Dry Fruit Price Hike: ಇಸ್ರೇಲ್-ಇರಾನ್ ಸಂಘರ್ಷ, ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಡ್ರೈ ಫ್ರೂಟ್ಸ್ – Kannada News | Dry Fruit Price Hike in Bengaluru Likely Amid Israel Iran Conflict; Supply of Iranian Dates, Pistachios, Figs May Be Hit
ಬೆಂಗಳೂರು, ಮಾರ್ಚ್ 3: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ (Israel-Iran Conflict) ಪರಿಣಾಮ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ (Dry Fruit Price) ಏರಿಕೆಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಪೂರೈಕೆ ಸಮಸ್ಯೆಯೂ ಎದುರಾಗಬಹುದು ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ. ನಗರಕ್ಕೆ ಆಮದಾಗುವ ಡ್ರೈ ಫ್ರೂಟ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳು ಇರಾನ್‌ನಿಂದ ಬರುತ್ತವೆ. ಅಂಜೂರ, ಮಾಮ್ರಾ ಬಾದಾಮಿ, ಪಿಸ್ತಾ, ಪೈನ್ ಬೀಜಗಳ ಜೊತೆಗೆ ಮಜಾಫತಿ ಖರ್ಜೂರಗಳು ವಿಶೇಷವಾಗಿ ಹೆಚ್ಚು ಬೇಡಿಕೆಯಲ್ಲಿವೆ. ರಂಜಾನ್ ಸಮಯದಲ್ಲಿ ಮಜಫತಿ ಖರ್ಜೂರಗಳಿಗೆ ಹೆಚ್ಚಿನ ಬೇಡಿಕೆ…