Headlines

Horoscope Today 03 February​: ಇಂದು ಈ ರಾಶಿಯವರಿಗೆ ಧನ ಯೋಗ!

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 03 ಫೆಬ್ರುವರಿ​ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಮಂಗಳವಾರವಾಗಿದ್ದು, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಬಿದಿಗೆ ತಿಥಿ, ಮಖಾ ನಕ್ಷತ್ರದಲ್ಲಿ ಚಂದ್ರ ಸಂಚರಿಸುತ್ತಿರುವ ಈ ದಿನದಂದು, ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಇರಲಿದೆ. ಈ ದಿನದ ರಾಹುಕಾಲ ಮಧ್ಯಾಹ್ನ 3:27 ರಿಂದ 4:54ರ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲವು…

Read More

ಸರ್ಕಾರಿ ಹಾಸ್ಟೆಲ್​ನಲ್ಲಿ ಖಾಸಗಿ ಕೋಚಿಂಗ್ ಸೆಂಟರ್ ಓಪನ್! ಲಂಚದ ಆಸೆಗೆ ಬಿದ್ದು ಸರ್ಕಾರಿ ಕಟ್ಟಡ ಬಾಡಿಗೆ ನೀಡಿದ್ರಾ ಅಧಿಕಾರಿಗಳು? – Kannada News | Yadgir Hostel Scam: Private Coaching Center Illegally Operates in Govt Building

ಸರ್ಕಾರಿ ಹಾಸ್ಟೆಲ್ ನಲ್ಲಿ ಕೋಚಿಂಗ್ ಸೆಂಟರ್ ಓಪನ್! ಯಾದಗಿರಿ, ಏಪ್ರಿಲ್ 21: ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡದ ದುರುಪಯೋಗಪಡಿಸಿಕೊಂಡ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ (Yadgir) ತಾಲೂಕಿನ ಲಿಂಗೇರಿ ಸ್ಟೇಷನ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಅಕ್ರಮವಾಗಿ ಕೋಚಿಂಗ್ ಸೆಂಟರ್ ಆರಂಭಿಸಿರುವ ಆರೋಪ ಕೇಳಿಬಂದಿದೆ. ಪ್ರತಿ ತಿಂಗಳು ತಲಾ 5 ಸಾವಿರ ರೂ ಶುಲ್ಕ! ದೇವಿಂದ್ರಪ್ಪ ಎಂಬಾತ ಅಧಿಕಾರಿಗಳಿಗೆ ಹಣ ನೀಡಿ ಹಾಸ್ಟೆಲ್…

Read More

ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ – Kannada News | Yash mother Pushpa Arun Kumar visits DGP office in Bengaluru over Hassan site controversy

ನಟ ಯಶ್ (Yash) ಅವರ ತಾಯಿ ಪುಷ್ಪಾ ಅರುಣ್​ಕುಮಾರ್ ಅವರು ಬೆಂಗಳೂರಿನಲ್ಲಿ ಡಿಜಿಪಿ (DGP) ಕಚೇರಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಹಾಸನ ಸೈಟ್ ವಿಚಾರವಾಗಿ ಭೇಟಿಯಾಗಿದ್ದೆ. ಕೋರ್ಟ್​ನಲ್ಲಿ ಒಂದು ರಿಪೋರ್ಟ್ ಕೇಳಿದ್ದರು. ಪೊಲೀಸರ ಹತ್ತಿರ ರಿಪೋರ್ಟ್ ತರಬೇಕಿತ್ತು. ಅಲ್ಲಿನ ಎಸ್ ಪಿ ಸ್ಪಂದಿಸಿರಲಿಲ್ಲ. ನಿಧಾನ ಆಯ್ತು, ಅದಕ್ಕೆ ಡಿಜಿಪಿಯವರನ್ನ ಭೇಟಿಯಾಗಿದ್ದೇವೆ. ಇಲ್ಲಿಂದ ಎಸ್​ಪಿಯವರಿಗೆ ರೆಫರ್ ಮಾಡಿದ್ದಾರೆ. ಅಲ್ಲಿನ ಅಧಿಕಾರಿ ಆ ಕೆಲಸ ಮಾಡಬೇಕಿತ್ತು. ಅವರು ಮಾಡಿಲ್ಲ. ನಾನು ಈಗ ಬೆಂಗಳೂರಿನಲ್ಲಿ…

Read More

21 ವರ್ಷದ ಬೆಂಗಳೂರು ಹುಡುಗ ಎಡ್ವರ್ಡ್​ಗೆ ಎರಡೂವರೆ ಕೋಟಿ ರೂ ಸಂಬಳ ಆಫರ್ – Kannada News | IIT Hyderabad student Edward Nathan Varghese gets Rs 2.5 crore package offer from The Netherlands firm

ಹೈದರಾಬಾದ್, ಜನವರಿ 2: ಇಲ್ಲಿಯ ಐಐಟಿಯಲ್ಲಿ ಕೊನೆಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 21 ವರ್ಷದ ಎಡ್ವರ್ಡ್ ನೇತನ್ ವರ್ಗೀಸ್​ಗೆ (Edward Nathan Varghese) ದಾಖಲೆ ಸಂಬಳದ ಕೆಲಸಕ್ಕೆ ಆಫರ್ ಸಿಕ್ಕಿದೆ. ವರದಿ ಪ್ರಕಾರ, ಐಐಟಿ ಹೈದರಾಬಾದ್​ನ ಎಡ್ವರ್ಡ್​ಗೆ 2.5 ಕೋಟಿ ರೂ ಸ್ಯಾಲರಿ ಪ್ಯಾಕೇಜ್ ಕೊಡಲಾಗುತ್ತಿದೆ. ನೆದರ್​ಲ್ಯಾಂಡ್ಸ್ ಮೂಲದ ಗ್ಲೋಬಲ್ ಟ್ರೇಡಿಂಗ್ ಸಂಸ್ಥೆಯಾದ ಆಪ್ಟಿವರ್ (Optiver) ಇಂತಹದ್ದೊಂದು ಭರ್ಜರಿ ಆಫರ್ ಅನ್ನು ಭಾರತೀಯ ವಿದ್ಯಾರ್ಥಿಗೆ ಕೊಟ್ಟಿದೆ. ಇಂಟರ್ನ್​ಶಿಪ್​ನಲ್ಲಿ ಕಂಪನಿಯನ್ನು ಸೆಳೆದ ಎಡ್ವರ್ಡ್ ಎಡ್ವರ್ಡ್…

Read More

Horoscope Today: ಇಂದು ಈ ರಾಶಿಯವರಿಗೆ ಅನಾರೋಗ್ಯ ಕಾಡಬಹುದು!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 15, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಪೂರ್ವಭಾದ್ರ ನಕ್ಷತ್ರ, ಬ್ರಹ್ಮಯೋಗ ಮತ್ತು ಗರಜಕರಣಗಳಿಂದ ಕೂಡಿದ ಈ ದಿನದ ರಾಹುಕಾಲ ಮಧ್ಯಾಹ್ನ 12:29 ರಿಂದ 1:52ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ, ಶುಭಕಾಲ ಬೆಳಗ್ಗೆ 10:46 ರಿಂದ 12:19ರವರೆಗೆ ಇದೆ ಎಂದು…

Read More

ವಿಜಯಪುರದಲ್ಲೊಂದು ಅಮಾನವೀಯ ಘಟನೆ: ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ – Kannada News | Vijayapura: Father Kills 6 Year Old Son: Pushed into Krishna River over Resemblance

ವಿಜಯಪುರ, ಏಪ್ರಿಲ್​ 14: ವಿಜಯಪುರದಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆ ನಡೆದಿದೆ. ನೋಡಲು ತನ್ನಂತೆ ಇಲ್ಲ ಎಂದು 6 ವರ್ಷದ ತನ್ನ ಮಗನನ್ನೇ ತಂದೆ (Father) ಕೊಲೆ (Kill) ಮಾಡಿರುವಂತಹ ದಾರುಣ ಘಟನೆ ನಗರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿಯ ಕೃಷ್ಣಾ ನದಿ ಬಳಿ ಮಗ ಸಿದ್ದಾರ್ಥನನ್ನ ಕರೆದುಕೊಂಡು ಹೋದ ತಂದೆ ಮಲ್ಲಿಕಾರ್ಜುನ ಅರಕೇರಿ ನದಿಗೆ ತಳ್ಳಿ ಹತ್ಯೆ ಮಾಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ…

Read More

ಟಿ20 ವಿಶ್ವಕಪ್ ಫೈನಲ್: ಹರಿಯಲಿದೆ ಮನರಂಜನೆ ಮಹಾಪೂರ, ಯಾರ್ಯಾರು ಬರಲಿದ್ದಾರೆ?

ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ 2026 ಟಿ20 ವಿಶ್ವಕಪ್ ಇಂದು (ಮಾರ್ಚ್ 08) ಮುಕ್ತಾಯವಾಗಲಿದೆ. ಇಂದು ಅಹಮದಾಬಾದ್​​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 2026 ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಪಂದ್ಯ ಜಿದ್ದಾಜಿದ್ದಿನದ್ದಾಗಿರಲಿದೆ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಪಂದ್ಯ ಆರಂಭಕ್ಕೂ ಮುಂಚೆ ಭರಪೂರ ಮನೊರಂಜನೆ ಪ್ರೇಕ್ಷಕರಿಗೆ ದೊರಕಲಿದೆ. ಕೆಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಾಯಕರುಗಳು ಫೈನಲ್ ಪಂದ್ಯದ ಮುಂಚೆ ಮನರಂಜನಾ…

Read More

IND vs NED: ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟ ಟೀಂ ಇಂಡಿಯಾ – Kannada News | T20 World Cup: India Dominates Netherlands, Secures Super 8 Spot Unbeaten

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್​ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್​ಗಳ ಗೆಲುವು ದಾಖಲಿಸಿ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದವರೆಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಶಿವಂ ದುಬೆ ಅವರ ಅರ್ಧಶತಕದ ನೆರವಿನಿಂದ 193 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ನಿಯಮಿತ…

Read More

ಬಂಗಾಳ ಚುನಾವಣೆಗೆ ಬಿಜೆಪಿ ‘ಮಹಾ’ ಪ್ರಣಾಳಿಕೆ: ಮಹಿಳೆಯರಿಗೆ 3,000 ರೂ. ಮಾಸಾಶನ, 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ

ಕೋಲ್ಕತ್ತಾ, ಏಪ್ರಿಲ್ 10: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣಾ ಕಣ ಈಗ ರಂಗೇರಿದೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಭೇದಿಸಲು ಬಿಜೆಪಿ ತನ್ನೆಲ್ಲಾ ಶಕ್ತಿಯನ್ನು ಬಳಸುತ್ತಿದ್ದು, ಭರಪೂರ ಭರವಸೆಗಳ ‘ಸಂಕಲ್ಪ ಪತ್ರ’ವನ್ನು ಮತದಾರರ ಮುಂದಿಟ್ಟಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಸಂಕಲ್ಪ ಪತ್ರ ಎಂದು ಕರೆಯಲಾದ ಈ ಪ್ರಣಾಳಿಕೆಯು…

Read More

ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು – Kannada News | Ballari Riot: Sriramulu Alleges Congress Activist Rajasekhar Body Burned for Evidence Destruction

ಬಳ್ಳಾರಿ, ಜನವರಿ 06: ಸಂಪ್ರದಾಯದ ಪ್ರಕಾರ ಕಾಂಗ್ರೆಸ್​​ ಕಾರ್ಯಕರ್ತ ರಾಜಶೇಖರ್​ ಮೃತದೇಹವನ್ನು ಮಣ್ಣು ಮಾಡಬೇಕಿತ್ತು. ಆದರೆ ಸುಟ್ಟು ಹಾಕಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿ ಜನಾರ್ದನರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಶೇಖರ್ ಮೃತದೇಹವನ್ನ ಮಣ್ಣು ಮಾಡಬೇಕಿತ್ತು. ಸಾಕ್ಷಿ ನಾಶ ಮಾಡಬೇಕು ಅಂತ ವ್ಯವಸ್ಥಿತವಾಗಿ ಸುಟ್ಟು ಹಾಕಲಾಗಿದೆ. ಅವರ ಕುಟುಂಬಸ್ಥರನ್ನ ಪೊಲೀಸರು ಹೆದರಿಸಿ, ಬೆದರಿಸಿದ್ದಾರೆ. ಬಹಳಷ್ಟು ಬುಲೆಟ್ ಆತನ ದೇಹ ಹೊಕ್ಕಿದೆ. ಏಕೆ ಸುಟ್ಟು ಹಾಕಿದರು. ಇಂದಲ್ಲಾ ನಾಳೆ…

Read More