ಚಿತ್ರದುರ್ಗ ಬಸ್ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ, ನಾಲ್ವರು ಸಾವು – Kannada News | Four Youths Killed In Bike And Tipper Accident In ajjavara at Chikkaballapur

ಚಿಕ್ಕಬಳ್ಳಾಪುರ, (ಡಿಸೆಂಬರ್ 25): ಚಿತ್ರದುರ್ಗದಲ್ಲಿ ನಡೆದ ಭೀಕರ ದುರಂತದ ಆಘಾತ ಮಾಸುವ ಮುನ್ನವೇ, ಚಿಕ್ಕಬಳ್ಳಾಪುರದಲ್ಲಿ (Chikkaballapur) ಹೃದಯವಿದ್ರಾವಕ ಅಪಘಾತ ಸಂಭವಿಸಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ ಅರುಣ್ ಮೃತ ಯುವಕರು.  ಮೃತರು ಅಜ್ಜವಾರ ಗ್ರಾಮದ ಯುವಕರಾಗಿದ್ದು, ಒಂದೇ ಬೈಕಿನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ…

Read More

ಕಾವ್ಯಾ ಜತೆ ಮದುವೆ ಬಗ್ಗೆ ಮನಸಾರೆ ಮಾತಾಡಿದ ಗಿಲ್ಲಿ: ಆ ಕಡೆಯಿಂದ ಬಂದ ಉತ್ತರ ಏನು? – Kannada News | Gilli Nata wants to talk marriage plans with Kavya Shaiva parents in BBK 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರ ಜೋಡಿ ತುಂಬಾ ಹೈಲೈಟ್ ಆಗಿದೆ. ಆರಂಭದಿಂದಲೂ ಅವರಿಬ್ಬರೂ ಕ್ಲೋಸ್ ಆಗಿದ್ದಾರೆ. ಕಾವ್ಯಾ (Kavya Shaiva) ಅವರನ್ನು ಪ್ರತಿ ಬಾರಿಯೂ ಗಿಲ್ಲಿ ನಟ ರೇಗಿಸುತ್ತಾರೆ. ಅವರಿಬ್ಬರಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಇಲ್ಲಿಯವರೆಗೆ ಅನೇಕ ಬಾರಿ ಅವರಿಬ್ಬರು ಮುನಿಸು ತೋರಿಸಿದ್ದರೂ ಕೂಡ ಮಾತು ಬಿಟ್ಟಿಲ್ಲ. ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿಲ್ಲ. ಆ ಬಾಂಧವ್ಯದ ಪರಿಣಾಮವಾಗಿ ಗಿಲ್ಲಿ (Gilli Nata) ಮನಸ್ಸಿನಲ್ಲಿ ಮದುವೆ…

Read More

ಮೈಸೂರು ಅರಮನೆ ಮುಂಭಾಗ ಭಾರೀ ಸ್ಫೋಟ, ಓರ್ವ ಸಾವು, ಹಲವರಿಗೆ ಗಂಭೀರ ಗಾಯ – Kannada News | One Dies Several injured after nitrogen gas blast in front of mysuru palace

ಮೈಸೂರು, (ಡಿಸೆಂಬರ್ 25): ನೈಟ್ರೋಜನ್ ಗ್ಯಾಸ್ ಸ್ಫೋಟಗೊಂಡು (Nitrogen Gas Blast) ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಶ್ವವಿಖ್ಯಾತ ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ನಡೆದಿದೆ. ಇಂದು (ಡಿಸೆಂಬರ್ 25) ರಾತ್ರಿ ಪ್ಯಾಲೆಸ್ ಮುಂಭಾಗ ಬಲೂನ್​ಗೆ ಗ್ಯಾಸ್ ತುಂಬಿಸುವಾಗ ಸ್ಫೋಟವಾಗಿದ್ದು, ಇದರ ತೀವ್ರತೆ ಎಷ್ಟಿತ್ತು ಎಂದರೆ ಸಿಲಿಂಡರ್​ ಛಿದ್ರ ಛೀದ್ರವಾಗಿದೆ. ಸ್ಥಳಕ್ಕೆ ಕೆ ಆರ್​ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು,ಈ ಸ್ಫೋಟಕ ಸಾಂಸ್ಕೃತಿಕ ನಗರಿ ಜನ ಬೆಚ್ಚಿಬಿದ್ದಿದ್ದಾರೆ. ಅರಮನೆಯ ಜಯ ಮಾರ್ತಾಂಡ ಗೇಟ್…

Read More

ಚುಮು ಚುಮು ಚಳಿ: ಪಂಚಾಯ್ತಿಯೊಳಗೆ ನುಗ್ಗಿ PDO ಚೇರ್ ಮೇಲೆ ಮಲಗಿದ ಶ್ವಾನ – Kannada News | Street dog Sleeps On PDO chair In Examba Gram Panchayat Office video Goes viral

ಬೀದರ್, ಡಿಸೆಂಬರ್ 25): ಜಿಲ್ಲೆಯ ಔರಾದ್ ತಾಲ್ಲೂಕಿನ ‌ಏಕಂಬ ಗ್ರಾಮ ಪಂಚಾಯಿತಿ (Examba Gram Panchayat) ಬೀದಿ ನಾಯಿಗಳ ತಾಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶ್ವಾನವೊಂದು (Street dog) ಯಾರ ಭಯವೂ ಇಲ್ಲದೇ ನೇರವಾಗಿ ಪಂಚಾಯತಿಯೊಳಗೆ ಹೋಗಿ ಪಿಡಿಓ ಚೇರ್​​ ಮೇಲೆ ಆಯಾ ಮಲಗಿದೆ. ಸಿಬ್ಬಂದಿ ಬೆಳಗ್ಗೆ ಪಂಚಾಯಿತಿ ಕಚೇರಿ ಬಾಗಿಲು ಓಪನ್ ಮಾಡಿ ಹೋಗಿದ್ದಾರೆ. ಯಾರು ಇಲ್ಲದಿದ್ದರಿಂದ ಶ್ವಾನ, ಯಾರ ಭಯವೂ ಇಲ್ಲದೇ ನೇರವಾಗಿ ಪಂಚಾಯ್ತಿ ಕಚೇರಿಯೊಳಗೆ ನುಗ್ಗಿ ಪಿಡಿಓ ಕುರ್ಚಿ ಏರಿ ಆಯಾಗಿ ಮಲಗಿಕೊಂಡಿದೆ….

Read More

ಡಿಸಿ, ತಹಶೀಲ್ದಾರ್ ಡೋಂಟ್ ಕೇರ್: ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು – Kannada News | Villegers theft Chicken And Egg From Farm over smell at Gadag

ರಮೇಶ್ ಬಿ. ಜವಳಗೇರಾ | Updated on:Dec 25, 2025 | 9:29 PM Share ಕೋಳಿಫಾರಂ ದುವಾರ್ಸನೆಯಿಂದ ಬೇಸತ್ತು ಕೋಳಿ, ಮೊಟ್ಟೆಗಳನ್ನು ಕದ್ದೊಯ್ದಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ನಡೆದಿದೆ. ಕೋಳಿಫಾರಂ​​ನಿಂದ ಬರುತ್ತಿದ್ದ ದುವಾರ್ಸನೆಯಿಂದ ಉಣಚಗೇರಿ ಗ್ರಾಮಸ್ಥರು ರೋಸಿ ಹೋಗಿದ್ದರು. ಹೀಗಾಗಿ ಗ್ರಾಮದಿಂದ ಕೋಳಿಫಾರಂ ತೆರವುಗೊಳಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್​ಗೆ ಮನವಿ ಮಾಡಿದ್ದಾರೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜನರು ತಾಳ್ಮೆಯ ಕಟ್ಟೆ ಹೊಡೆದಿದ್ದು, ಗ್ರಾಮಸ್ಥರೇ ಕೋಳಿಫಾರಂಗೆ ನುಗ್ಗಿ ಕೋಳಿ,…

Read More

KSCA ಅಂಡರ್ 14 ಕ್ರಿಕೆಟ್: ಬೆಂಗಳೂರಿನ ವಿದ್ಯಾನಿಕೇತನ ಶಾಲೆಗೆ 410 ರನ್‌ಗಳ ಭರ್ಜರಿ ಜಯ – Kannada News | KSCA Under 14th Cricket: Bengaluru vidyaniketan School Wins 410 runs Against carmel school

ಬೆಂಗಳೂರು, (ಡಿಸೆಂಬರ್ 25): 2025-26ನೇ ಸಾಲಿನ ಕೆ.ಎಸ್.ಸಿ.ಎ (KSCA) ಬಿ.ಟಿ.ಆರ್ 14 ವರ್ಷದೊಳಗಿನವರ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಿಕೇತನ ಶಾಲೆ (Bengaluru vidyaniketan School) ಭರ್ಜರಿ ಜಯಗಳಿಸಿದೆ. ವ್ಯೊಮ್ ನಾಯ್ಡು ಅದ್ಭುತ ದ್ವಿಶತಕದ ನೆರವಿನಿಂದ ವಿದ್ಯಾನಿಕೇತನ ಶಾಲೆಯು, ಬೆಂಗಳೂರಿನ ಕಾರ್ಮೆಲ್ ಶಾಲೆ (carmel school) (B-70) ವಿರುದ್ಧ 410 ರನ್‌ಗಳ ಬೃಹತ್ ಮೊತ್ತದ ಜಯ ದಾಖಲಿಸಿದೆ. ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MVIT-2) ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ…

Read More

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್ – Kannada News | Shivarajkumar condemns fans bad comments on Vijayalakshmi Darshan

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ದೂರು ನೀಡಿದ್ದಾರೆ. ಈ ಮೊದಲು ನಟಿ ರಮ್ಯಾಗೆ ಇದೇ ರೀತಿ ಕೆಟ್ಟ ಕಮೆಂಟ್ ಬಂದಿತ್ತು. ಈ ಎಲ್ಲ ಘಟನೆಗಳ ಬಗ್ಗೆ ನಟ ಶಿವರಾಜ್​ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಫ್ಯಾನ್ಸ್ ವಾರ್ ನಿಲ್ಲಿಸಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಎಲ್ಲ ಅಭಿಮಾನಿಗಳಲ್ಲೂ ನಾನು ಕೇಳಿಕೊಳ್ಳುತ್ತೇನೆ. ಒಬ್ಬರಿಂದ ಇನ್ನೊಬ್ಬರಿಗೆ ಆ ಕಿಡಿ…

Read More

ಬಿಗ್ ಬಾಸ್ ಧರ್ಮ ಕೀರ್ತಿರಾಜ್ ನಟನೆಯ 25ನೇ ಸಿನಿಮಾ ‘ನಯನ ಮನೋಹರ’ – Kannada News | Dharma Keerthiraj starrer 25th Movie Nayana Manohara title and teaser launch

ನಟ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಬಿಗ್ ಬಾಸ್ ಶೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಅವರು 25ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ನಯನ ಮನೋಹರ’ (Nayana Manohara) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನಾವರಣ ಆಯಿತು. ಜೊತೆಗೆ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಯುಬಿ ಸಿಟಿಯ ಮ್ಯಾರಿಯಟ್ ಅಪಾರ್ಟ್‌ಮೆಂಟ್ಸ್‌ನಲ್ಲಿ ಈ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಅನುಷ್ ಸಿದ್ದಪ್ಪ ಅವರು ‘ಎಕ್ಸ್ಕ್ವಿಸಿಟ್ ಎಂಟರ್‌ಟೈನ್‌ಮೆಂಟ್ಸ್’ ಮೂಲಕ…

Read More

Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು – Kannada News | Building the New India: 2025 A Year of Infrastructure Breakthroughs

ಭಾರತದ ಅಭಿವೃದ್ಧಿ ಪಥದಲ್ಲಿ 2025 ಒಂದು ಪ್ರಮುಖ ಘಟ್ಟ ಎನಿಸಿದೆ. ರೈಲು, ರಸ್ತೆ, ಆಕಾಶ, ಸಮುದ್ರ, ಡಿಜಿಟಲ್, ಹೀಗೆ ಪ್ರತೀ ಆಯಾಮದಲ್ಲೂ ಭಾರತದ ಅಭಿವೃದ್ಧಿಯಲ್ಲಿ ಗಣನೀಯ ಪ್ರಗತಿ ಕಾಣತೊಡಗಿದೆ. ಕನೆಕ್ಟಿವಿಟಿ ದಟ್ಟಗೊಂಡಿತು, ಅಂತರಗಳು ತಗ್ಗಿದವು, ಆಶೋತ್ತರಗಳು ಗಟ್ಟಿಗೊಂಡವು. ಇನ್​ಫ್ರಾಸ್ಟ್ರಕ್ಚರ್​ಗಾಗಿ ಸರ್ಕಾರದ ಬಂಡವಾಳ ಹೂಡಿಕೆ ಮೊತ್ತವು 2025-26ರ ಹಣಕಾಸು ವರ್ಷದಲ್ಲಿ 11.21 ಲಕ್ಷ ಕೋಟಿ ರೂಗೆ ಏರಿದೆ. ಇದು ಜಿಡಿಪಿಯ ಶೇ. 3.1ರಷ್ಟಾಗಿದೆ. 2047ರವರೆಗೂ ಭಾರತದ ಜಿಡಿಪಿ ಪ್ರತೀ 12-18 ತಿಂಗಳಿಗೆ ಒಂದು ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಾಗುವ ನಿರೀಕ್ಷೆ…

Read More

ಶಕ್ತಿ ಯೋಜನೆಯೇ ಬಂಡವಾಳ, ಮಹಿಳೆಯರೇ ಟಾರ್ಗೆಟ್​​: ಕಳ್ಳಿಯರ ಗ್ಯಾಂಗ್​​ ಭೇದಿಸಿದ ಖಾಕಿ – Kannada News | Shakti Yojana Misused: Women’s Jewelry Theft Gang Arrested in Kalaburagi

ಕಲಬುರಗಿ, ಡಿಸೆಂಬರ್​​ 25: ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸಾರಿಗೆಯೆ ಸಾಮಾನ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ಶಕ್ತಿ ಯೋಜನೆಯಡಿ  ಕಲ್ಪಿಸಿದೆ. ಆದ್ರೆ ಇದೇ ಫ್ರೀ ಬಸ್​​ ಸ್ಕೀಂನ ಬಂಡವಾಳ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಆಭರಣಗಳನ್ನು ಕದಿಯುತ್ತಿದ್ದ ಖತರ್ನಾಕ್​​ ಲೇಡಿ​​ ಗ್ಯಾಂಗ್​​ ಒಂದನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ನಗರದ ಮಾಂಗರವಾಡಿ ಬಡಾವಣೆಯ ನಿವಾಸಿಗಳಾದ ಚಿಮನ್ ಕಾಂಬಳೆ, ಶಕೀಲಾಬಾಯಿ ಉಪಾಧ್ಯಾ ಮತ್ತು‌ ಮಾಧುರಿ ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳತನವನ್ನೇ ಇವರು ವೃತ್ತಿ ಮಾಡಿಕೊಂಡಿದ್ದು, ರಾಜ್ಯ ಸರ್ಕಾರದ…

Read More