ಹೊಸ ವರ್ಷಕ್ಕೆ ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ, 100ಕ್ಕೂ ಹೆಚ್ಚು ಉಗ್ರರು ಒಳನುಸುಳಲು ಸಂಚು – Kannada News | High Alert in Jammu and Kashmir Ahead of New Year Celebrations
ಶ್ರೀನಗರ, ಡಿಸೆಂಬರ್ 31: ಹೊಸ ವರ್ಷ(New Year)ವನ್ನು ಬರಮಾಡಿಕೊಳ್ಳಲು ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿವೆ. ಜಮ್ಮು ಮತ್ತು ಕಾಶ್ಮೀರದ 740 ಕಿಲೋಮೀಟರ್ ಉದ್ದದ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಎಚ್ಚರಿಕೆ ನೀಡಲಾಗಿದೆ. ಗಡಿಯುದ್ದಕ್ಕೂ 60 ಲಾಂಚ್‌ಪ್ಯಾಡ್‌ಗಳಿಂದ ಕಾರ್ಯನಿರ್ವಹಿಸುತ್ತಿರುವ 100 ಕ್ಕೂ ಹೆಚ್ಚು ಭಯೋತ್ಪಾದಕರು ಹೊಸ ವರ್ಷದ ದಿನದಂದು ಒಳನುಸುಳಲು ಪ್ರಯತ್ನಿಸಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಗುಪ್ತಚರ ಮಾಹಿತಿಯ ನಂತರ, ಭಾರತೀಯ ಸೇನೆಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಸರಿಸುಮಾರು 13,000 ಅಡಿಗಳಷ್ಟು ದೂರದಲ್ಲಿ…