Headlines

Tv9 Kannada News Live: ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ; ರಾಜ್ಯದಲ್ಲಿ ಭಾರಿ ಮಳೆ; ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | Tv9 Kannada News Live: Bengaluru Airport Air India Tail Strike; Karnataka Rain Alert

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada ಬೆಂಗಳೂರು, ಮೇ 21: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಬಂದ ಏರ್ ಇಂಡಿಯಾ ವಿಮಾನವೊಂದು (Air India Flight) ಲ್ಯಾಂಡಿಂಗ್​​ ವೇಳೆ ಅವರ ಹಿಂಭಾಗ ರನ್​ವೇಗೆ ಅಪ್ಪಳಿಸಿದ ಘಟನೆ ಇಂದು ನಡೆದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ವರದಿ ಆಗಿದೆ. ಸದ್ಯ 181 ಪ್ರಯಾಣಿಕರು ಸೇರಿದಂತೆ ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಂತ್ರಿಕ ಸಮಸ್ಯೆಯಾ ಅಥವಾ ಪೈಲಟ್​​ಗಳ ಎಡವಟ್ಟಾ…

Read More

T20 World Cup: ತವರಿನಲ್ಲಿ ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ 20 ರನ್ ಜಯ – Kannada News | 2026 T20 World Cup: Sri Lanka Beat Ireland by 20 Runs in Colombo Opener

2026 ರ ಟಿ20 ವಿಶ್ವಕಪ್‌ನ (T20 World Cup 2026) ಆರನೇ ಪಂದ್ಯ ಶ್ರೀಲಂಕಾ ಮತ್ತು ಐರ್ಲೆಂಡ್ ( Sri Lanka vs Ireland) ನಡುವೆ ನಡೆಯಿತು. ಈ ಪಂದ್ಯವು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಶ್ರೀಲಂಕಾ, ಐರ್ಲೆಂಡ್ ತಂಡವನ್ನು 20 ರನ್‌ಗಳಿಂದ ಸೋಲಿಸಿ ತವರಿನಲ್ಲಿ ಗೆಲುವಿನ ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಐರ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ…

Read More

HPCL Recruitment 2026: ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ 731 ಹುದ್ದೆಗಳಿಗೆ ನೇಮಕಾತಿ, 60 ಲಕ್ಷ ರೂ. ವರೆಗೆ ಸಂಬಳ

ಪ್ರತಿಷ್ಠಿತ ಸಾರ್ವಜನಿಕ ವಲಯದ ಇಂಧನ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ದೊಡ್ಡ ಪ್ರಮಾಣದ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಕಂಪನಿಯು ಜೂನಿಯರ್ ಎಕ್ಸಿಕ್ಯೂಟಿವ್‌ಗಳು, ಎಂಜಿನಿಯರ್‌ಗಳು, ಅಧಿಕಾರಿಗಳು ಮತ್ತು ಇತರ ಹಲವು ಹುದ್ದೆಗಳು ಸೇರಿದಂತೆ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ 700 ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವಿವಿಧ…

Read More

ಮುಜಾಫರ್‌ಪುರ ಅಗ್ನಿ ದುರಂತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಆಸ್ಪತ್ರೆ ನೋಂದಣಿ ರದ್ದು, ಮೂವರ ಬಂಧನ – Kannada News

ಮುಜಾಫರ್‌ಪುರ, ಜೂನ್ 6: ಬಿಹಾರದ ಮುಜಾಫರ್‌ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೊಬ್ಬ ರೋಗಿ ಮೃತಪಟ್ಟಿದ್ದಾರೆ. ಇದರೊಂದಿಗೆ ದುರಂತದಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಆಸ್ಪತ್ರೆಯ ನೋಂದಣಿಯನ್ನು ತಕ್ಷಣದಿಂದಲೇ ರದ್ದುಗೊಳಿಸಿದ್ದು, ಸುರಕ್ಷತಾ ಲೋಪಗಳ ಆರೋಪದ ಮೇಲೆ ಮೂವರು ಸಿಬ್ಬಂದಿಯನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಇಂದು ಮೃತಪಟ್ಟ ಸಂತ್ರಸ್ತರನ್ನು ಮುಜಾಫರ್‌ಪುರ ಜಿಲ್ಲೆಯ ಪಾರ್ರಿ ಗ್ರಾಮದ ನಿವಾಸಿ ಅಂಜನಿ ಕುಮಾರ್ ಸಿಂಗ್ ಎಂದು…

Read More

Video: ವಿಶ್ವ ಆರೋಗ್ಯ ಸಂಸ್ಥೆಯ ಶೃಂಗಸಭೆಯಲ್ಲಿ ಅಶ್ವಗಂಧ ಅಂಚೆ ಚೀಟಿ ಬಿಡುಗಡೆ, ಸಾಂಪ್ರದಾಯಿಕ ಔಷಧಗಳ ಬಗ್ಗೆ ಪ್ರಧಾನಿ ಮೋದಿ ಮಾತು – Kannada News | Ashwagandha: PM Modi Highlights Traditional Medicine Benefits at WHO Summit

ನವದೆಹಲಿ, ಡಿಸೆಂಬರ್ 20: ವಿಶ್ವ ಆರೋಗ್ಯ ಸಂಸ್ಥೆಯ ಶೃಂಗಸಭೆಯಲ್ಲಿ ಅಶ್ವಗಂಧ ಕುರಿತ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಅಷ್ಟೇ ಅಲ್ಲದೆ ಸಾಂಪ್ರದಾಯಿಕ ಔಷಧ ಅಶ್ವಗಂಧದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಸಾಂಪ್ರದಾಯಿಕ ಔಷಧಕ್ಕೆ ಅರ್ಹವಾದ ಮನ್ನಣೆ ಸಿಗುತ್ತಿಲ್ಲ ಎಂದು ಹೇಳಿದರು. ತನ್ನ ವ್ಯಾಪ್ತಿಯನ್ನು ವಿಸ್ತರಿಸಲು, ಸಾಂಪ್ರದಾಯಿಕ ಔಷಧವು ವಿಜ್ಞಾನದ ಮೂಲಕ ಸಾರ್ವಜನಿಕ ವಿಶ್ವಾಸವನ್ನು ಗಳಿಸಬೇಕು. ಇದನ್ನು ಶತಮಾನಗಳಿಂದ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಬಳಸಲಾಗುತ್ತಿದೆ. COVID-19 ಸಮಯದಲ್ಲಿ, ಅದರ ಜಾಗತಿಕ ಬೇಡಿಕೆ ವೇಗವಾಗಿ…

Read More

ಬೆಂಗಳೂರು ಟನಲ್ ರಸ್ತೆ ಟೆಂಡರ್ ಅದಾನಿ ಗ್ರೂಪ್ ಪಾಲು, ಧರ್ಮ ಸಂಕಟಕ್ಕೆ ಸಿಲುಕಿದ ಸಿದ್ದರಾಮಯ್ಯ ಸರ್ಕಾರ – Kannada News | Adani Group Emerges Lowest Bidder For Bengaluru Tunnel Road As Cost Gap And Policy Debate Intensify

ಬೆಂಗಳೂರು, (ಡಿಸೆಂಬರ್ 22): ಬೆಂಗಳೂರು ಟನಲ್ ಮಾರ್ಗದ (bengaluru tunnel road) ಟೆಂಡರ್ ಅದಾನಿ ಗ್ರೂಪ್​​ (Adani Group) ಪಾಲಾಗುವ ಸಾಧ್ಯತೆಗಳಿವೆ. ಕಾರಣ ಟೆಂಡರ್ ಸಲ್ಲಿಸಿರುವ ಕಂಪನಿಗಳ ಪೈಕಿ ಅದಾನಿ ಗ್ರೂಪ್ ಅತೀ ಕಡಿಮೆ ಬಿಡ್ ಮಾಡಿದೆ. ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಅಂದರೆ 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. (ಗ್ರೇಟರ್ ಬೆಂಗಳೂರು ಅಥಾರಿಟಿ(GBA) 17,698 ಕೋಟಿಗೆ ಬಿಡ್ ಸೀಮಿತ ಮಾಡಿತ್ತು. ಆದ್ರೆ, ಜಿಬಿಎ ಕೋಟ್ ಮಾಡಿದ್ದಕ್ಕಿಂತ ಶೇ. 24ರಷ್ಟು ಹೆಚ್ಚಿನ…

Read More

ಮೊದಲೇ ಪ್ರಕಟವಾಗುವ ಪಿಯುಸಿ ಇಂಟರ್​​​ನಲ್ ಮಾರ್ಕ್ಸ್​​ ಎಲ್ಲಿ? ಹೇಗೆ ನೋಡಬೇಕು? ಇಲ್ಲಿದೆ ವಿವರ – Kannada News | How And Where Checking 2nd puc internal marks, here Is Details

ಬೆಂಗಳೂರು, (ಫೆಬ್ರವರಿ 17): ಇದೇ ಫೆಬ್ರವರಿ 28ರಿಂದ ಮಾರ್ಚ್‌ 17ರ ವರೆಗೆ ದ್ವಿತೀಯ ಪಿಯುಸಿ (2nd PUC Exmas) ಹಾಗೂ ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು (SSLC Exams 2026) ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಫೆ.28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ, ಮಾ. 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು…

Read More

ಕೌಟಿಂಬಿಕ ಕಲಹ: ಬೆಂಕಿ ಹಚ್ಚಿಕೊಂಡು ರಾಮನಗರದಲ್ಲಿ 5 ತಿಂಗಳ ಗರ್ಭಿಣಿ ಆತ್ಮಹತ್ಯೆ

ರಾಮನಗರ, ಮಾರ್ಚ್​​ 12: ಕೌಟಿಂಬಿಕ ಕಲಹ ಹಿನ್ನೆಲೆ ಐದು ತಿಂಗಳ ಗರ್ಭಿಣಿ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮನೆಯ ರೂಮ್​​ನಲ್ಲಿಯೇ ನಯನಾ (19) ಮೃತಪಟ್ಟಿದ್ದಾರೆ. ಕಳೆದ 9 ತಿಂಗಳ ಹಿಂದೆ ಸುನೀಲ್​​ ಜೊತೆ ನಯನಾ ಅವರ ವಿವಾಹವಾಗಿತ್ತು ಎನ್ನಲಾಗಿದೆ. ಪತಿ ಸುನೀಲ್, ಅತ್ತೆ ಹಾಗೂ ಮಾವನ ವಿರುದ್ಧ ಯುವತಿಯ ಪೋಷಕರು ದೂರು ನೀಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ…

Read More

ಗ್ಯಾಸ್ ಟ್ರಬಲ್ ಆಯ್ತು, ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!

ಬೆಂಗಳೂರು, ಮಾರ್ಚ್ 25: ಭಾರತ್ ಪೆಟ್ರೋಲಿಯಂ ಲಿಮಿಟೆಡ್‌ನಿಂದ ಇಂಧನ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಈ ಕುರಿತು ಎಚ್ಚರಿಕೆ ನೀಡಿದೆ. ಕಂಪನಿಯು ಮುಂಗಡ ಹಣ ಪಡೆದಿದ್ದರೂ ಲೋಡ್ ನೀಡುತ್ತಿಲ್ಲ ಎಂದು ಫೆಡರೇಶನ್ ತಿಳಿಸಿದೆ. ಈ ಸಮಸ್ಯೆ ಪ್ರಸ್ತುತ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಾದ ಆನೇಕಲ್, ಕೋಲಾರ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ಭಾಗಗಳಲ್ಲಿ ಕಂಡುಬಂದಿದೆ. ಇದು ಮುಂದಿನ ದಿನಗಳಲ್ಲಿ ರಾಜಧಾನಿ…

Read More

ಕಲಬರ್ಗಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಮೌಲ್ಯ, ಮಾನವೀಯ ಮೌಲ್ಯ ಬೋಧಿಸಿದ ಮುನಾವರ್ ಜಮಾ

ಅಂತರರಾಷ್ಟ್ರೀಯ ಖ್ಯಾತಿಯ ಮೋಟಿವೇಶನಲ್ ಸ್ಪೀಕರ್ ಹಾಗೂ ಶಿಕ್ಷಣತಜ್ಞರಾದ ಮುನಾವರ್ ಜಮಾ (Munawar Zama) ಅವರು ಕಲಬುರಗಿಯ ಯುನೈಟೆಡ್ ಕಾಲೇಜ್ ಆಫ್ ಫಿಸಿಯೊಥೆರಪಿ ಮಹತ್ವದ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಉದ್ದೇಶಿಸಿ ಮೌಲ್ಯಾಧಾರಿತ ಮತ್ತು ಜೀವನೋನ್ನತಿ ಸಂದೇಶಗಳನ್ನು ನೀಡಿದರು. ಈ ಶಿಕ್ಷಣ ಸಂಸ್ಥೆಯು ಡಾ. ವಿಕ್ರಂ ಸಿದ್ದರೆಡ್ಡಿ (Dr Vikram Sidda Reddy) ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಹಾಗೂ ನೈತಿಕ ಆರೋಗ್ಯ ಸೇವಾ ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು…

Read More