Headlines

ಭೂ ಒತ್ತುವರಿ ಆರೋಪ: ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ – Kannada News | Yash mother Pushpa house Compound in Hassan demolished on court order

ಹಾಸನದಲ್ಲಿ ನಟ ಯಶ್ (Yash) ತಾಯಿ ಪುಷ್ಪಾ ಅವರ ವಿರುದ್ಧ ಭೂಒತ್ತುವರಿ ಆರೋಪ ಇದೆ. ​ಲಕ್ಷ್ಮಮ್ಮ ಎಂಬುವವರ ಜಾಗದಲ್ಲಿ ಪುಷ್ಪಾ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿಸಿದ್ದಾರೆ ಎನ್ನಲಾಗಿದೆ. ​ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ದೇವರಾಜು ಅವರು ಪುಷ್ಪಾ (Yash mother Pushpa) ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್​ ಆದೇಶದ ಮೇರೆಗೆ ಹಾಸನದ ವಿದ್ಯಾನಗರದಲ್ಲಿರುವ ಪುಷ್ಪಾ ಅವರ ಮನೆಯ ಕಾಂಪೌಂಡ್ ತೆರವುಗೊಳಿಸಲಾಗಿದೆ. ಅಕ್ರಮವಾಗಿ ಕಟ್ಟಿದ್ದ ಗೋಡೆಯನ್ನು ಜಿಪಿಎ ಹೋಲ್ಡರ್ ತೆರವುಗೊಳಿಸಿದ್ದಾರೆ. ಈ ಸಂದರ್ಭದ ವಿಡಿಯೋ…

Read More

Video: ಎಡಗಡೆಯಿಂದ ಲಾರಿ ಓವರ್ ಟೇಕ್ ಮಾಡಲು ಹೋಗಿ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸಾವು – Kannada News | Fatal Road Accident in Hanumakonda as Biker Loses Control While Passing Truck

ಹನುಮಕೊಂಡ, ಜನವರಿ 04: ಎಡಗಡೆಯಿಂದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ಹನುಮಕೊಂಡದಲ್ಲಿ ನಡೆದಿದೆ. ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಚಕ್ರದಡಿ ಸಿಲುಕಿದ್ದಾನೆ.ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಜಿಲ್ಲೆಯ ಕಮಲಾಪುರ ಪ್ರದೇಶದಲ್ಲಿ ಲಾರಿಯನ್ನು ಎಡಭಾಗದಿಂದ ಹಿಂದಿಕ್ಕಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಭಾರೀ ವಾಹನವನ್ನು ಹಿಂದಿಕ್ಕಲು ಬೈಕ್…

Read More

Vastu Tips: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು – Kannada News | Vastu Tips for Money: Avoid Financial Loss and Attract Wealth

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅನೇಕ ಜನರು ವಾಸ್ತು ಶಾಸ್ತ್ರದ ಪ್ರಕಾರ ತಮ್ಮ ಮನೆಗಳನ್ನು ನಿರ್ಮಿಸುತ್ತಾರೆ. ವಾಸ್ತುವು ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ ಎಂದು ನಂಬಲಾಗಿದೆ. ಗಳಿಸಿದ ಹಣವು ಬಾಳಿಕೆ ಬರದಿರಲು ಒಂದು ಕಾರಣವಿದೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಅನಿರೀಕ್ಷಿತ ಆರ್ಥಿಕ ತೊಂದರೆಗಳು ಮತ್ತು ಹೆಚ್ಚುತ್ತಿರುವ ಸಾಲಗಳು ವಾಸ್ತು ದೋಷಗಳಿಂದ ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಸ್ಥಳಗಳಲ್ಲಿ ಹಣವನ್ನು ಇಡಲೇಬಾರದು. ಯಾಕೆಂದರೆ ಅಂತಹ ಸ್ಥಳಗಳಲ್ಲಿ ಹಣವನ್ನು…

Read More

ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು – Kannada News | Viral news of Rs 500 notes stopping in 2026, govt clarifies again

ನವದೆಹಲಿ, ಜನವರಿ 4: ಭಾರತೀಯ ರಿಸರ್ವ್ ಬ್ಯಾಂಕ್ (RBI) 500 ರೂ ನೋಟುಗಳ ಚಲಾವಣೆ ಕಡಿಮೆ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಎಟಿಎಂಗಳಲ್ಲಿ 500 ರೂ ನೋಟುಗಳು ಸಿಕ್ಕೋದಿಲ್ಲ ಎಂದು ತಿಳಿಸುತ್ತಿರುವ ಕೆಲ ಪೋಸ್ಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸರ್ಕಾರ 500 ರೂ ನೋಟುಗಳ ಮುದ್ರಣ ನಿಲ್ಲಿಸಿ, 100 ರೂ ನೋಟುಗಳ ಚಲಾವಣೆ ಮಾತ್ರ ಮುಂದುವರಿಸಬಹುದು ಎನ್ನುವಂತಹ ಸುದ್ದಿಗಳು ಕೆಲ ತಿಂಗಳ ಹಿಂದೆ ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳನ್ನು ಸರ್ಕಾರ ಅಲ್ಲಗಳೆದಿದೆ. ಇವು ಸುಳ್ಳು…

Read More

ವಿಶೇಷಚೇತನ ಮಗನಿಗೇ ವಿಷ ಹಾಕಿದ ತಂದೆ; ಕಾರಣ ಕೇಳಿದರೆ ಶಾಕ್ ಆಗ್ತೀರಾ! – Kannada News | Bengaluru Father Poisons Specially Abled Son Over Treatment Costs

ಚಿಕಿತ್ಸೆಗೆ ಹಣವಿಲ್ಲವೆಂದು ವಿಶೇಷಚೇತನ ಮಗನಿಗೇ ವಿಷ ಹಾಕಿದ ತಂದೆ! ಬೆಂಗಳೂರು, ಜನವರಿ 04: ಹೆತ್ತ ಮಕ್ಕಳನ್ನು ಸಾಕಲು ತಂದೆ-ತಾಯಿ ಕಷ್ಟ ಪಟ್ಟು ದುಡಿಯುತ್ತಾರೆ. ತಮಗೆಷ್ಟೇ ತೊಂದರೆಗಳಿದ್ದರೂ ಮಕ್ಕಳ ಮುಖ ನೋಡಿಕೊಂಡು ನೋವು ನುಂಗಿಕೊಂಡಿರುತ್ತಾರೆ. ಆದರೆ ಇಲ್ಲೋರ್ವ ಪಾಪಿ ತಂದೆ, ಚಿಕಿತ್ಸೆಗೆ ಹಣವಿಲ್ಲದ ಕಾರಣ ಮಗನಿಗೇ ವಿಷ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ. ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅಲೆದು ಬೇಸತ್ತಿದ್ದ ತಂದೆ, ಈ ಕುಕೃತ್ಯವೆಸಗಿದ್ದು, ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಮಗುವಿನ ಸ್ಥಿತಿ ಗಂಭೀರ ಬಾಗಲೂರು…

Read More

ದಕ್ಷಿಣ ಕೊರಿಯಾ ಅಧ್ಯಕ್ಷರ ಚೀನಾ ಭೇಟಿಗೂ ಮುನ್ನ, ಸಮುದ್ರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ – Kannada News | North Korea Conducts Fresh Missile Launches Into Eastern Waters

ದಕ್ಷಿಣ ಕೊರಿಯಾ, ಜನವರಿ 04: ದಕ್ಷಿಣ ಕೊರಿಯಾ(South Korea) ಅಧ್ಯಕ್ಷ ಲೀ ಜೇ-ಮ್ಯುಂಗ್ ಚೀನಾಗೆ ತೆರಳುವ ಮುನ್ನ ಉತ್ತರ ಕೊರಿಯಾ(North Korea) ದಕ್ಷಿಣ ಕೊರಿಯಾ ಸಮುದ್ರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಜತೆಗಿನ ಶೃಂಗಸಭೆಗಾಗಿ ಲೀ ಚೀನಾಗೆ ತೆರಳಿದ್ದಾರೆ. ಉತ್ತರ ಕೊರಿಯಾ ಭಾನುವಾರ ಬೆಳಿಗ್ಗೆ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು (ಜೆಸಿಎಸ್) ದೃಢಪಡಿಸಿದ್ದಾರೆ. ಕ್ಷಿಪಣಿಯ ವ್ಯಾಪ್ತಿ ಮತ್ತು ನಿಖರತೆಯ ವಿವರವಾದ ವಿಶ್ಲೇಷಣೆ ಇನ್ನೂ ನಡೆಯುತ್ತಿದೆ. ಈ ಸಮಯದಲ್ಲಿ ಈ…

Read More

IPL 2026: ಬಾಂಗ್ಲಾದೇಶ್​ನಲ್ಲಿ ಐಪಿಎಲ್ ಬ್ಯಾನ್? – Kannada News | IPL 2026 Broadcast May Be Ban in Bangladesh

ಬಾಂಗ್ಲಾದೇಶ್  ತಂಡದ ಆಟಗಾರ ಮುಸ್ತಫಿಝುರ್ ರೆಹಮಾನ್​ನನ್ನು ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಕೈ ಬಿಟ್ಟ ಬೆನ್ನಲ್ಲೇ ಕೌಂಟರ್ ಅಟ್ಯಾಕ್ ನೀಡಲು ಬಾಂಗ್ಲಾದೇಶ್ ಸರ್ಕಾರ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಬಾಂಗ್ಲಾದೇಶ್​​ನಲ್ಲಿ ಐಪಿಎಲ್ ಬ್ಯಾನ್ ಮಾಡಲು ಮುಂದಾಗುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್,  ಬಾಂಗ್ಲಾದೇಶ್ ಆಟಗಾರನಿಗೆ ಮಾಡಲಾದ ಅವಮಾನಕ್ಕೆ ಪ್ರತೀಕಾರವಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಯಾವುದೇ…

Read More

Optical Illusion: ರಾಮಗಿಳಿಗಳ ನಡುವೆ ಅಡಗಿರುವ ಊಸರವಳ್ಳಿಯನ್ನು ಗುರುತಿಸಿ – Kannada News | Optical Illusion: Find the chameleon among parrots in this picture.

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media ಟ್ರಿಕ್ಕಿಯಾಗಿರುವ ಒಗಟುಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೆಚ್ಚಿನವರು ಇಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಒಗಟಿನ ಚಿತ್ರವನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ಈ ಚಿತ್ರವನ್ನು ನೋಡಿದ ಕೂಡಲೇ ಉತ್ತರ ಕಂಡುಕೊಳ್ಳುವುದು  ಕಷ್ಟಕರ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಬಣ್ಣಬಣ್ಣದ ರಾಮ ಗಿಳಿಗಳಿವೆ. ಇಲ್ಲಿ ಜಾಣತನದಿಂದ ಮರೆ ಮಾಡಲಾಗಿರುವ ಊಸರವಳ್ಳಿಯನ್ನು ಮರೆಮಾಡಲಾಗಿದೆ. ಇದನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಸಾಧ್ಯವೇ ನೋಡಿ….

Read More

Gold Rate Today Bangalore: ಚಿನ್ನದ ಬೆಲೆ 10 ಗ್ರಾಮ್​ಗೆ 350 ರೂ ಇಳಿಕೆ – Kannada News | Gold Price Today on 4th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 4: ಸತತ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆಗಳು ಈ ವಾರಾಂತ್ಯದಲ್ಲಿ ತುಸು ತಗ್ಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 35 ರೂ ಕಡಿಮೆಯಾದರೆ, ಬೆಳ್ಳಿ ಬೆಲೆ 1 ರೂ ತಗ್ಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಗಳಲ್ಲಿ (Gold Rates) ಅಲ್ಪ ವ್ಯತ್ಯಯಗಳಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,24,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,35,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ…

Read More

ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್ – Kannada News | Kichcha Sudeep says Gilli Nata playing like Pratham and Hanumantha in Bigg Boss Kannada Season 12

ಈ ಬಾರಿ ಗಿಲ್ಲಿ ನಟ ಅವರೇ ಬಿಗ್ ಬಾಸ್ (Bigg Boss Kannada Season 12) ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಬಹುತೇಕರಿಗೆ ಇದೆ. ಆ ಅಭಿಪ್ರಾಯಕ್ಕೆ ತಕ್ಕಂತೆಯೇ ಗಿಲ್ಲಿ ಅವರು ಆಟ ಆಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಈಗಾಗಲೇ ಗಿಲ್ಲಿ (Gilli Nata) ಅವರ ಆಟವನ್ನು ಮೆಚ್ಚಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೂ ಗಿಲ್ಲಿ ಆಟ ಇಷ್ಟ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್​ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ಗಿಲ್ಲಿಯೇ ಗೆಲ್ಲಬಹುದು…

Read More