ಬೆಂಗಳೂರಿನಲ್ಲಿ ಮತ್ತೆ ಹಣಕ್ಕಾಗಿ ಸಂಚು ರೂಪಿಸಿದ ‘ಪಂಕ್ಚರ್ ಮಾಫಿಯಾ’! ಮಾಗಡಿ ರಸ್ತೆಯುದ್ದಕ್ಕೂ ಮೊಳೆಗಳ ರಾಶಿ – Kannada News | Bengaluru Road Safety Alert: Puncture Mafia Scatters Nails, Drivers Beware!
ಬೆಂಗಳೂರು, ಮೇ27: ಬೆಂಗಳೂರಿನಲ್ಲಿ ಜನರಿಗೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ರಸ್ತೆ ಗುಂಡಿಮ ಟ್ರಾಫಿಕ್, ದರೋಡೆ, ಕಳ್ಳತನ ಹೀಗೆ ಅನೇಕ ಸಮಸ್ಯೆಗಳು ಇದೆ. ಇದೀಗ ಸಂಚಾರ ದಟ್ಟಣೆ, ಗುಂಡಿ ಬಿದ್ದ ರಸ್ತೆಗಳ ನಡುವೆ ಈಗ ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಮತ್ತೊಂದು ಘೋರ ಗಂಡಾಂತರ ಎದುರಾಗಿದೆ. ಹೌದು, ನಗರದಲ್ಲಿ ಸದ್ದಡಗಿದ್ದ ಕುಖ್ಯಾತ ‘ಪಂಕ್ಚರ್ ಮಾಫಿಯಾ’ (Nails Puncture Mafia) ಮತ್ತೊಮ್ಮೆ ತನ್ನ ಕೃತ್ಯ ಆರಂಭಿಸಿದೆ. ಈ ಗ್ಯಾಂಗ್ ಸವಾರರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಇತ್ತೀಚೆಗೆ ಮಾಗಡಿ…