ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ! ಚಿಕ್ಕಮಗಳೂರಿಗೆ ಹೊಷ ವರ್ಷಾಚರಣೆಗೆ ಬಂದು ರಂಪಾಟ – Kannada News | Chikkamagaluru: Policeman Attacks Workers, Vandalises Tea Stall During New Year Celebrations, CCTV Video Surfaces
ಚಿಕ್ಕಮಗಳೂರು, ಜನವರಿ 1: ಬೆಂಗಳೂರಿನಿಂದ ಹೊಸ ವರ್ಷದ ಆಚರಣೆಗೆಂದು ಚಿಕ್ಕಮಗಳೂರಿಗೆ ಬಂದಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ರಂಪಾಟ ಮಾಡಿರುವುದು ವರದಿಯಾಗಿದೆ. ಚಹಾ ಕೊಡಲು ತಡವಾಯಿತು ಎಂಬ ಕಾರಣಕ್ಕೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಮೀಸಲು ಪೊಲೀಸ್ ಪಡೆಯ ಕೋರಮಂಗಲದ ಸಿಬ್ಬಂದಿ ಪುನೀತ್ ಹಲ್ಲೆ ಮಾಡಿದ್ದಾರೆ. ಮುಂಜಾನೆ ಸಮಯದಲ್ಲಿ ಪುನೀತ್ ಮತ್ತು ಅವರ ಸ್ನೇಹಿತರು ಬಸ್…