ಕೊವಿಡ್​​ನಂತೆ ಆತಂಕ ಸೃಷ್ಟಿಸಿದ ILI-ಸಾರಿ ಕೇಸ್ ಏರಿಕೆ: ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ – Kannada News | Bengaluru Cold Wave: ILI and SARI Cases Rise Amid Flu Fears

ಬೆಂಗಳೂರು, ಡಿಸೆಂಬರ್​ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದೆ. ಅತಿಯಾದ ಚಳಿ ಸಿಲಿಕಾನ್ ಸಿಟಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಪ್ರಕರಣಗಳು (ILI) ಹಾಗೂ ತೀವ್ರ ಉಸಿರಾಟ ಸಮಸ್ಯೆ ಪ್ರಕರಣ (SARI) ವೈರಲ್ ಫ್ಲೂ ಹರಡುವ ಭೀತಿ ಆರೋಗ್ಯ ಇಲಾಖೆಗೆ ಟೆನ್ಷನ್ ಹೆಚ್ಚಿಸಿದೆ. ಸಾರಿ, ಐಎಲ್ಐ ಕೇಸ್​​ ಏರಿಕೆ ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಏರಿಕೆಯಾಗುತ್ತಿರುವ ಸಾರಿ, ಐಎಲ್ಐ ಕೇಸ್​​ ಹಾಗೂ ವೈರಲ್ ಫ್ಲೂ…

Read More

ನಿಧಿ ಅಗರ್​​ವಾಲ್ ಬಳಿಕ ಸಮಂತಾಗೂ ಫ್ಯಾನ್ಸ್ ಕಾಟ: ವಿಡಿಯೋ ವೈರಲ್ – Kannada News | Samantha Ruth Prabhu gets mobbed during Hyderabad event Video Goes Viral

ನಟಿ ನಿಧಿ ಅಗರ್​ವಾಲ್ (Nidhi Agarwal) ಅವರಿಗೆ ಅಭಿಮಾನಿಗಳಿಂದ ಇತ್ತೀಚೆಗೆ ಕಿರಿಕಿರಿ ಉಂಟಾಗಿತ್ತು. ‘ದಿ ರಾಜಾ ಸಾಬ್’ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು. ಜನಸಂದಣಿಯಲ್ಲಿ ಅವರ ಜೊತೆ ಕೆಲವರು ಅನುಚಿತವಾಗಿ ವರ್ತಿಸಿದರು. ಆ ಘಟನೆಯ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ರೀತಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೂ ಆಗಿದೆ. ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಸಮಂತಾ ಅವರನ್ನು ಅಭಿಮಾನಿಗಳು ಸುತ್ತುವರಿದಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ…

Read More

IND-W vs SL-W: ಭಾರತ- ಲಂಕಾ ನಡುವೆ 2ನೇ ಟಿ20 ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India Women vs Sri Lanka Women 2nd T20: Squads, Live Stream & Match Details

ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ್ದ ಭಾರತ ವನಿತಾ ಪಡೆ (India Women vs Sri Lanka Women), ಇದೀಗ ಎರಡನೇ ಟಿ20 ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಡಿಸೆಂಬರ್ 23 ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತದ ದಾಳಿಗೆ ತತ್ತರಿಸಿದ್ದ ಶ್ರೀಲಂಕಾ ಕೇವಲ 126 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಜೆಮಿಮಾ 44 ಎಸೆತಗಳಲ್ಲಿ 69…

Read More

ಕಾವ್ಯಾ ವಿಚಾರದಲ್ಲಿ ಅತಿ ಆಯ್ತು ಗಿಲ್ಲಿ ವರ್ತನೆ: ಸುದೀಪ್ ಹೇಳಿದರೂ ಬುದ್ಧಿ ಕಲಿತಿಲ್ಲ – Kannada News | Gilli Nata again irritates Kavya Shaiva in Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರು ಆತ್ಮೀಯರಾಗಿದ್ದಾರೆ. ಶೋ ಆರಂಭದಿಂದಲೂ ಕೂಡ ಅವರು ಒಟ್ಟಿಗೆ ಇದ್ದಾರೆ. ಇದರಿಂದಾಗಿ ಕಾವ್ಯ ಅವರ ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ಕಿಚ್ಚ ಸುದೀಪ್ ಅವರು ಈಗಾಗಲೇ ಹೇಳಿದ್ದಾರೆ. ಆದರೂ ಕೂಡ ಗಿಲ್ಲಿ ನಟ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಡಿಸೆಂಬರ್ 22ರ ಸಂಚಿಕೆಯಲ್ಲಿ ಗಿಲ್ಲಿ ನಟ (Gilli Nata) ಅವರು…

Read More

ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ

ರಾಯಚೂರು, ಡಿಸೆಂಬರ್​ 22: ಸ್ಮಾರ್ಟ್ ಫೋನ್, ಅದರಲ್ಲೂ ಇನ್ಸ್ಟಾಗ್ರಾಮ್​ ಬಳಸುವ ಪ್ರತಿಯೊಬ್ಬರು ಈ ವಿಡಿಯೋವನ್ನು ನೋಡಲೇಬೇಕು. ಜಿಲ್ಲೆಯಲ್ಲಿ ಆನ್‌ಲೈನ್ ಗೇಮಿಂಗ್ ವಂಚನೆಯೊಂದು ಬೆಳಕಿಗೆ ಬಂದಿದ್ದು, ಖಾಸಗಿ ಕಂಪನಿಯ ಉದ್ಯೋಗಿ ಬರೋಬ್ಬರಿ 30 ಲಕ್ಷ ರೂ ಕಳೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್​​​ ​ರೀಲ್ಸ್‌ ವೀಕ್ಷಿಸುತ್ತಿರುವಾಗ ಬಂದ ಯಾವುದೋ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಆ ಲಿಂಕ್ ಅವರನ್ನು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ದಿದ್ದು, ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದೆ. ಪ್ರಾರಂಭದಲ್ಲಿ ಕಡಿಮೆ ಮೊತ್ತ ಹೂಡಿಕೆ ಮಾಡಿದವರು, ಕ್ರಮೇಣ 30 ಲಕ್ಷ ರೂ…

Read More

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಭಾರೀ ಆಕ್ರೋಶ

ಮುಂಬೈ, ಡಿಸೆಂಬರ್ 22: ಮಹಾರಾಷ್ಟ್ರದ ಬಿಜೆಪಿ (BJP) ಶಾಸಕರೊಬ್ಬರು ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿ, ಒನ್​​ವೇಯಲ್ಲಿ ಬರುತ್ತಿದ್ದ ಆಟೋ ಚಾಲಕನನ್ನು ಹಿಡಿದು ನಿಲ್ಲಿಸಿದ ಶಾಸಕ ಆತನ ಕೆನ್ನೆಗೆ ಹೊಡೆದಿದ್ದಾರೆ. ಈ ವಿಡಿಯೋ ತುಣುಕು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ, ಶಾಸಕರ ವರ್ತನೆಯ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಮಹಾರಾಷ್ಟ್ರದ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆ ವಿರೋಧಿಸಿ ಬಿಜೆಪಿ ಶಾಸಕ ಪರಾಗ್ ಶಾ ಭಾನುವಾರ ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಿದರು. ಈ…

Read More

ಅಯೋಧ್ಯೆಗೆ ಹೊರಟ ಮೈಸೂರಿನ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ, ಕೋಚ್ ಹೇಗಿದೆ ನೋಡಿ – Kannada News | Railway Department arrangements Special compartment to Mysuru Ganapathi Sachidananda swamiji for Traveling To ayodhya

ಮೈಸೂರು, (ಡಿಸೆಂಬರ್ 22): ಇದೇ ಡಿಸೆಂಬರ್ 24 ರಿಂದ 28ರವರೆಗೆ ಅಯೋಧ್ಯೆಯಲ್ಲಿ ನೂತನ ಗಣಪತಿ ಸಚ್ಚಿದಾನಂದ ಆಶ್ರಮ ಲೋಕಾರ್ಪಣೆಯಾಗಲಿದೆ. ಹೀಗಾಗಿ ಗಣಪತಿ ಸಚ್ಚಿದಾನಂದ ಶ್ರೀ‌ಗಳು, ಮೈಸೂರಿನಿಂದ 1 ಸಾವಿರ ಜನರನ್ನು ಉಚಿತವಾಗಿ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಒಂದು ಸಾವಿರ ಜನರ ಜತೆಗೆ ಶ್ರೀಗಳು ಸಹ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಶ್ರೀಗಳು ಮೂರು ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ರೈಲ್ವೆ ಇಲಾಖೆಯು ಶ್ರೀಗಳ ಬೋಗಿಯನ್ನು ವಿಶೇಷವಾಗಿ ಸಿದ್ದಗೊಳಸಿದೆ. ಕೂರಲು ಸೋಫಾ, ಮಲಗಲು ಬೆಡ್,…

Read More

ಅಜ್ಜಿಯ ಕೊಲೆ ರಹಸ್ಯ; ನಾಯಿಗಳಿಂದ ಪತ್ತೆಯಾಯ್ತು ಮೊಮ್ಮಗನ ಕ್ರೌರ್ಯ – Kannada News | Andhra Pradesh Man Kills his Grandmother for Gold Dog Squad solved the Murder Case

ವಿಜಯನಗರ, ಡಿಸೆಂಬರ್ 22: ಆಂಧ್ರದ ವಿಜಯನಗರ ಜಿಲ್ಲೆಯಲ್ಲಿ ಚಿನ್ನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗನ ಕ್ರೌರ್ಯ ಬೆಳಕಿಗೆ ಬಂದಿದೆ. ಭೋಗಾಪುರಂ ಮಂಡಲದ ಮುಡಸಲಪೇಟೆಯಲ್ಲಿ ವೃದ್ಧ ಮಹಿಳೆಯ ಕೊಲೆ (Murder) ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯಾದ ಆಕೆಯ ಮೊಮ್ಮಗನನ್ನು ಬಂಧಿಸಿದ್ದಾರೆ. ಶ್ವಾನ ದಳದ ಸಾಕ್ಷ್ಯಾಧಾರಗಳಿಂದ ಅನುಮಾನ ಬಲಗೊಂಡಿದ್ದು, ತನಿಖೆಯ ಸಮಯದಲ್ಲಿ ಕೊಲೆಯ ಬಗ್ಗೆ ಸತ್ಯ ಬಯಲಾಗಿದೆ. ಅಜ್ಜಿಯಿಂದ ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಆ ಯುವಕನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 12ರಂದು ವಿಜಯನಗರ ಜಿಲ್ಲೆಯ ಭೋಗಪುರಂ ಮಂಡಲದ ಮುಡಸಲಪೇಟೆ…

Read More

ಅದೇನ್ ಧೈರ್ಯ ಗುರು! ಜಡ್ಜ್​​​ ಸಹಿ ನಕಲು ಮಾಡಿ ಕೋಟ್ಯಂತರ ರೂ ಜಮೀನು ಗುಳುಂ – Kannada News | Anekal Land Fraud: Judge Signature Forged to Grab Property

ಆನೇಕಲ್​, ಡಿಸೆಂಬರ್​ 22: ನಕಲಿ ದಾಖಲೆ ಸೃಷ್ಟಿಸಿ ಜಮೀನು (land) ಕಬಳಿಕೆ ಮಾಡುವವರನ್ನು ನೋಡಿದ್ದೇವೆ. ಆದರೆ ಇಲ್ಲಿ ಒಂದು ಹೆಜ್ಜೆ ಮುಂದೆ ಹೋದ ಆಸಾಮಿಗಳು ನ್ಯಾಯಾಧೀಶರ ಸಹಿಯನ್ನೇ ನಕಲು (Forged) ಮಾಡಿ ವಂಚನೆ ಮಾಡಿದ್ದಾರೆ. ಪತಿಯನ್ನ ಕಳೆದುಕೊಂಡಿದ್ದ ಮಹಿಳೆಯ ಅಮಾಯಕತನವನ್ನೇ ದುರಪಯೋಗ ಪಡಿಸಿಕೊಂಡ ಭೂಗಳ್ಳರು ಕೋಟ್ಯಂತರ ರೂ ಬೆಲೆಬಾಳುವ ಜಾಗವನ್ನ ಗುಳುಂ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ಸಹಿ ಸೃಷ್ಟಿಸಿ ಜಾಗ ಕಬಳಿಕೆ  ಸಿಲಿಕಾನ್ ಸಿಟಿ ಬೆಂಗಳೂರು ನಗರ ಬೆಳೆಯುತ್ತ ಹೋದಂತೆ ಒಂದೊಂದು ಅಡಿಗೂ…

Read More

ಬೆಂಗಳೂರು ಟನಲ್ ರಸ್ತೆ ಟೆಂಡರ್ ಅದಾನಿ ಗ್ರೂಪ್ ಪಾಲು, ಧರ್ಮ ಸಂಕಟಕ್ಕೆ ಸಿಲುಕಿದ ಸಿದ್ದರಾಮಯ್ಯ ಸರ್ಕಾರ – Kannada News | Adani Group Emerges Lowest Bidder For Bengaluru Tunnel Road As Cost Gap And Policy Debate Intensify

ಬೆಂಗಳೂರು, (ಡಿಸೆಂಬರ್ 22): ಬೆಂಗಳೂರು ಟನಲ್ ಮಾರ್ಗದ (bengaluru tunnel road) ಟೆಂಡರ್ ಅದಾನಿ ಗ್ರೂಪ್​​ (Adani Group) ಪಾಲಾಗುವ ಸಾಧ್ಯತೆಗಳಿವೆ. ಕಾರಣ ಟೆಂಡರ್ ಸಲ್ಲಿಸಿರುವ ಕಂಪನಿಗಳ ಪೈಕಿ ಅದಾನಿ ಗ್ರೂಪ್ ಅತೀ ಕಡಿಮೆ ಬಿಡ್ ಮಾಡಿದೆ. ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಅಂದರೆ 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. (ಗ್ರೇಟರ್ ಬೆಂಗಳೂರು ಅಥಾರಿಟಿ(GBA) 17,698 ಕೋಟಿಗೆ ಬಿಡ್ ಸೀಮಿತ ಮಾಡಿತ್ತು. ಆದ್ರೆ, ಜಿಬಿಎ ಕೋಟ್ ಮಾಡಿದ್ದಕ್ಕಿಂತ ಶೇ. 24ರಷ್ಟು ಹೆಚ್ಚಿನ…

Read More