Headlines

Union Budget 2026: ಜನವರಿ 28ರಿಂದ ಸಂಸತ್ ಅಧಿವೇಶನ ಆರಂಭ; ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್ ಮಂಡನೆ – Kannada News | Parliament Budget Session to begin on January 28 Union Budget 2026 to be tabled on February 1

ನವದೆಹಲಿ, ಜನವರಿ 9: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 28ರಂದು ಆರಂಭವಾಗಲಿದ್ದು, ಫೆಬ್ರವರಿ 1ರಂದು ಕೇಂದ್ರ ಬಜೆಟ್ 2026 (Union Budget 2026) ಮಂಡನೆಯಾಗಲಿದೆ. ಈ ಕುರಿತು ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಇಂದು ಬಿಡುಗಡೆ ಮಾಡಿದೆ. ಬಜೆಟ್ ಅಧಿವೇಶನವು ಜನವರಿ 28ರಂದು ಪ್ರಾರಂಭವಾಗಿ ಏಪ್ರಿಲ್ 2ರವರೆಗೆ ಮುಂದುವರಿಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಅಧಿವೇಶನಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಅವರು ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಜೆಟ್…

Read More

Video: ಕಾಲಿಗೆ ಬೀಳಲು ಬಂದ್ರೆ ಹೆದರಿ ಹಿಂದಕ್ಕೆ ಓಡಿದ ಸಿಎಂ ಮಮತಾ ಬ್ಯಾನರ್ಜಿ

ಕಾಲಿಗೆ ಬೀಳಲು ಬಂದವನನ್ನು ದಾಳಿ ಮಾಡಲು ಬಂದ ಎಂದು ತಪ್ಪು ತಿಳಿದುಕೊಂಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆದರಿ ಹಿಂದಕ್ಕೆ ಓಡಿರುವ ಘಟನೆ ನಡೆದಿದೆ. ಮಮತಾ ಬ್ಯಾನರ್ಜಿ ತಪ್ಪ ಪಕ್ಷದ ಸದಸ್ಯರ ಜತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ವ್ಯಕ್ತಿಯೊಬ್ಬ ಓಡಿ ಬಂದು ಏಕಾಏಕಿ ಮಮತಾ ಕಾಲಿಗೆ ಬೀಳಲು ಮುಂದಾಗುತ್ತಾರೆ. ಆಗ ಭದ್ರತಾ ಸಿಬ್ಬಂದಿ ಆತನನ್ನು ತಡೆದರೂ ಕೂಡ ಒಮ್ಮೆಲೆ ಗಾಬರಿಗೊಂಡ ಮಮತಾ ಭಯದಿಂದ ಹಿಂದಕ್ಕೆ ಓಡುತ್ತಾರೆ.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ …

Read More

ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ ಆರೆಂಜ್ ಎಕನಾಮಿ ಎಂದರೇನು? – Kannada News | What is Orange Economy, highlighted in the Budget by Nirmala Sitharaman

ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ (Union Budget 2026) ಭಾಷಣದಲ್ಲಿ ಆರೆಂಜ್ ಎಕನಾಮಿ (Orange Economy) ಬಗ್ಗೆ ಮಾತನಾಡಿದ್ದಾರೆ. ಆರೆಂಜ್ ಎಕನಾಮಿ ಅಥವಾ ಕಿತ್ತಳೆ ಆರ್ಥಿಕತೆಗೆ ಪುಷ್ಟಿ ಕೊಡುವುದಾಗಿ ಹೇಳಿದ್ದಾರೆ. ಬಜೆಟ್​ಗೆ ಮುಂಚೆ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲೂ ಕಿತ್ತಳೆ ಆರ್ಥಿಕತೆಯ ಪ್ರಸ್ತಾಪ ಇತ್ತು. ಸರ್ಕಾರ ಯಾಕೆ ಆರೆಂಜ್ ಎಕನಾಮಿ ಬಗ್ಗೆ ಮುತುವರ್ತಿ ತೋರುತ್ತಿದೆ? ಆರೆಂಜ್ ಎಕನಾಮಿ ಎಂದರೇನು? ಅನಿಮೇಶನ್, ಗೇಮಿಂಗ್, ಫಿಲಂ, ಮ್ಯೂಸಿಕ್, ಡಿಸೈನ್, ಡಿಜಿಟಲ್ ಕಂಟೆಂಟ್ ಇತ್ಯಾದಿ…

Read More

ಕರ್ನಾಟಕದ ಜನಗಳೇ ಗ್ಯಾಸ್ ಸಿಲಿಂಡರ್ ಚಿಂತೆ ಬಿಡಿ: ಆಹಾರ ಇಲಾಖೆ ಆಯುಕ್ತರ ಸ್ಪಷ್ಟನೆ ಕೇಳಿ

​ಬೆಂಗಳೂರು, (ಮಾರ್ಚ್ 12): ಕರ್ನಾಟಕದಲ್ಲಿ (Karnataka) ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ (gas cylinder) ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟನೆಯನ್ನು ನೀಡಿದೆ. ರಾಜ್ಯದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಸುಗಮ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಬಗ್ಗೆ ಹರಡುತ್ತಿರುವ ಯಾವುದೇ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸಾಕಷ್ಟು ದಾಸ್ತಾನು ಲಭ್ಯತೆ ರಾಜ್ಯ ಸರ್ಕಾರವು ಪ್ರಮುಖ ತೈಲ…

Read More

Agniveer Recruitment: ಅಗ್ನಿವೀರ್ ನೇಮಕಾತಿಯಲ್ಲಿ ಐಟಿಐ-ಡಿಪ್ಲೊಮಾ ಪಡೆದವರಿಗೆ ಆದ್ಯತೆ ಏಕೆ? ಕಾರಣ ತಿಳಿಯಿರಿ – Kannada News | Agniveer Recruitment: ITI Diploma Holders Preferred Amidst Key Changes

ಅಗ್ನಿವೀರ್ ಯೋಜನೆಯಡಿ ನೇಮಕಗೊಂಡ ಮೊದಲ ಬ್ಯಾಚ್ ಮುಂದಿನ ವರ್ಷ ನಿವೃತ್ತರಾಗಲಿದೆ. ಇದರ ಜೊತೆಗೆ, ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಅಗ್ನಿವೀರ್ ನೇಮಕಾತಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆಗಳು ನಡೆಯುತ್ತಿವೆ. ಅಗ್ನಿವೀರ್ ನೇಮಕಾತಿ ಯೋಜನೆಗೆ ಮಾಡಿದ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಐಟಿಐ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳಿಗಿಂತ ಆದ್ಯತೆಯನ್ನು ಪಡೆಯುತ್ತಿದ್ದಾರೆ. ಇದಕ್ಕೆ ಹಲವಾರು ಪ್ರಮುಖ ಕಾರಣಗಳಿವೆ. ಅಗ್ನಿವೀರ್ ನೇಮಕಾತಿಯಲ್ಲಿ ಐಟಿಐ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ಏಕೆ ಸಿಗುತ್ತಿದೆ, ಇದಕ್ಕೆ ಕಾರಣಗಳೇನು? ಭಾರತೀಯ ವಾಯುಪಡೆ ಮತ್ತು ಭಾರತೀಯ…

Read More

ಗಿಲ್ಲಿಯ ನೆರಳಿನಲ್ಲಿ ಅಲ್ಲ ಸ್ವಂತ ಬಲದಲ್ಲಿ ಫಿನಾಲೆಗೆ ಬಂದಿದ್ದ ಕಾವ್ಯಾ ಈಗ ಹೊರಗೆ – Kannada News | Bigg Boss Kannada 12: Kavya evicted as 3rd runner up

ಬಿಗ್​​ಬಾಸ್ (Bigg Boss) ಕನ್ನಡ ಫಿನಾಲೆ ಚಾಲ್ತಿಯಲ್ಲಿದೆ. ಸಮಯ ಕಳೆದಂತೆ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಗಿಲ್ಲಿ, ಅಶ್ವಿನಿ, ಧನುಶ್, ರಘು, ರಕ್ಷಿತಾ, ಕಾವ್ಯಾ ಆರು ಮಂದಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈಗಾಗಲೇ ಧನುಶ್ ಮತ್ತು ರಘು ಅವರು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ಕಾವ್ಯಾ ಅವರು ಸಹ ಬಿಗ್​​ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಾವ್ಯಾ ಅವರು ಮೂರನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದಾರೆ. ಗಿಲ್ಲಿ ಜೊತೆಗೆ ಜೋಡಿಯಾಗಿ ಬಿಗ್​​ಬಾಸ್ ಮನೆ…

Read More

RCB v/s RR: ತವರಿನಿಂದ ಹೊರಗೆ ಆರ್​ಸಿಬಿಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ? ಇಲ್ಲಿದೆ ಫುಲ್ ಡಿಟೇಲ್ಸ್

ಐಪಿಎಲ್ 2026 ರಲ್ಲಿ ಇಂದು (ಏಪ್ರಿಲ್ 10) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ಮುಖಾಮುಖಿಯಾಗುತ್ತಿದ್ದು, ಈ ಋತುವಿನ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಇದೂ ಒಂದಾಗಲಿದೆ. ಆರ್‌ಆರ್ ಇದುವರೆಗಿನ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್​ನಲ್ಲಿದೆ. ಆರ್‌ಆರ್ ತಂಡ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಯುವ ಆರಂಭಿಕ ಆಟಗಾರರಿಂದ ಪ್ರಬಲ ಪ್ರದರ್ಶನವನ್ನು ನೀಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 11 ಓವರ್​ಗಳಲ್ಲಿ 150 ರನ್…

Read More

Video: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ – Kannada News | Young man satisfies dog’s hunger, video goes viral

ಸೋಶಿಯಲ್ ಮೀಡಿಯಾದಲ್ಲಿ ಕೆಲ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿರುತ್ತವೆ. ಕೆಲ ದೃಶ್ಯಗಳು ವ್ಯಕ್ತಿಯ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗುತ್ತದೆ. ಇಲ್ಲೊಬ್ಬ ಯುವಕನು (young man) ಹಸಿದ ಶ್ವಾನಕ್ಕೆ (dog) ಆಹಾರವನ್ನು ನೀಡಿ ಮೂಕ ಪ್ರಾಣಿಯ ಹಸಿವನ್ನು ನೀಗಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಯುವಕನ ಒಳ್ಳೆತನಕ್ಕೆ ಮೆಚ್ಚುಗೆ ವ್ಯಕ್ತವಾಗಿವೆ. ಮಂಜುನಾಥ್ ಲೋಕಪುರ್ (Manjunath lokapur) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಫುಡ್ ಸ್ಟಾಲ್ ಮುಂಭಾಗದಲ್ಲಿ ನಿಂತು ಕೊಂಡಿದ್ದಾನೆ. ಆತನ ಹಿಂಭಾಗದಲ್ಲಿ ಶ್ವಾನವೊಂದು…

Read More

ಗೆದ್ದವರಿಗಷ್ಟೆ ಅಲ್ಲ ಆಸ್ಕರ್ ನಾಮಿನಿಗಳಿಗೆ ಸಿಗಲಿದೆ 3 ಕೋಟಿ ಮೌಲ್ಯದ ಉಡುಗೊರೆಗಳು

ಪ್ರತಿ ವರ್ಷ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇವಲ ಕೆಲವೇ ಕೆಲವು ತಾರೆಗಳು ಮಾತ್ರ ಆಸ್ಕರ್ ಗೆಲ್ಲುತ್ತಾರೆ. ಅವರಿಗೆ ಚಿನ್ನ ಲೇಪಿದ ಮೂರ್ತಿಯ ಜೊತೆಗೆ ನಗದು ಬಹುಮಾನವೂ ಸಿಗುತ್ತದೆ. ಆದರೆ ನಾಮಿನೇಷನ್ ಪಡೆದವರಿಗೆ ಏನೂ ಇಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ. ನಾಮಿನೇಷನ್ ಹಂತದ ವರೆಗೆ ಬಂದವರಿಗೂ ಸಹ ದೊಡ್ಡ ಉಡುಗೊರೆಯನ್ನು ನೀಡಲಾಗುತ್ತಿದೆ. ಅದೂ ಈ ಉಡುಗೊರೆ ಬಾಸ್ಕೆಟ್​​ನ ಮೌಲ್ಯ ಸುಮಾರು 3 ಕೋಟಿ ರೂಪಾಯಿಗಳಿದೆ. ಈ ಉಡುಗೊರೆ ಬಾಸ್ಕೆಟ್​​ನಲ್ಲಿ ವಿದೇಶಿ ಪ್ರವಾಸದ ಟಿಕೆಟ್​​ ಜೊತೆಗೆ…

Read More

ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು – Kannada News | Elephant visited West Bengal poll booth in Jhargram

  ಕೊಲ್ಕತ್ತಾ, ಏಪ್ರಿಲ್ 23: ಇಂದು ಪಶ್ಚಿಮ ಬಂಗಾಳ (West Bengal) ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಜಾರ್ಗ್ರಾಮ್‌ನ ಮತಗಟ್ಟೆಯ ಬಳಿ ಇದ್ದಕ್ಕಿದ್ದಂತೆ ಆನೆಯೊಂದು ಮತಗಟ್ಟೆಗೆ ಬಂದಿತು. ಇದನ್ನು ನೋಡಿದ ಮತದಾರರು ಸ್ವಲ್ಪ ಆಘಾತಕ್ಕೊಳಗಾದರು. ಜಾರ್ಗ್ರಾಮ್‌ನ ಜಿಡುಸೋಲ್ ಪ್ರಾಥಮಿಕ ಶಾಲೆಯ ಬಳಿ ಈ ಘಟನೆ ನಡೆದಿದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಆನೆಗಳು ಇರುತ್ತವೆ ಎಂದು ಮೊದಲೇ ಎಚ್ಚರಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮತ ಚಲಾಯಿಸಲು ಬಂದಿದ್ದ ಮತದಾರರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಆನೆ ಮತಗಟ್ಟೆಯ ಬಳಿ…

Read More