Video: ಕುಡಿದ ಅಮಲಿನಲ್ಲಿ ಪೊಲೀಸರನ್ನು ಎಳೆದಾಡಿದ ಯುವಕರು, ಐವರ ಮೇಲೆ ಬಿತ್ತು ಎಫ್ಐಆರ್ – Kannada News | Devanahalli Bypass: Drunk Driving Check Turns Violent, Youths Assault Police
ದೇವನಹಳ್ಳಿ, ಡಿ.30: ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಮದ್ಯಪಾನದ ಅಮಲಿನಲ್ಲಿದ್ದ ಯುವಕರು ಅವಾಜ್ ಹಾಕಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಬೈಪಾಸ್ನಲ್ಲಿ ನೆನ್ನೆ (ಡಿ.29) ರಾತ್ರಿ ನಡೆದಿದೆ. ಡಿಡಿ ಕೇಸ್ ಚೇಕಿಂಗ್ (ಮದ್ಯಪಾನ ಮಾಡಿ ವಾಹನ ಚಲಾಯಿಸುವುದು) ವೇಳೆ ಅವಾಜ್ ಹಾಕಿದ್ದ ಈ ಯುವಕರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕನನ್ನು ಬ್ರೆತ್ ಅನಾಲೈಸರ್ಗೆ ಊದಲು ಹೇಳಿದ್ದಾರೆ. ಆದರೆ ಇದಕ್ಕೆ ಚಾಲಕ ನಿರಾಕರಿಸಿದ್ದಾನೆ. ಈ ವಿಚಾರವಾಗಿ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾರಿನಿಂದ ಕೆಳಗಿಳಿದು…