‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ 30 ನಿಮಿಷಗಳ ಫೈಟ್ – Kannada News
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ವಾರಾಣಸಿ’ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬರುತ್ತಿವೆ. ಈಗ ಚಿತ್ರದ ಕಥೆಯ ಬಗ್ಗೆ ಸ್ವತಃ ರಾಜಮೌಳಿ ಅವರ ತಂದೆ ಹಾಗೂ ಖ್ಯಾತ ಚಿತ್ರಕಥೆ ಲೇಖಕ ವಿಜಯೇಂದ್ರ ಪ್ರಸಾದ್ ಅವರು ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ. ರಾಮಾಯಣದ ಪ್ರಮುಖ ಘಟ್ಟವಾದ ರಾಮ ಮತ್ತು ಕುಂಭಕರ್ಣನ ನಡುವಿನ ಮಹಾಯುದ್ಧ ಈ ಸಿನಿಮಾದಲ್ಲಿ ಇರಲಿದ್ದು, ಅದು ಬರೋಬ್ಬರಿ 30 ನಿಮಿಷಗಳ ಕಾಲ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ನಡೆದ…