್ತರು – Kannada News | Meghalaya Governor Inaugurates Grand Gavisiddheshwara Rathotsava in Koppal

ಕೊಪ್ಪಳ, ಜನವರಿ 05: ಐತಿಹಾಸಿಕ ಗವಿಸಿದ್ದೇಶ್ವರ ಮಹಾರಥೋತ್ಸವವು ಭಕ್ತಿ ಮತ್ತು ಸಡಗರದಿಂದ ಜರುಗಿತು. ರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಿದ್ದು, ಸುಮಾರು 5 ಲಕ್ಷ ಜನರು ಈ ವೇಳೆ ಭಾಗಿಯಾಗಿದ್ದರು. ರಾಜ್ಯದ ಅನೇಕ ಜನಪ್ರತಿನಿಧಿಗಳು  ಸ್ವ ಇಚ್ಛೆಯಿಂದ ಗವಿಸಿದ್ದೇಶ್ವರನ ಆಶೀರ್ವಾದ ಪಡೆಯಲು ಮತ್ತು ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಶಿವರಾಜ ತಂಗಡಗಿ, ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿ ಹಲವರು ಉಪಸ್ಥಿತರಿದ್ದರು. ಮತ್ತಷ್ಟು ವಿಡಿಯೋ…

Read More

ಚರ್ಮದ ಸಮಸ್ಯೆಗಳನ್ನು ನಿವಾರಿಸಬಲ್ಲುದು ಪತಂಜಲಿಯ ಈ ಆಯುರ್ವೇದ ತೈಲ – Kannada News | Patanjali Divya Kayakalp oil helps in overcoming various skin problems

ಇಂದಿನ ವೇಗದ ಜೀವನದಲ್ಲಿ ಚರ್ಮದ ಸಮಸ್ಯೆಗಳು (skin problems) ಹೆಚ್ಚಾಗಿ ಕಂಡುಬರುತ್ತಿವೆ. ಬದಲಾಗುತ್ತಿರುವ ಜೀವನಶೈಲಿ, ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಒತ್ತಡವು ಚರ್ಮದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ತುರಿಕೆ, ರಿಂಗ್‌ವರ್ಮ್, ಫಂಗಲ್ ಇನ್ಫೆಕ್ಷನ್, ಶುಷ್ಕತೆ ಮತ್ತು ಉರಿಯಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಪತಂಜಲಿಯ ದಿವ್ಯ ಕಾಯಕಲ್ಪ್ ತೈಲವು (Patanjali Divya Kayakalp oil) ಚರ್ಮದ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಈ ಎಣ್ಣೆಯನ್ನು ನೈಸರ್ಗಿಕ ಪದಾರ್ಥಗಳಿಂದ ರೂಪಿಸಲಾಗಿದೆ. ದಿವ್ಯ ಕಾಯಕಲ್ಪ್ ತೈಲವನ್ನು ಪ್ರಾಥಮಿಕವಾಗಿ ಸಾಮಾನ್ಯ…

Read More