Headlines

ಎಐ ಬಳಕೆಯಿಂದ ಟ್ರೋಲ್ ಆದ ವರುಣ್ ಧವನ್ ಹೊಸ ಸಿನಿಮಾ ಟೀಸರ್ – Kannada News | Varun Dhawan new film Hai Jawani Toh Ishq Hona Hai teaser gets trolled for using AI

ಬಾಲಿವುಡ್‌ನ ಖ್ಯಾತ ಕಾಮಿಡಿ ಚಿತ್ರಗಳ ನಿರ್ದೇಶಕ ಡೇವಿಡ್ ಧವನ್ ಮತ್ತು ವರುಣ್ ಧವನ್ (Varun Dhawan) ಜೋಡಿಯ ಬಹುನಿರೀಕ್ಷಿತ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ (Hai Jawani Toh Ishq Hona Hai) ಚಿತ್ರದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ವರುಣ್ ಧವನ್ ಜೊತೆ ಸೌತ್ ಸುಂದರಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಎಐ…

Read More

42 ವರ್ಷ ವಯಸ್ಸಿನ ಧನುಷ್​ಗೆ 20ರ ಪ್ರಾಯದ ಸಾರಾ ಅರ್ಜುನ್ ಜೋಡಿ – Kannada News | Sara Arjun Dhanush D56 movie casting age gap controversy details

ಬಾಲನಟಿಯಾಗಿ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿ ಈಗ ನಾಯಕಿಯಾಗಿ ಯಶಸ್ಸು ಕಂಡಿರುವ ಸಾರಾ ಅರ್ಜುನ್ (Sara Arjun) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾದಲ್ಲಿ ಅವರ ನಟನೆ ಗಮನ ಸೆಳೆಯಿತು. ಈಗ ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ಮುಂದಿನ ಚಿತ್ರಕ್ಕೆ (D56) ನಾಯಕಿಯಾಗಿ ಸಾರಾ ಅರ್ಜುನ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಹರದಾಡುತ್ತಿದೆ. ಧನುಷ್ (Dhanush) ಮತ್ತು ಸಾರಾ ಅರ್ಜುನ್ ನಡುವೆ ಇರುವ ವಯಸ್ಸಿನ ಅಂತರದ ಕಾರಣದಿಂದ ಈ ವಿಷಯ ಚರ್ಚೆ…

Read More

ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು – Kannada News | Russian oil cargoes turning towards India amidst West Asia crisis

ನವದೆಹಲಿ, ಮಾರ್ಚ್ 5: ಪಶ್ಚಿಮ ಏಷ್ಯನ್ ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಭಾರತವು ಪೆಟ್ರೋಲಿಯಂ ಕೊರತೆಗೆ ಸಿಲುಕುತ್ತಿದೆ. ಇದೇ ಹೊತ್ತಲ್ಲಿ ರಷ್ಯಾ ದೇಶದಿಂದ ನೆರವಿನ ಹಸ್ತ ಸಿಕ್ಕಿದೆ. ಬ್ಲೂಮ್​ಬರ್ಗ್ ವರದಿ ಪ್ರಕಾರ ರಷ್ಯಾದಿಂದ ತೈಲ ಹೊತ್ತ ಮೂರು ಹಡಗುಗಳು (Oil cargoes) ಭಾರತಕ್ಕೆ ಬರುತ್ತಿವೆ. ಇದರಲ್ಲಿ ಒಂದು ಹಡಗು ನಿನ್ನೆಯೇ (ಫೆ. 4) ಭಾರತಕ್ಕೆ ಬಂದಾಗಿದೆಯಂತೆ. ಈ ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ ಇದೆ. ಒಡುನೆ, ಮಟಾರಿ ಮತ್ತು ಇಂದ್ರಿ…

Read More

ಹೇಗೆ ಮಾತನಾಡಬೇಕು? ಅಣ್ಣಾವ್ರು ಹೇಳಿಕೊಟ್ಟ ಪಾಠ ನೆನಪಿಸಿಕೊಂಡ ನಟಿ ಅಂಬಿಕಾ – Kannada News | Actress Ambika talks about Dr Rajkumar’s advice about language to her

ಹಿರಿಯ ನಟಿ ಅಂಬಿಕಾ (Ambika) ಮೂಲತಃ ಕೇರಳದವರು ಆದರೆ ಕನ್ನಡದಲ್ಲಿ ಹಲವಾರು ನೆನಪುಳಿಯುವ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವಿಶೇಷವಾಗಿ ಡಾ ರಾಜ್​ಕುಮಾರ್ ಜೊತೆಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹಲ್ಲಾದ’, ‘ಅಪೂರ್ವ ಸಂಗಮ’ ಇನ್ನೂ ಕೆಲವು. ಅಂಬರೀಶ್, ವಿಷ್ಣುವರ್ಧನ್ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಂಬಿಕ. ಈಗಲೂ ಸಹ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದುಂಟು. ಅಂಬಿಕ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕನ್ನಡದ ಮೇರು ನಟ ಡಾ ರಾಜ್​ಕುಮಾರ್…

Read More

ಮುಂದಕ್ಕೆ ಹೋಗುತ್ತಾ ‘ಪೆದ್ದಿ’ ಸಿನಿಮಾ? ಉತ್ತರಕ್ಕೆ ಕಾದಿರುವ ರಾಮ್ ಚರಣ್ ಫ್ಯಾನ್ಸ್

‘ಮೆಗಾ ಪವರ್ ಸ್ಟಾರ್’ ರಾಮ್ ಚರಣ್ ಮತ್ತು ‘ಉಪ್ಪೇನ’ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾ ಬಗ್ಗೆ ಕಳೆದ ಕೆಲವು ದಿನಗಳಿಂದ ವದಂತಿಗಳು ಹರಿದಾಡುತ್ತಿವೆ. ಈ ಪ್ಯಾನ್ ಇಂಡಿಯಾ ಚಿತ್ರವು ನಿಗದಿತ ಸಮಯಕ್ಕೆ ಬಿಡುಗಡೆಯಾಗುವುದಿಲ್ಲ ಎಂಬ ಗಾಳಿಸುದ್ದಿಯಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಈ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಸಿಗುವ ನಿರೀಕ್ಷೆ ಇದೆ. ಅದಕ್ಕಾಗಿ ರಾಮ್ ಚರಣ್ (Ram Charan) ಫ್ಯಾನ್ಸ್ ಕಾದಿದ್ದಾರೆ. ‘ಪೆದ್ದಿ’ ಸಿನಿಮಾದ ಕೆಲಸಗಳು ಬಾಕಿ ಇರುವುದರಿಂದ…

Read More

ಚಿತ್ರದುರ್ಗ: ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು – Kannada News | 4 Year Old Boy Vaishnav Dies From Chest Burning Sensation in Chitradurga

ಚಿತ್ರದುರ್ಗ, ಜೂನ್ 17: ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದ ದುರ್ಘಟನೆಯೊಂದರಲ್ಲಿ ನಾಲ್ಕು ವರ್ಷದ ಬಾಲಕ ವೈಷ್ಣವ್ ಎದೆ ಉರಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ. ವೈಷ್ಣವ್ ತನ್ನ ಪೋಷಕರಿಗೆ ಎದೆ ಭಾಗದಲ್ಲಿ ಉರಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿಕೊಂಡಿದ್ದನು. ಆರಂಭದಲ್ಲಿ ಪೋಷಕರು ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸಿ, ಮನೆಮದ್ದುಗಳನ್ನು ನೀಡಿದ್ದರು. ಆದರೆ, ವೈಷ್ಣವ್ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆತಂಕಗೊಂಡ ಪೋಷಕರು ವೈಷ್ಣವ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ವೈಷ್ಣವ್ ಕೊನೆಯುಸಿರೆಳೆದಿದ್ದಾನೆ….

Read More

70 ಸಾವಿರ ರೂ. ಕಾರನ್ನು ಮಾಡಿಫೈ ಮಾಡಿದ ವಿದ್ಯಾರ್ಥಿಗೆ 1 ಲಕ್ಷ ರೂ. ದಂಡ: ಫೈನ್ ಹಾಕಬೇಡಿ ಎಂದು ರಾಜಕಾರಣಿಗಳ ಒತ್ತಡ – Kannada News | Illegal Car Mod: Bangalore Student Pays 1.11 Lakh Fine for Loud Silencer

ಬೆಂಗಳೂರು, ಜ.16: ಬೆಂಗಳೂರಿನಲ್ಲಿ ಸಂಚಾರ ನಿಯಮ (Bangalore traffic fine) ಉಲ್ಲಂಘನೆ ಮಾಡಿ ದಂಡ ಹಾಕಿಸಿಕೊಳ್ಳುವುದು ಒಂದು ಕಡೆ ಹೆಚ್ಚಾಗುತ್ತಿದ್ದಾರೆ. ಮತ್ತೊಂದು ಕಡೆ ವಾಹನ ಮಾಡಿಫೈ ಮಾಡಿ ದಂಡ ಹಾಕಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬ 70 ಸಾವಿರ ಕಾರಿಗೆ 1.11 ಲಕ್ಷ ರೂ. ದಂಡ ಹಾಕಿಸಿಕೊಂಡಿದ್ದಾನೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ಅಷ್ಟಕ್ಕೂ ಈ ವಿದ್ಯಾರ್ಥಿಗೆ ಅಷ್ಟೊಂದು ದಂಡ ಯಾಕೆ ಹಾಕಿದ್ದಾರೆ ಗೊತ್ತಾ? ಈ ಯುವಕ ತನ್ನ ಕಾರಿನ ಸೈಲೆನ್ಸರ್​​ನ್ನು ಅಕ್ರಮವಾಗಿ ಮಾಡಿಫೈ…

Read More

ರಾಜ್ಯ ಸರ್ಕಾರಿ ಅಧಿಕಾರಿಗಳಿಂದ ಮೂರು ವರ್ಷದಲ್ಲಿ 95 ವಿದೇಶ ಪ್ರವಾಸ; ಸರ್ಕಾರಕ್ಕೆ ವೆಚ್ಚ ಆಗಿದ್ದು ಎಷ್ಟು?

ಬೆಂಗಳೂರು, ಮಾರ್ಚ್ 20: ರಾಜ್ಯ ಸರ್ಕಾರಿ ಅಧಿಕಾರಿಗಳು 2023ರಿಂದೀಚೆ ಮಾಡಿರುವ ವಿದೇಶೀ ಪ್ರವಾಸಗಳ (Foreign Trips) ಸಂಖ್ಯೆ 95 ಎನ್ನಲಾಗಿದೆ. ವಿಧಾನಸಭಾ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ವರದಿಯಲ್ಲಿ ಈ ಮಾಹಿತಿ ಇದೆ. ಸರ್ಕಾರಿ ಅಧಿಕಾರಿಗಳ ಈ ವಿದೇಶ ಪ್ರವಾಸಗಳಲ್ಲಿ ಹೆಚ್ಚಿನವಕ್ಕೆ ಸರ್ಕಾರದಿಂದಲೇ ವೆಚ್ಚ ಭರಿಸಲಾಗಿದೆ. ತೆರಿಗೆ ಪಾವತಿದಾರರ ಹಣವನ್ನು ಈ ಪ್ರವಾಸಗಳಿಗೆ ಬಳಕೆ ಮಾಡಲಾಗಿದೆ. ದತ್ತಾಂಶ ಪ್ರಕಾರ 95 ವಿದೇಶ ಪ್ರವಾಸಗಳ ಪೈಕಿ 58 ಪ್ರವಾಸಗಳಿಗೆ ಸರ್ಕಾರದಿಂದ 20.28 ಕೋಟಿ ರೂ…

Read More

‘ನಿನ್ನ ಜೀವನ ನಡೆಯೋದೇ ನಮ್ಮಿಂದ!’: ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ

ಬೆಂಗಳೂರು, ಮೇ,31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಥಳೀಯರು ಹಾಗೂ ಪರಭಾಷಿಕರ ನಡುವಿನ ಭಾಷಾ ಸಂಘರ್ಷ ಮತ್ತು ದರ್ಪದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದೀಗ ಆಟೋ ಪ್ರಯಾಣದ ವೇಳೆ ಹೆಚ್ಚಿನ ಲಗೇಜ್ ತಂದಿದ್ದನ್ನು ಪ್ರಶ್ನಿಸಿದ ಆಟೋ ಡ್ರೈವರ್ ಒಬ್ಬನ ಮೇಲೆ ಮಹಿಳೆ ಸೇರಿದಂತೆ ನಾಲ್ವರು ಹಿಂದಿ ಭಾಷೆಯಲ್ಲಿ ನಿಂದಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಹಿಳೆ ಸೇರಿದಂತೆ ನಾಲ್ವರು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸಲು ಆಟೋ ಬುಕ್ ಮಾಡಿದ್ದರು. ಆದರೆ, ಅವರು ನಿಯಮಕ್ಕಿಂತ ಅತಿ…

Read More

ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಮೇಲಿರುವ ಚಿನ್ನಾಭರಣವನ್ನೇ ಕದ್ದ ಕಳ್ಳ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಕಲಬುರಗಿ, ಏಪ್ರಿಲ್ 01: ಜಿಲ್ಲೆಯಲ್ಲಿ ದೇವಸ್ಥಾನ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ನಗರದ ಕುವೆಂಪು ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕಳ್ಳನು ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಮೇಲಿದ್ದ ಚಿನ್ನಾಭರಣ ಕದ್ದಿದ್ದಾನೆ. ಕಬ್ಬಿಣದ ರಾಡಿನಿಂದ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಖದೀಮನು ದೇವಿಯ ಕೊರಳಲ್ಲಿದ್ದ ಸುಮಾರು 9 ಗ್ರಾಂ ತೂಕದ ಚಿನ್ನದ ತಾಳಿ ಹಾಗೂ 100 ಗ್ರಾಂ ತೂಕದ ಬೆಳ್ಳಿ ಮುಖವಾಡವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ದೇವಸ್ಥಾನದ ಸಿಸಿ ಕ್ಯಾಮೆರಾಗಳಲ್ಲಿ ಸೆರೆವಾಗಿದ್ದು, ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು…

Read More