ಕುತ್ತಿಗೆಯ ಭಾಗದಲ್ಲಿ ನೋವು ಬಂದು ತಲೆ ಭಾರವೆನಿಸುವುದು ಸರ್ವಿಕಲ್ ಸ್ಪಾಂಡಿಲೋಸಿಸ್‌ನ ಆರಂಭವಾಗಿರಬಹುದು ಎಚ್ಚರ! – Kannada News | Neck Pain? Know About Cervical Spondylosis
ಇತ್ತೀಚಿನ ದಿನಗಳಲ್ಲಿ ಕುತ್ತಿಗೆ ನೋವು (Neck Pain) ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಈ ರೀತಿ ಕುತ್ತಿಗೆ ನೋವಿನ ಜೊತೆಗೆ ತಲೆ ನೋವು ಮತ್ತು ಭುಜಗಳಲ್ಲಿ ಬಿಗಿತ ನಿರಂತರವಾಗಿ ಕಂಡುಬರುತ್ತಿದ್ದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಹೌದು, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ಸರ್ವಿಕಲ್ ಸ್ಪಾಂಡಿಲೋಸಿಸ್ (Cervical Spondylosis) ಎಂಬ ಕಾಯಿಲೆಯ ಲಕ್ಷಣವಾಗಿರಬಹುದು. ಘಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವುದು ಮತ್ತು ಮೊಬೈಲ್ ಫೋನ್‌ಗಳ ವ್ಯಾಪಕ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ….