LPG ಸಿಲಿಂಡರ್ ಕೊರತೆ: ಹೋಟೆಲ್ ಮುಚ್ಚುವುದೇ ಕೊನೆಯ ದಾರಿ
ಬೆಂಗಳೂರು, ಮಾ.9: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಭಾರತದ ಮೇಲೂ ಪರಿಣಾಮ ಬೀರಿದೆ. ಈ ಯುದ್ಧದಿಂದಾಗಿ ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಕೊರತೆ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಅವರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಕಂಡುಬಂದಿದ್ದು, ಶನಿವಾರದಿಂದ 19 ಕೆ.ಜಿ. ಸಿಲಿಂಡರ್‌ಗಳ ಭರ್ತಿ ಸ್ಥಗಿತಗೊಂಡಿದೆ. ತೈಲ ಕಂಪನಿಗಳು ಸ್ಟಾಕ್ ಇದೆ ಎಂದು ಹೇಳುತ್ತಿದ್ದರೂ, ಡಿಸ್ಟ್ರಿಬ್ಯೂಟರ್‌ಗಳು…