ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ, ಪೊಲೀಸರಿಂದ ಲಘು ಲಾಠಿ ಚಾರ್ಜ್ – Kannada News | Ruckus Against MLA Pradeep Eshwar During Kempegowda Jayanthi Event In Chikkaballapura
ಚಿಕ್ಕಬಳ್ಳಾಪುರ, (ಜೂನ್ 27): ರಾಜ್ಯಾದೆಲ್ಲೆಡೆ ಇಂದು (ಜೂನ್ 27) ಕೆಂಪೇಗೌಡ ಜಯಂತಿ (Kempegowda Jayanti) ಕಾರ್ಯಕ್ರಮ ಆಚರಣೆ ಮಾಡಲಾಯ್ತು. ಆದ್ರೆ, ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ. ಹೌದು…ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಹೇಳನ ಹೇಳಿಕೆ ನೀಡಿದ ಸಂಬಂಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು. ಕಾರ್ಯಕ್ರಮ ವೇದಿಕೆಯಿಂದ ಅವರನ್ನು ಹೊರಕಳಿಸುವಂತೆ ಯುವಕರ ಗುಂಪು ಲ್ಲಿ ಗಲಾಟೆ ಮಾಡಿದ್ದು, ಈ ವೇಳೆ ಮಾತಿನ ಚಕಮಕಿ, ನೂಕಾಟ-ತಳ್ಳಾಟ ನಡೆಯಿತು….