ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು!
ಬೆಂಗಳೂರು, (ಮಾರ್ಚ್ 25): ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಕೆಲ ಸ್ವಾರಸ್ಯಕರ ಪ್ರಸಂಗಗಳು ಜರುಗಿವೆ. ಅದರಲ್ಲೂ ಮುಖ್ಯವಾಗಿ ಡಿಕೆ ಶಿವಕುಮಾರ್ ಶಾಲ್ ಹಾಕುತ್ತಿರುವ ಬಗ್ಗೆ ಚರ್ಚೆಯಾಗಿದ್ದು, ಬಿಜೆಪಿ ಶಾಸಕ ಸುನೀಲ್ಕುಮಾರ್ ಮಧ್ಯಪ್ರವೇಶಿಸಿ, ನೀವು ಶಾಲು ಹಾಕಿದಮೇಲೆ ಮುಖ್ಯಮಂತ್ರಿ ಆಗಿದ್ದೀರಿ. ಅದಕ್ಕೆ ಡಿಕೆ ಕೂಡ ಶಾಲು ಹಾಕ್ತಿದ್ದಾರೆಂದು ಸಿದ್ದರಾಮಯ್ಯನವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಟವೆಲ್ ಹಾಕುತ್ತಿದ್ದೆ. ಅದು ಯಾವಾಗಲೂ ಬಿದ್ದು ಹೋಗುತ್ತಿತ್ತು. ಅವತ್ತಿನಿಂದ ನಾನು ಶಾಲು ಹಾಕ್ತಿರೋದು, ಬೇರೆ…