Headlines

Holi 2026: ಭಾರತದಂತೆಯೇ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ದೇಶಗಳಿವು – Kannada News | Holi 2026: These are the countries that celebrate Holi festival like India

ನಮ್ಮ ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಲ್ಲಿ ಹೋಳಿ (Holi)ಹಬ್ಬವೂ ಒಂದು. ಈ ಬಾರಿ ಮಾರ್ಚ್‌ 3 ಮತ್ತು 4 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂಭ್ರಮದ ಕ್ಷಣಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ವರ್ಣರಂಜಿತವಾದ ಈ ಹಬ್ಬದಲ್ಲಿ ಪರಸ್ಪರ ಬಣ್ಣಗಳನ್ನು ಮೈಮೇಲೆ ಎರಚಿಕೊಳ್ಳುತ್ತಾ  ಸಂತೋಷವನ್ನು ಹಂಚಿಕೊಳ್ಳುತ್ತಾರೆ, ಯಾವುದೇ ಜಾತಿ ಮತಗಳ ಭೇದವಿಲ್ಲದೆ ಜನ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.  ಭಾರತದಂತೆ ವಿಶ್ವದ ನಾನಾ ಭಾಗಗಳಲ್ಲೂ ಹೋಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಆ…

Read More

ಬಿಗ್ ಬಾಸ್: ಯೂಟ್ಯೂಬ್ ಹಣದಿಂದಲೇ ಮುಂಬೈನಲ್ಲಿ ಮನೆ ಖರೀದಿಸಿದ ರಕ್ಷಿತಾ ಶೆಟ್ಟಿ – Kannada News | BBK 12 Rakshita Shetty purchased home in Mumbai by her YouTube earnings

ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋ ಮೂಲಕ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಯಿತು. ಈ ಶೋನಲ್ಲಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ರಕ್ಷಿತಾ ಶೆಟ್ಟಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಶೋಗೆ ಬರುವುದಕ್ಕೂ ಮುನ್ನವೇ ಮುಂಬೈನಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಅವರು ಮನೆ ಖರೀದಿ ಮಾಡಿದ್ದರು. ಅದು…

Read More

ಯಾರೇ ಅಡ್ಡ ಬಂದರೂ ಮುಂದಕ್ಕೆ ಹೋಗಲ್ಲ ‘ಸ್ಪಿರಿಟ್’ ರಿಲೀಸ್ ದಿನಾಂಕ; ತಂಡದ ಗಟ್ಟಿ ನಿರ್ಧಾರ – Kannada News | Prabhas’ Spirit Movie Release Date Confirmed: Next year March 5 No Delay Rumors

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ (Prabhas) ಮತ್ತು ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಸ್ಪಿರಿಟ್’ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. 2027ರ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಸಲ್ಮಾನ್ ಖಾನ್ ನಟನೆಯ ದೊಡ್ಡ ಸಿನಿಮಾವೊಂದು ಇದೇ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ಕಾರಣ, ‘ಸ್ಪಿರಿಟ್’ ತನ್ನ ರಿಲೀಸ್ ಡೇಟ್ ಬದಲಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಚಿತ್ರತಂಡ ಈಗ ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿದೆ ಎಂದು ವರದಿ ಆಗಿದೆ. 1.ಮಾರ್ಚ್…

Read More

ವಚನಾನಂದ ಸ್ವಾಮೀಜಿ ಉಚ್ಛಾಟನೆ: ಕಠಿಣ ನಿರ್ಧಾರಕ್ಕೆ ಹಲವು ಕಾರಣ ಕೊಟ್ಟ ಧರ್ಮದರ್ಶಿ ಸಮಿತಿ

ದಾವಣಗೆರೆ, ಏಪ್ರಿಲ್​​ 13: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿದ್ದು, ಧರ್ಮದರ್ಶಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿರುವ ನಡುವೆ ಶ್ರೀಗಳ ಉಚ್ಛಾಟನೆಯ ನಿರ್ಧಾರಕ್ಕೆ ಪ್ರಮುಖ ಕಾರಣಗಳು ಏನು ಎಂಬುದನ್ನು ಸಮಿತಿ ಬಹಿರಂಗಪಡಿಸಿದ್ದು, ಸಾಲು ಸಾಲು ಆರೋಪಗಳನ್ನು ಮಾಡಿದೆ. ಇದೇ ಕಾರಣಕ್ಕೆ ಪದಚ್ಯುತಿಯ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸಮರ್ತಿಸಿಕೊಂಡಿದೆ. ಶ್ರೀಗಳ ಮೇಲೆ ಸಮಿತಿಯ ಆರೋಪಗಳೇನು? ಪೀಠಾರೋಹಣಕ್ಕೂ ಮೊದಲು ಬೆಂಗಳೂರಿನಲ್ಲಿ ನಡೆಸುತ್ತಿದ್ದ ‘ಶ್ವಾಸ ಕೇಂದ್ರ’ದ ಚಟುವಟಿಕೆಗಳಿಂದ ಸಂಪೂರ್ಣವಾಗಿ ಹೊರಬರುವುದಾಗಿ…

Read More

ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಬಿಜೆಪಿ ನಾಯಕರ ವಿರುದ್ಧ ಸಿಎಂ ಫಡ್ನವೀಸ್ ವಾಗ್ದಾಳಿ, ಕಠಿಣ ಕ್ರಮದ ಎಚ್ಚರಿಕೆ – Kannada News | Devendra Fadnavis angry on BJP Leaders for alliance with Congress in Ambernath local body

ಮುಂಬೈ, ಜನವರಿ 7: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು (ಜನವರಿ 7) ಕಾಂಗ್ರೆಸ್ ಜೊತೆಗಿನ ಯಾವುದೇ ಮೈತ್ರಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಹ ಒಪ್ಪಂದವನ್ನು “ಸ್ವೀಕಾರಾರ್ಹವಲ್ಲ” ಎಂದು ಕರೆದಿದ್ದಾರೆ. ಅಂಬರ್ನಾಥ್‌ನಲ್ಲಿ ಸ್ಥಳೀಯ ಮಟ್ಟದಲ್ಲಿ ಬಿಜೆಪಿ (BJP) ನಾಯಕರು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಫಡ್ನವೀಸ್ ಅಸಮಾಧಾನ ಹೊರಹಾಕಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರವನ್ನು ಸರಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ನಡೆದ ಅಚ್ಚರಿಯ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ. ಅಲ್ಲಿ ಏಕನಾಥ್ ಶಿಂಧೆ…

Read More

ನೆಲಮಂಗಲ: ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್, ಕಾರಿನಲ್ಲಿದ್ದ ಕುಟುಂಬ ಪವಾಡಸದೃಶ ಪಾರು – Kannada News | Bengaluru Rural: Water Tanker Crash in Nelamangala; Family Survives!

ಬೆಂಗಳೂರು, ಡಿ.29: ವಾಟರ್ ಟ್ಯಾಂಕರ್ ಕಾರಿನ ಮೇಲೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಕಾಮಗಾರಿ ಮಾಡಲಾಗುತ್ತಿದ್ದ ರಸ್ತೆಗೆ ನೀರು ಹಾಕುತ್ತಿದ್ದ ವೇಳೆ, ಟ್ರ್ಯಾಕ್ಟರ್​ನಿಂದ ಕಳಚಿ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಇದೀಗ ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ಮೂವರು ಮಕ್ಕಳು, ತಂದೆ ತಾಯಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ಇದೀಗ ನೆಲಮಂಗಲ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಡಿಯೋ ಸುದ್ದಿಗಳನ್ನು ಓದಲು…

Read More

ಬ್ಯಾನ್​​ ಆದರೂ ರಾಜ್ಯದಲ್ಲಿ ನಿಂತಿಲ್ಲ ಲಾಟರಿ ಹಾವಳಿ: ಗಡಿ ಜಿಲ್ಲೆಗಳಲ್ಲಿ ಕೇರಳದ ಟಿಕೆಟ್​​ ಬಿಕರಿ – Kannada News | Illegal Kerala Lotteries Thrive in Chamarajanagar Despite Ban in Karnataka

ಕೇರಳದ ಲಾಟರಿ ಟಿಕೆಟ್​​. ಚಾಮರಾಜನಗರ, ಜನವರಿ 02: ರಾತ್ರಿ ಬೆಳಗಾಗುವುದರ ಒಳಗೆ ಶ್ರೀಮಂತರಾಗೋ ಹುಚ್ಚು ಕನಸು ಇಟ್ಟುಕೊಂಡು ಲಾಟರಿ ಖರೀದಿಸಿ ಬೀದಿಗೆ ಬಂದ ಅದೆಷ್ಟೋ ಕುಟುಂಬಳಿವೆ. ದಿನಗೂಲಿ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಇದರಿಂದ ಸಂಕಷ್ಟಕ್ಕೆ ಸಿಲುಕುತ್ತಿರೊದನ್ನು ಮನಗಂಡು ಕರ್ನಾಟಕದಲ್ಲಿ ಲಾಟರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ರಾಜ್ಯದಲ್ಲಿ ಅವುಗಳ ಹಾವಳಿ ಮಾತ್ರ ನಿಂತಿಲ್ಲ. ಕದ್ದು ಮುಚ್ಚಿ ನಡೆಯುವ ವ್ಯವಹಾರಗಳು ಒಂದೆಡೆಯಾದರೆ ನೆರೆ ರಾಜ್ಯದ ಲಾಟರಿಗಳು ಕೂಡ ಗಡಿ ಜಿಲ್ಲೆಗಳಲ್ಲಿ ಜೋರಾಗಿಯೇ ವ್ಯವಹಾರ ನಡೆಸುತ್ತಿವೆ. ಹೌದು, ಚಾಮರಾಜನಗರದ…

Read More

ಪ್ರಯಾಣಿಕರೇ ಇತ್ತ ಗಮನಿಸಿ: ಮೋದಿ ಆಗಮನ ಹಿನ್ನೆಲೆ ಇಂದು ಬೆಂಗಳೂರು-ಕನಕಪುರ ರಸ್ತೆಯಲ್ಲಿ ಸಂಚಾರ ಬದಲಾವಣೆ – Kannada News | PM Modi in Bengaluru: Traffic Diversions on Kanakapura Road Today; Check Alternate Routes and Timings

ಬೆಂಗಳೂರು, ಮೇ 9: ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರು-ಕನಕಪುರ ಮುಖ್ಯರಸ್ತೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಮುಖ್ಯಾಂಶಗಳು ಪ್ರಧಾನಿ ಭೇಟಿ…

Read More

ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ; ಭಾವುಕರಾದ ಹೇಮಾ ಮಾಲಿನಿ ಮಗಳು – Kannada News | Bollywood Legend Dharmendra Receives Posthumous Padma Vibhushan: Family’s Emotional Moment

ಬಾಲಿವುಡ್‌ನ ಹಿರಿಯ ನಟ, ‘ಹೀ-ಮ್ಯಾನ್’ ಎಂದೇ ಪ್ರಸಿದ್ಧರಾಗಿದ್ದ ಧರ್ಮೇಂದ್ರ (Dharmendra) ಅವರಿಗೆ ಮೇ 25 ರಂದು ಮರಣೋತ್ತರವಾಗಿ ದೇಶದ ಪ್ರತಿಷ್ಠಿತ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಧರ್ಮೇಂದ್ರ ಅವರ ಪರವಾಗಿ ಅವರ ಪತ್ನಿ, ನಟಿ ಹೇಮಾ ಮಾಲಿನಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಡೀ ವಾತಾವರಣವೇ ಭಾವನಾತ್ಮಕವಾಗಿತ್ತು. ಪ್ರಶಸ್ತಿ ಸ್ವೀಕರಿಸುವಾಗ ಹೇಮಾ ಮಾಲಿನಿ ಅವರ ಮುಖದಲ್ಲಿ ಪತಿಯನ್ನು ಕಳೆದುಕೊಂಡ ದುಃಖ ಹಾಗೂ ಹೆಮ್ಮೆಯ ಭಾವ ಒಟ್ಟಿಗೇ ಎದ್ದು ಕಾಣುತ್ತಿತ್ತು….

Read More

Bengaluru Air Quality: ಶಿವಮೊಗ್ಗ, ಬಳ್ಳಾರಿ ಏರ್ ಕ್ವಾಲಿಟಿಯಲ್ಲಿ ಕುಸಿತ; ಬೆಂಗಳೂರಿಗಿಂತಲೂ ಕಳಪೆ AQI – Kannada News | Bangalore Air Pollution Crisis: Shivamogga and Ballari have Air quality worse than Bengaluru

ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಕಳಪೆ ಏರ್ ಕ್ವಾಲಿಟಿ ಬೆಂಗಳೂರು, ಜನವರಿ 23: ಬೆಂಗಳೂರಿನ ಗಾಳಿಯ ಗುಣಮಟ್ಟ 162 ಇದ್ದು, ಏರ್ ಕ್ವಾಲಿಟಿ (Bengaluru Air Quality) ಅನಾರೋಗ್ಯಕಾರಿ ಹಂತದಲ್ಲೇ ಇದೆ. ಆದರೆ ಬೆಂಗಳೂರನ್ನೂ ಮೀರಿಸುವ ಹಂತಕ್ಕೆ ತಲುಪಿರುವುದು ಶಿವಮೊಗ್ಗ ಮತ್ತು ಬಳ್ಳಾರಿಯ ವಾಯು ಗುಣಮಟ್ಟ. ಕೆಲ ದಿನಗಳಿಂದ 100ರ ಆಸುಪಾಸಿನಲ್ಲಿದ್ದ ಶಿವಮೊಗ್ಗದ ಏರ್ ಕ್ವಾಲಿಟಿ ಇಂದು ಒಮ್ಮೆಲೇ ಬೆಂಗಳೂರಿಗಿಂತಲೂ ಹೆಚ್ಚಿನ AQIಗೆ ತಲುಪಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ…

Read More