Headlines

ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ – Kannada News

ನವದೆಹಲಿ, ಜೂನ್ 11: ಒಮಾನ್ ಕರಾವಳಿಯ ಬಳಿ ವಾಣಿಜ್ಯ ಹಡಗೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾಗರಿಕರು ಸಾವನ್ನಪ್ಪಿರುವುದನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ದಾಳಿಯನ್ನು “ಅತ್ಯಂತ ಆತಂಕಕಾರಿ” ಎಂದು ಹೇಳಿರುವ ಭಾರತ, ಇಂತಹ ದಾಳಿಗಳು ತಕ್ಷಣವೇ ಕೊನೆಗೊಳ್ಳಬೇಕು ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಗ್ರಹಿಸಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಕಡಲ ಸಂಘರ್ಷಗಳ ನಡುವೆ, ಒಮಾನ್ ದೇಶದ ಕರಾವಳಿ ತೀರದ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ನೌಕೆಯೊಂದರ ಮೇಲೆ ಇತ್ತೀಚೆಗೆ ಭೀಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ…

Read More

ಪೆಟ್ರೋಲ್, ಡೀಸಲ್ ಮೇಲಿನ ರಫ್ತು ಸುಂಕ ತಗ್ಗಿಸಿದ ಸರ್ಕಾರ; ಇಂಧನ ಬೆಲೆ ಕಡಿಮೆಗೊಳ್ಳುತ್ತಾ?

ನವದೆಹಲಿ, ಮೇ 31: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತಗಳನ್ನು ಆಧರಿಸಿ, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನಗಳ (ATF) ರಫ್ತಿನ ಮೇಲಿನ ವಿಶೇಷ ತೆರಿಗೆಯನ್ನು (Export Tax) ಕಡಿತಗೊಳಿಸಿದೆ. ನಾಳೆ, ಜೂನ್ 1 ರಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಲೀಟರ್​ಗೆ 3 ರೂನಿಂದ 1.50 ರೂಗೆ ಇಳಿಸಲಾಗಿದೆ. ಲೀಟರ್​ಗೆ ಡೀಸಲ್​ಗೆ 16.5 ರೂ ಇದ್ದ ರಫ್ತು ಸುಂಕವನ್ನು 13.5…

Read More

ರಾಯಚೂರಿನಲ್ಲಿ ರಸ್ತೆಗಿಳಿದ ‘ವಿದ್ಯಾರ್ಥಿ ರಥ’; ಸ್ಕೂಲ್ ಮಕ್ಕಳೀಗಾಗಿಯೇ ರಿಸರ್ವ್​ 15 ಹೊಸ ಬಸ್ಗಳು – Kannada News | Sindhanur’s “Vidhyarthi Ratha”: New Bus Service for 25K Students

ರಾಯಚೂರಿನಲ್ಲಿ ರಸ್ತೆಗಿಳಿದ ‘ವಿದ್ಯಾರ್ಥಿ ರಥ’; ಸ್ಕೂಲ್ ಮಕ್ಕಳೀಗಾಗಿಯೇ ರಿಸರ್ವ್​ 15 ಹೊಸ ಬಸ್ಗಳು ರಾಯಚೂರು, ಜನವರಿ 06: ಕರ್ನಾಟಕದ ಹಲವೆಡೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ರಾಯಚೂರಿನಲ್ಲಿಯೂ ಮಕ್ಕಳು ಇದೇ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಪರಿಹಾರವಾಗಿ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆಂದೇ ಬಸ್ ಸೇವೆ ಆರಂಭವಾಗಿದ್ದು, ಸಿಂಧನೂರು ತಾಲ್ಲೂಕಿನಲ್ಲಿ 15 ಹೊಸ ಬಸ್‌ಗಳನ್ನು ವಿದ್ಯಾರ್ಥಿಗಳಿಗಾಗಿ ರಿಸರ್ವ್ ಮಾಡಲಾಗಿದೆ. ‘ವಿದ್ಯಾರ್ಥಿ ರಥ’ ಹೆಸರಿನ ಯೋಜನೆಯಡಿ ಸೇವೆ ನೀಡಲು ಸಿದ್ಧತೆ ಸಂಪೂರ್ಣಗೊಂಡಿದ್ದು, ಈ ಬಸ್‌ಗಳಲ್ಲಿ ಕೇವಲ ಪಿಯು, ಡಿಗ್ರಿ,…

Read More

Vivo T5 Pro 5G: ಭಾರತದಲ್ಲಿ ಬರೋಬ್ಬರಿ 9,020mAh ಬ್ಯಾಟರಿಯ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಕೇವಲ.. – Kannada News | Vivo launched its new 9020mah big battery smartphone called vivo t5 pro 5g

ಬೆಂಗಳೂರು (ಏ. 15): ಪ್ರಸಿದ್ಧ ವಿವೋ (Vivo) ಕಂಪನಿ ಭಾರತದಲ್ಲಿ ತನ್ನ ಹೊಸ ವಿವೋ ಟಿ5 ಪ್ರೊ 5ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಈ ತಿಂಗಳ ಕೊನೆಯಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮತ್ತು ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ದೇಶದಲ್ಲಿ ಮಾರಾಟಕ್ಕೆ ಬರಲಿದೆ. ಹೊಸ ವಿವೋ ಟಿ5 ಪ್ರೊ 5ಜಿ ಎರಡು ಬಣ್ಣ ಆಯ್ಕೆಗಳು ಮತ್ತು ಮೂರು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7 ಸರಣಿ ಚಿಪ್‌ಸೆಟ್‌ನಿಂದ…

Read More

ಬೌಲಿಂಗ್​ನಲ್ಲಿ ಹೆನ್ರಿ ಮಿಂಚಿಂಗ್: ಬ್ಯಾಟಿಂಗ್​ನಲ್ಲಿ ಹೆನ್ರಿ ಶೈನಿಂಗ್..! – Kannada News | England vs New Zealand, 2nd Test: 3rd Day Highlights

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 391 ರನ್ ಪೇರಿಸಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಬೆನ್ ಡೆಕೆಟ್ 36 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಕಬ್ ಬೆಥೆಲ್…

Read More

ನನ್ನ ನೆನಪಿದೆಯಾ? ಹಳೆಯ ಸ್ನೇಹಿತರನ್ನು ಹುಡುಕಿ ಶಾಲೆಗೆ ಬಂದ ಬಾಲಕ

ಸ್ಥಳ ಬದಲಾವಣೆ, ಜೀವನದ ಜಂಜಾಟದಲ್ಲಿ ಗೆಳೆಯರು ದೂರವಾಗುವುದು ಸಹಜ. ಆದರೆ, ನಿಜವಾದ ಸ್ನೇಹಕ್ಕೆ ಸಮಯ ಮತ್ತು ದೂರ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆ ಸಾಕ್ಷಿಯಾಗಿದೆ. ವರ್ಷದ ಹಿಂದೆ ಕುಟುಂಬದೊಂದಿಗೆ ಬೇರೆ ಊರಿಗೆ ವಲಸೆ ಹೋಗಿದ್ದ ಬಾಲಕ, ತನ್ನ ಹಳೆಯ ಶಾಲಾ ದಿನಗಳನ್ನು ಮತ್ತು ಗೆಳೆಯರನ್ನು ಎಂದಿಗೂ ಮರೆತಿರಲಿಲ್ಲ. ನೆನಪುಗಳು ಆತನನ್ನು ಸದಾ ಕಾಡುತ್ತಿದ್ದವು. ಹೀಗಾಗಿ, ಆತ ಹಳೆಯ ನೆನಪುಗಳನ್ನು ಮರುಕಳಿಸಲು ಮತ್ತು ತನ್ನ ಶಾಲಾ ಸಹಪಾಠಿಗಳನ್ನು ಭೇಟಿಯಾಗಲು ಮತ್ತೆ ತನ್ನ ಹಳೆಯ ಶಾಲೆಗೆ ಮರಳಿದ್ದಾನೆ.ಹಳೆಯ…

Read More

‘ಧುರಂಧರ್ 2’ ಸಿನಿಮಾದಿಂದ ನಿಂತೇ ಹೋಯ್ತು ಅಮಿತಾಬ್ ಬಚ್ಚನ್ ಸಿನಿಮಾ

‘ಧುರಂಧರ್ 2’ (Dhurandhar) ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆ ಆದ ವಾರಕ್ಕೂ ಮುಂಚೆಯೇ 500 ಕೋಟಿಗೂ ಹೆಚ್ಚು ಗಳಿಕೆಯನ್ನು ಭಾರತದಲ್ಲಿ ಮಾಡಿದೆ. ಎಲ್ಲೆಡೆ ಸಿನಿಮಾದ ಶೋಗಳು ಹೌಸ್​​ಫುಲ್ ಆಗುತ್ತಿವೆ. ಅಲ್ಲು ಅರ್ಜುನ್, ರಾಜಮೌಳಿ, ರಜನೀಕಾಂತ್, ರಾಮ್ ಚರಣ್ ಇನ್ನೂ ಹಲವು ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಸಿನಿಮಾವನ್ನು ಕೊಂಡಾಡಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂತೂ ಸಿನಿಮಾ ಬಗ್ಗೆ ಪ್ರಶಂಸೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಇದೀಗ ‘ಧುರಂಧರ್ 2’ ಸಿನಿಮಾದಿಂದಾಗಿ ಅಮಿತಾಬ್ ಬಚ್ಚನ್ ಅವರ…

Read More

ಪ್ರಭಾಸ್ ಅಭಿಮಾನಿಗಳಿಗೆ ತನ್ನ ಮನೆ ವಿಳಾಸ ಕೊಟ್ಟ ‘ರಾಜಾ ಸಾಬ್’ ನಿರ್ದೇಶಕ – Kannada News | The Raja Saab movie director Maruthi gave his address to Prabhas fans

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಕೊನೆಗೂ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಈ ವರ್ಷದ ಆರಂಭದಿಂದಲೂ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಕೊನೆಗೂ ಸಿನಿಮಾ ಮುಂದಿನ ತಿಂಗಳು ಅಂದರೆ ಜನವರಿಯ ಸಂಕ್ರಾಂತಿ ವೇಳೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿದ್ದು ಕಾರ್ಯಕ್ರಮದಲ್ಲಿ ನಿರ್ದೇಶಕ ಮಾರುತಿ ಅವರು, ಪ್ರಭಾಸ್ ಅಭಿಮಾನಿಗಳಿಗೆ ತಮ್ಮ ಮನೆ ವಿಳಾಸ ಕೊಟ್ಟಿದ್ದಾರೆ. ಪ್ರೀ ರಿಲೀಸ್ ಇವೆಂಟ್​​ನಲ್ಲಿ…

Read More

ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ – Kannada News | Rahul Gandhi lowered the dignity of the post of Leader of Opposition Chirag Paswan alleges

ನವದೆಹಲಿ, ಏಪ್ರಿಲ್ 17: ಕೇಂದ್ರ ಸಚಿವ ಮತ್ತು ಎಲ್​ಜೆಪಿ ಸಂಸದ ಚಿರಾಗ್ ಪಾಸ್ವಾನ್ (Chirag Paswan) ಇಂದು ಸಂಸತ್​​ನಲ್ಲಿ ಅಧಿವೇಶನದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಾಡಿದ ಭಾಷಣದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಕಡಿಮೆ ಮಾಡಿದ್ದಾರೆ. ಉದಾಹರಣೆಗಳನ್ನು ನೀಡುವ ಭರದಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ತಮ್ಮ ಜೊತೆ ಎಳೆದುಕೊಂಡು ಮಿತಿ ಮೀರಿ ವರ್ತಿಸಿದ್ದಾರೆ. ಈ ಮೂಲಕ ಅವರ ಪಕ್ಷದಿಂದ ಮೊದಲ ಬಾರಿಗೆ…

Read More

ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್​: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ! – Kannada News | Elderly Couple Left on the Street After Home Locked by Private Finance in Hassan

ಹಾಸನ, ಜನವರಿ 18: ರಾಜ್ಯದಲ್ಲಿ ಖಾಸಗಿ ಫೈನಾನ್ಸ್​​ಗಳ ಹಾವಳಿ ಮಿತಿ ಮೀರುತ್ತಿದ್ದು, ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಂದ ಅಮಾನವೀಯ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿ ಸಣ್ಣಯ್ಯ(80), ಜಯಮ್ಮ(75)ರನ್ನ ಫೈನಾನ್ಸ್​​ ಸಿಬಂದಿ ಹೊರಹಾಕಿದ್ದು, ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಿರುವ ಆರೋಪ ಕೇಳಿಬಂದಿದೆ. 2023ರಲ್ಲಿ ಮಗನ ಕ್ಯಾನ್ಸರ್…

Read More