Headlines

ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು – Kannada News

ವಾಷಿಂಗ್ಟನ್, ಜೂನ್ 4: ಅಮೆರಿಕದಲ್ಲಿ (US) ವಲಸಿಗರು ಸ್ಥಾಪಿಸಿದ ಪ್ರತಿ 5 ಯೂನಿಕಾರ್ನ್‌ಗಳಲ್ಲಿ (Unicorns – $1 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್ ಕಂಪನಿಗಳು) ಒಂದು ಕಂಪನಿಯು ಭಾರತೀಯ ಮೂಲದ ಸಂಸ್ಥಾಪಕರನ್ನು (Indian Founders) ಹೊಂದಿದೆ. ಇದು ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ (ಎನ್​ಎಫ್​ಎಪಿ) ಪ್ರಸ್ತುತಪಡಿಸಿದ ವರದಿಯಿಂದ ತಿಳಿದುಬಂದಿದೆ. ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿ ಬಿಲಿಯನ್ ಡಾಲರ್ ಮೌಲ್ಯದ ಉದ್ಯಮಗಳನ್ನು ಸ್ಥಾಪಿಸಿರುವ ಭಾರತೀಯರ ಸಂಖ್ಯೆ 96 ಅಂತೆ. ಅಮೆರಿಕದ ಪ್ರಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಭಾರತೀಯರ…

Read More

Video: ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಟೆಲ್ ಅವಿವ್, ಮಾರ್ಚ್​ 20: ಮಧ್ಯಪ್ರಾಚ್ಯದಲ್ಲಿ ಯುದ್ಧವು 21 ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿ ಗಂಟೆಯೂ ಪರಿಸ್ಥಿತಿ ನಿರಂತರವಾಗಿ ಉಲ್ಬಣಗೊಳ್ಳುತ್ತಲೇ ಇದೆ. ಇರಾನ್ ಹೈಫಾದಲ್ಲಿರುವ ಇಸ್ರೇಲ್‌ನ ಪ್ರಮುಖ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಬ್ಯಾರೇಜ್ ಅನ್ನು ಸಂಪೂರ್ಣವಾಗಿ ತಡೆಯಲು ವಿಫಲವಾದವು. ಇದು ಇಸ್ರೇಲ್ ಮೇಲೆ ಇರಾನ್ ನಡೆಸಿದ ಅತಿದೊಡ್ಡ ದಾಳಿಯಾಗಿದೆ. ಹೈಫಾ ಬಂದರು ಭಾರತ-ಇಸ್ರೇಲ್ ವ್ಯಾಪಾರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಇಸ್ರೇಲ್‌ನ ಇಂಧನ, ಬಂದರು ಮತ್ತು ಮೂಲಸೌಕರ್ಯ ವಲಯಗಳಲ್ಲಿ ಭಾರತವು ಪ್ರಮುಖ…

Read More

‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ? – Kannada News | Did Dhurandhar’s Rehman Dakait character offered to Akkineni Nagarjuna first

ಬಾಲಿವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್’ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನೇ ಬರೆದಿದೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ಅವರಷ್ಟೆ ಪ್ರಾಮುಖ್ಯತೆಯನ್ನು ಇತರೆ ಪಾತ್ರಗಳು ಸಹ ಪಡೆದುಕೊಂಡಿವೆ. ಅದರಲ್ಲೂ ರಹಮಾನ್ ಡಕೈತ್ ಪಾತ್ರವಂತೂ ಸೂಪರ್ ಹಿಟ್ ಆಗಿದೆ. ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ, ತಾವೇಕೆ ಬಾಲಿವುಡ್​ನ ಪ್ರತಿಭಾವಂತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಈ ಪಾತ್ರ ಮೊದಲಿಗೆ ದಕ್ಷಿಣದ ಸ್ಟಾರ್ ನಟನಿಗೆ ಆಫರ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ತೆಲುಗಿನ ಸ್ಟಾರ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ…

Read More

ಒಟಿಟಿಯಲ್ಲಿ ‘ಧುರಂಧರ್’ ನೋಡಿ ಮೆಚ್ಚಿಕೊಂಡ ಪಾಕಿಸ್ತಾನಿ ಪ್ರೇಕ್ಷಕರು – Kannada News | Pakistani viewer review Dhurandhar after watching it on Netflix OTT

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಅಲ್ಲದೇ ಹಲವು ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಒಟಿಟಿಯಲ್ಲಿ ‘ಧುರಂಧರ್’ ಬಿಡುಗಡೆ ಆಗಿದೆ. ಪಾಕಿಸ್ತಾನದ (Pakistan) ಜನರು ಕೂಡ ನೆಟ್​ಫ್ಲಿಕ್ಸ್ ಮೂಲಕ ಈ ಸಿನಿಮಾವನ್ನು ನೋಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಧುರಂಧರ್’ ಸಿನಿಮಾದ ಪೂರ್ತಿ ಕಥೆ ಪಾಕಿಸ್ತಾನದ ಲಿಯಾರಿ ಪಟ್ಟಣದಲ್ಲಿ ನಡೆಯುತ್ತದೆ. ಆ ದೃಶ್ಯಗಳನ್ನು ಕಂಡು ಪಾಕ್ ಮಂದಿ ಫಿದಾ ಆಗಿದ್ದಾರೆ. 2000ನೇ ಇಸವಿಯ…

Read More

ಬೇಕಿರುವುದು ತೈಲವಲ್ಲ ವೆನೆಜುವೆಲಾದ ಕೀಲಿಕೈ, ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಟ್ರಂಪ್ – Kannada News | Trump’s Truth Social Post Declares Him Acting President of Venezuela Amid Caracas Crisis

ವಾಷಿಂಗ್ಟನ್, ಜನವರಿ 12: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​(Donald Trump)ನ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದಾಗ ಅವರಿಗೆ ಬೇಕಾಗಿರುವುದು ಕೇವಲ ವೆನೆಜುವೆಲಾದ ತೈಲ ಮಾತ್ರವಲ್ಲ, ದೇಶದ ಕೀಲಿಕೈ ಕೂಡ ಎಂಬುದು ಸ್ಪಷ್ಟವಾಗುತ್ತದೆ. ಅಮೆರಿಕವು ಇತ್ತೀಚೆಗೆ ವೆನೆಜುವೆಲಾ ವಿರುದ್ಧ ಮಿಲಿಟರಿ ದಾಳಿ ನಡೆಸಿ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿತ್ತು. ಈಗ ಅಷ್ಟೇ ಅಲ್ಲ ಡೊನಾಲ್ಡ್​ ಟ್ರಂಪ್ ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಅವರು ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದರ…

Read More

ಬೆಂಗಳೂರಿನಲ್ಲಿ ಪ್ರೀತಿಸಿದವರ ವಶೀಕರಣಕ್ಕೆ ಆನ್‌ಲೈನ್‌ನಲ್ಲಿ ಉಡದ ಜನನಾಂಗ ಮಾರಾಟ ಮಾಡುತ್ತಿದ್ದ ಮಾಂತ್ರಿಕ – Kannada News | Bengaluru godman arrested for selling monitor lizard parts online

ಬೆಂಗಳೂರು, ಜ.11: ಬೆಂಗಳೂರಿನಲ್ಲಿ ಮಾಂತ್ರಿಕನೊಬ್ಬ ಉಡದ (Monitor lizard )ಜನನಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರೀತಿಗಾಗಿ ವಶೀಕರಣ, ಪ್ರೇಮ ವಿವಾಹದ ಕಲಹಗಳಿಗೆ ಈ ಹಲ್ಲಿಯ ಜನನಾಂಗವನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ. ಮಾಂತ್ರಿಕ ಶಕ್ತಿ ಇದೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದ, ಪ್ರೇಮಿಗಳ ನಡುವಿನ ಘರ್ಷಣೆಯನ್ನು ಪರಿಹರಿಸಬಹುದು ಎಂದು ಹೇಳಿ ಪ್ರತಿ ತುಂಡನ್ನು 10,000 ರೂ.ಗೆ ಮಾರಾಟ ಮಾಡಿದನೆಂದು ವರದಿಯಾಗಿದೆ. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ, ಎನ್‌ಜಿಒವೊಂದು ತನಿಖೆ ಮಾಡಲು ವೈಯಕ್ತಿಕ ಸಮಸ್ಯೆ…

Read More

Video: ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ, ಕೂಡಲೇ ಬಂದು ಅಪಾಯ ತಪ್ಪಿಸಿದ ಪೊಲೀಸ್ – Kannada News | Swift Action: Cop Saves Woman and Child After Escalator Slip

ಜೈಪುರ, ಏಪ್ರಿಲ್ 24: ಜೈಪುರದ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್​ ಹತ್ತುವಾಗ ಕೈಯಲ್ಲಿದ್ದ ಮಗು ಸಮೇತ ಮಹಿಳೆಯೊಬ್ಬರು ಬೀಳೋಕಾದ ಘಟನೆ ನಡೆದಿದೆ. ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಬ್ಯಾಗ್ ಇದ್ದುದರಿಂದ ಅವರಿಗೆ ಎಸ್ಕಲೇಟರ್‌ನ ಹ್ಯಾಂಡಲ್ ಹಿಡಿಯಲು ಸಾಧ್ಯವಾಗಲಿಲ್ಲ. ಅವರು ಮಗುವಿನೊಂದಿಗೆ ಹಿಂದಕ್ಕೆ ಬೀಳಲು ಪ್ರಾರಂಭಿಸಿದರು. ಅವರು ಕೆಳಕ್ಕೆ ಬಿದ್ದರೆ ಮಗು ಮತ್ತು ತಾಯಿ ಇಬ್ಬರಿಗೂ ಗಂಭೀರ ಗಾಯಗಳಾಗುವುದು ನಿಶ್ಚಿತವಾಗಿತ್ತು. ಕೆಳಗೆ ನಿಂತಿದ್ದ ಪೊಲೀಸ್ ಮಹಿಳೆಯನ್ನು ಕಂಡ ತಕ್ಷಣ, ಒಂದು ಕ್ಷಣವೂ ವ್ಯರ್ಥ ಮಾಡದೆ ಎಸ್ಕಲೇಟರ್ ಕಡೆಗೆ ಓಡಿದರು….

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಹಳೆಯದಾದ ದೊಡ್ಡ ತಪ್ಪೊಂದು ಹೊರಬಲಿದೆ..

ಮೇಷ ರಾಶಿ : ಆಕ್ಷೇಪಕ್ಕೆ ಸಕಾರಣವನ್ನು ಕೊಡುವುದು ಸೂಕ್ತ. ಇದರಿಂದ ತೊಂದರೆ ಸಿಕ್ಕಿಹಾಕಿಕೊಳ್ಳುವ ಸ್ಥಿತಿ ತಪ್ಪುತ್ತದೆ. ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಮನಸ್ಸಿಗೆ ನೆಮ್ಮದಿ ಪಡೆಯಿರಿ. ಇದರಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದ್ದಾದರೂ ಪ್ರಲೋಭನೆಗೆ ಒಳಗಾಗುವ ಸಾಧ್ಯತೆ ಇದೆ. ವೃಷಭ ರಾಶಿ : ಇಂದು ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವುದು. ಹಣಕಾಸನ್ನು ಭದ್ರವಾಗಿ ಇಟ್ಟುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ. ಮಕ್ಕಳಿಗೆ ಸಹಾಯ…

Read More

‘ಧುರಂಧರ್ 2’ ಬಿಡುಗಡೆಗೂ ಮುನ್ನ ನಟ ರಣವೀರ್ ಸಿಂಗ್​​ಗೆ ಬೆದರಿಕೆ – Kannada News | Dhurandhar 2 star Ranveer Singh gets threat call demanding Rs 10 Cr

ನಟ ರಣವೀರ್ ಸಿಂಗ್ ಅವರು ಕಳೆದ ವರ್ಷ ‘ಧುರಂಧರ್’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡರು. ಈಗ ‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಯ ತಯಾರಿಯಲ್ಲಿ ಇರುವಾಗಲೇ ಒಂದು ಆತಂಕ ಎದುರಾಗಿದೆ. ರಣವೀರ್ ಸಿಂಗ್ (Ranveer Singh) ಅವರಿಗೆ ಬೆದರಿಕೆ ಹಾಕಲಾಗುತ್ತಿದೆ. ಆ ಮೂಲಕ ಹಣ ದೋಚಲು (Extortion) ಖದೀಮರು ಸಂಚು ರೂಪಿಸಿದ್ದಾರೆ. ಈ ಬಾರಿ ಬರೋಬ್ಬರಿ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು ತನಿಖೆ…

Read More

ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ – Kannada News | Responsible Nations Index: How India Is Reframing Global Power

ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ ಜಾಗತಿಕವಾಗಿ ವಿವಿಧ ದೇಶಗಳನ್ನು ವಿವಿಧ ರೀತಿಯಲ್ಲಿ ಅಳೆಯಲು ಬೇರೆ ಬೇರೆ ಸೂಚ್ಯಂಕಗಳಿವೆ. ಇವೆಲ್ಲವನ್ನೂ ರಚಿಸುವ ಏಜೆನ್ಸಿಗಳೆಲ್ಲವೂ ಪಾಶ್ಚಿಮಾತ್ಯರದ್ದೇ ಆಗಿವೆ. ಬಡತನ, ಪ್ರಜಾತಂತ್ರ, ಸಾಮಾಜಿಕ ಭದ್ರತೆ, ಭ್ರೂಣಹತ್ಯೆ, ಅಲ್ಪಸಂಖ್ಯಾತ ರಕ್ಷಣೆ ಇತ್ಯಾದಿ ನಾನಾ ವಿಷಯಗಳಿಗೆ ಗ್ಲೋಬಲ್ ಇಂಡೆಕ್ಸ್​ಗಳಿವೆ. ಇವುಗಳಲ್ಲಿ ಭಾರತಕ್ಕೆ ಸಿಗುವ ಸ್ಥಾನಮಾನ ಅಷ್ಟಕಷ್ಟೇ. ಭಾರತದಲ್ಲಿ ಪ್ರಜಾತಂತ್ರಾತ್ಮಕ ವ್ಯವಸ್ಥೆ ಶಿಥಿಲವಾಗಿದೆ ಎಂದು ಕೆಲ ಏಜೆನ್ಸಿಗಳು ವರದಿ ಮಾಡುವುದಿದೆ. ಯಾವ ಮಾನದಂಡ ಅಥವಾ ಅಳತೆಗೋಲು ಇಟ್ಟುಕೊಂಡು ದೇಶಗಳ ಪರಿಸ್ಥಿತಿಯನ್ನು ಅಂದಾಜಿಸುತ್ತಾರೆ ಎಂಬುದು ಸಂಶಯಕ್ಕೆ ಎಡೆ ಮಾಡುವಂತಿರುತ್ತದೆ….

Read More