Headlines

ಬೆಂಗಳೂರು ಚಿತ್ರೋತ್ಸವ: ಹಂಸಲೇಖಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ – Kannada News | Lifetime Achievement Award for Hamsalekha at Bengaluru International Film Festival

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ (Lifetime Achievement Award) ನೀಡಿ ಗೌರವಿಸಲಾಗುತ್ತದೆ. ಕಳೆದ ಗುರುವಾರ (ಜನವರಿ 29) ಪ್ರಾರಂಭವಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು (Bengaluru Film Festival) ಶುಕ್ರವಾರ (ಫೆಬ್ರವರಿ 6) ಸಮಾರೋಪ ಕಾಣಲಿದ್ದು, ಈ ಸಮಾರಂಭದಲ್ಲಿ ಹಂಸಲೇಖ (Hamsalekha) ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು…

Read More

ಛತ್ತೀಸ್​ಗಢದ ಉಕ್ಕಿನ ಸ್ಥಾವರದಲ್ಲಿ ಭಾರಿ ಸ್ಫೋಟ, 7 ಮಂದಿ ಸಾವು, ಹಲವರಿಗೆ ಗಾಯ – Kannada News | Tragedy in Chhattisgarh: 7 Killed, Several Injured in Steel Plant Blast

ಬಲೋಡಾ ಬಜಾರ್, ಜನವರಿ 22: ಛತ್ತೀಸ್​ಗಢದ ಬಲೋಡಾ ಬಜಾರ್ ಜಿಲ್ಲೆಯಲ್ಲಿರುವ ಉಕ್ಕಿನ ಸ್ಥಾವರದಲ್ಲಿ ಗುರುವಾರ ಭಾರಿ ಸ್ಫೋಟ(Blast) ಸಂಭಿಸಿದ್ದು, 7  ಕಾರ್ಮಿಕರು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಬಕುಲಾಹಿ ಮೂಲದ ರಿಯಲ್ ಇಸ್ಪಾಟ್ ಸ್ಟೀಲ್ ಪ್ಲಾಂಟ್‌ನಲ್ಲಿ ಕಲ್ಲಿದ್ದಲು ಕುಲುಮೆ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಈ ಸ್ಫೋಟ ಸಂಭವಿಸಿದೆ. ಘಟನೆಯ ಸಮಯದಲ್ಲಿ, ಕಾರ್ಮಿಕರ ಗುಂಪೊಂದು ಕುಲುಮೆ ಪ್ರದೇಶದ ಸುತ್ತಲೂ ಶುಚಿಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಅವರು ಶಾಖದ ಉಲ್ಬಣ ಮತ್ತು ಸುಡುವ ಕಲ್ಲಿದ್ದಲಿನಲ್ಲಿ ಸಿಲುಕಿಕೊಂಡಿದ್ದರು, ಇದರಿಂದಾಗಿ ಹಲವಾರು ಕಾರ್ಮಿಕರು ಸ್ಥಳದಲ್ಲೇ ಬೆಂದು ಹೋದರು….

Read More

ರಾಧಿಕಾ ಜೊತೆ ಮುಂಬೈನಲ್ಲಿ ಯಶ್ ಸುತ್ತಾಟ; ಗಮನ ಸೆಳೆದ ಹೊಸ ಲುಕ್

ರಾಕಿಂಗ್ ಸ್ಟಾರ್ ಯಶ್ ಅವರು ಹಲವು ವರ್ಷಗಳ ಬಳಿಕ ಪ್ರೇಕ್ಷರ ಎದುರು ಹೊಸ ಲುಕ್​​ನಲ್ಲಿ ಬಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ (KGF 2 Movie) ಕೆಲಸ ಆರಂಭ ಆದಾಗಿನಿಂದಲೂ ಅವರು ಉದ್ದನೆಯ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟಿದ್ದರು. ಅದೇ ರೀತಿಯ ಲುಕ್ ‘ಟಾಕ್ಸಿಕ್’ ಚಿತ್ರದಲ್ಲೂ ಮುಂದುವರಿಯಿತು. ಈ ಚಿತ್ರದ ‘ಟಿಕೆಟ್’ ಹೆಸರಿನ ಪಾತ್ರದ ಲುಕ್​​ಗಾಗಿ ಅವರು ಗಡ್ಡ ಹಾಗೂ ಕೂದಲನ್ನು ಕತ್ತರಿಸಿ ಸಣ್ಣದಾಗಿಸಿಕೊಂಡಿದ್ದಾರೆ. ಈಗ ಈ ಲುಕ್​​ನ ಅನಾವರಣ ಆಗಿರುವುದರಿಂದ ಯಶ್ ಅದನ್ನು ಸಾರ್ವಜನಿಕವಾಗಿ ತೋರಿಸಿದ್ದಾರೆ….

Read More

ಬಸ್​​ಗೆ ಬೈಕ್​​ ಡಿಕ್ಕಿಯಾಗಿ ಯುವಕ ಸಾವು: ಇದು ಅಪಘಾತವೋ? ಆತ್ಮಹತ್ಯೆಯೋ? ಎಂಬುದೇ ಈಗ ಅನುಮಾನ

ವಿಜಯಪುರ, ಮಾರ್ಚ್​​ 31: ಸಾರಿಗೆ ಬಸ್​, ಬೈಕ್​ ನಡುವೆ ಡಿಕ್ಕಿಯಾದ ಪರಿಣಾಮ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್​​ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್‌ಗೇಟ್ ಬಳಿ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಮೂಲದ ಅಭಿಷೇಕ ನಾಗರಾಳ (25) ಮೃತ ಯುವಕನಾಗಿದ್ದು, ಬಸ್​​ನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್​​ನಿಂದ ಕೆಳಗೆ ಇಳಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಬಸ್​​ ಕೂಡ…

Read More

‘ಜನ ನಾಯಗನ್’ ಚಿತ್ರಕ್ಕೆ ಶಾಕ್; ಸಿನಿಮಾ ರಿಲೀಸ್ ಮುಂದಕ್ಕೆ – Kannada News | Thalapathy Vijay’s ‘Jan Nayagan’ Release Postponed due to Censor issue KVN Announced

ದಳಪತಿ ವಿಜಯ್ (Thalapathy Vijay) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ರಾಜಕೀಯಕ್ಕೆ ಬರಲು ಅವರು ಅಡಿಯಾಗುತ್ತಿದ್ದಾರೆ. ಅವರ ಕೊನೆಯ ಚಿತ್ರ ‘ಜನ ನಾಯಗನ್’ಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಆದರೆ, ಈಗ ಸಿನಿಮಾ ರಿಲೀಸ್ ತಾತ್ಕಲಿಕವಾಗಿ ಮುಂದಕ್ಕೆ ಹೋಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಇದರ ಹಿಂದೆ ರಾಜಕೀಯದ ಕೆಸರೆರೆಚಾಟ ಇರಬಹುದು ಎಂದು ಕೂಡ ಊಹಿಸಲಾಗುತ್ತಿದೆ. ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಮಾಡಿಸಲು ‘ಕೆವಿಎನ್’…

Read More

ಪೊಲೀಸ್​ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರ್ಯಾರು? ರೌಡಿಶೀಟರ್​​ ಅರ್ಜಿ ವಜಾ

ಬೆಂಗಳೂರು, ಏಪ್ರಿಲ್​ 01: ರೌಡಿಶೀಟರ್‌ನಿಂದ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿನ ಟ್ರಸ್ಟ್‌ನಡಿ ನೈತಿಕ ಪೊಲೀಸ್‌ಗಿರಿ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನಕಾರ ಎತ್ತಿರುವ ಕರ್ನಾಟಕ  ಹೈಕೋರ್ಟ್ (High Court), ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ತುಮಕೂರಿನ ತಿಲಕ್‌ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ  ಮೊಹಮ್ಮದ್ ಖಲಂದರ್, ಗೌಸ್ ಪಾಷಾ ಮತ್ತು ಆಶಿಯಾ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮಾಡಿ ರೌಡಿಶೀಟರ್‌…

Read More

ಕೇರಳಂನ ಮಾಜಿ ಸಿಎಂ ಪಿಣರಾಯಿ ನಿವಾಸದ ಮೇಲೆ ಇಡಿ ದಾಳಿ, ಪುತ್ರಿಯ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ಬಿಗಿ – Kannada News | Pinarayi Vijayan’s Daughter Veena Under ED Scanner in CMRL Money Laundering Case

ತಿರುವನಂತಪುರ, ಮೇ 27: ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ನಿವಾಸ ಸೇರಿ 10 ಕಡೆಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದ್ದಾರೆ. ಕೊಚ್ಚಿ ಮಿನರಲ್ಸ್​ ಮತ್ತು ರೂಟೈಲ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಭಾರಿ ಆ್ಯಕ್ಷನ್​ಗೆ ಇಳಿದಿದೆ. ಈ ಪ್ರಕರಣದ ಇಡಿ ತನಿಖೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ದಾಳಿಗಳು ನಡೆದಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ದಾಳಿಗೆ ಪ್ರಮುಖ…

Read More

ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್: ಆಗಿದ್ದ ಸಮಸ್ಯೆ ಏನು? – Kannada News | Pawan Kalyan talks about his health condition

ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅವರ ಸಹೋದರ ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಇನ್ನೂ ಹಲವರು ಟ್ವೀಟ್ ಮಾಡಿ ಶೀಘ್ರ ಗುಣಮುಖವಾಗುವಂತೆ ಕೋರಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ವೈದ್ಯರ ಸಲಹೆಯಂತೆ ಕೆಲ ವಾರ ವಿಶ್ರಾಂತಿಯನ್ನೂ ಪಡೆದಿದ್ದರು. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ…

Read More

ಚಿನ್ನದ ಸರ ಕಳ್ಳತನ: ಸಾರಿಗೆ ಬಸ್ ಸಮೇತ ಪೊಲೀಸ್ ಠಾಣೆಗೆ ಬಂದ ಮಹಿಳೆ

ಹಾವೇರಿ, ಮಾರ್ಚ್​ 12: ಸಾರಿಗೆ ಬಸ್​​ನಲ್ಲಿ ಚಿನ್ನದ ಸರ ಕಳ್ಳತನವಾಗಿದ್ದು (Gold Theft), ಬಸ್ ಸಮೇತ ಮಹಿಳೆ ಪೊಲೀಸ್ ಠಾಣೆಗೆ ಬಂದಿರುವಂತಹ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಹಿರೇಬಾಸೂರು ಗ್ರಾಮದ ನಿವಾಸಿ ಮೀನಾಕ್ಷಿ ಕಾಗಿನೆಲೆ 10 ಗ್ರಾಂನ ಚಿನ್ನದ ಸರ ಕಳೆದುಕೊಂಡ ಮಹಿಳೆ. ಅಡಮಾನ ಇಟ್ಟಿದ್ದ ಚಿನ್ನ ಬಿಡಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್​ನಲ್ಲಿ ಕಳ್ಳತನವಾಗಿದೆ. ನನಗೆ ಚಿನ್ನದ ಸರ ಹುಡುಕಿ ಕೊಡಿ ಎಂದು ಬಸ್ ಸಮೇತ ಮಹಿಳೆ ಪೊಲೀಸ್ ಠಾಣೆಗೆ ಬಂದಿದ್ದಾರೆ….

Read More

Bengaluru Air Quality: ಬೆಂಗಳೂರಿನ ಈ ಪ್ರದೇಶಗಳಲ್ಲಿ ಹೆಚ್ಚಿದೆ ಕಳಪೆ ಏರ್ ಕ್ವಾಲಿಟಿ! – Kannada News | Bangalore Air Pollution Crisis: Bengaluru and surrounding places face severe Air pollution

ಬೆಂಗಳೂರಿನ ಈ ಪ್ರದೇಶಗಳಲ್ಲಿ ಹೆಚ್ಚಿದೆ ಕಳಪೆ ಏರ್ ಕ್ವಾಲಿಟಿ! ಬೆಂಗಳೂರು, ಜನವರಿ 04: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (Bengaluru Air Quality) ಇಂದಿನ ಗಾಳಿಯ ಗುಣಮಟ್ಟ 164 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 74 ಇದ್ದರೆ, PM10 101 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ ಕಳಪೆ ಗುಣಮಟ್ಟವಿರುವ…

Read More