Samudrika Shastra: ನಿಮ್ಮ ತೋರು ಬೆರಳಿನ ಆಕಾರವು ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ ಮತ್ತು ಅದೃಷ್ಟ – Kannada News | The Astrological Significance of the Index Finger and Its Impact on Destiny
ಒಂದು ಕೈಯಲ್ಲಿ ಐದು ಬೆರಳುಗಳಿರುತ್ತವೆ. ಕೆಲವರಿಗೆ ಆರನೇ ಬೆರಳೂ ಇರುವುದುಂಟು, ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಐದು ಬೆರಳುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಇತಿಹಾಸ ಮತ್ತು ಮಹತ್ವವಿದೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹೆಬ್ಬೆರಳನ್ನು ಶುಕ್ರನಿಗೆ, ತೋರು ಬೆರಳನ್ನು ಗುರು (ಬೃಹಸ್ಪತಿ) ಗ್ರಹಕ್ಕೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ರವಿಗೆ (ಸೂರ್ಯ) ಮತ್ತು ಕಿರು ಬೆರಳನ್ನು ಬುಧನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ತೋರು ಬೆರಳನ್ನು ಗುರು ಬೆರಳು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪುಷ್ಯರಾಗ ರತ್ನದ…