Male Mahadeswara Hundi: ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ! – Kannada News | Male Mahadeswara Temple Hundi Collection Exceeds Rs. 3.37 Crore
ಚಾಮರಾಜನಗರ, ಜುಲೈ 29: ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಅರ್ಪಿಸಿದ ಕಾಣಿಕೆಯ ಮೊತ್ತವು 3 ಕೋಟಿ 37 ಲಕ್ಷ ರೂಪಾಯಿಗಳನ್ನು ದಾಟಿದೆ. ಜೂನ್ 17 ರಿಂದ ಜುಲೈ 27 ರವರೆಗಿನ 41 ದಿನಗಳ ಅವಧಿಯಲ್ಲಿ ಸಂಗ್ರಹವಾದ ಕಾಣಿಕೆ ಇದಾಗಿದೆ. ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಗಳ ನೇತೃತ್ವದಲ್ಲಿ ಈ ಹುಂಡಿ ಎಣಿಕೆ ಕಾರ್ಯವು ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ನಡೆಯಿತು. ನಗದು ಕಾಣಿಕೆ ಜೊತೆಗೆ ಭಕ್ತರು 58 ಗ್ರಾಂ ಚಿನ್ನ…