ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್ಮ್ಯಾನ್ ಸಲಹೆ ಕೇಳಿ – Kannada News | Sam Altman says, no one cares about your idea, success is on executing that
ನವದೆಹಲಿ, ಫೆಬ್ರುವರಿ 23: ಇವತ್ತು ಬೆಳೆಯುತ್ತಿರುವ ಪ್ರಪಂಚದಲ್ಲಿ ಹೊಸ ಹೊಸ ಆಲೋಚನೆಗಳು, ಬ್ಯುಸಿನೆಸ್ ಐಡಿಯಾಗಳು ಹೊರಹೊಮ್ಮುತ್ತಲೇ ಇರುತ್ತವೆ. ಯಾರಿಗೋ ಬಂದಿದ್ದ ಐಡಿಯಾವನ್ನು ಇನ್ಯಾರೋ ಸಮರ್ಪಕವಾಗಿ ಜಾರಿಗೆ ತಂದು ಯಶಸ್ವಿಯಾಗಿರುವ ಹಲವು ನಿದರ್ಶನಗಳಿವೆ. ಮೊದಲು ಐಡಿಯಾ ಹೊಂದಿದ್ದವರು ಅದನ್ನು ಜಾರಿಗೆ ತರಲು ವಿಫಲರಾಗಿರುವ ನಿದರ್ಶನಗಳೂ ಬಹಳ ಇವೆ. ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ (Sam Altman) ಈ ವಿಚಾರದ ಬಗ್ಗೆ ಕಡ್ಡಿ ತುಂಡು ಮಾಡಿದಂತೆ ಮಾತನಾಡಿದ್ದಾರೆ. ನಿಮ್ಮಲ್ಲಿ ಐಡಿಯಾ ಇದೆಯಾ ಅನ್ನೋದು ಯಾರಿಗೂ ಬೇಕಾಗಿಲ್ಲ. ಆ ಐಡಿಯಾವನ್ನು…