Headlines

ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​ : ಮೊದಲ ಹಂತದಲ್ಲಿ 80 ಅರ್ಜಿಗಳು ತಿರಸ್ಕೃತ – Kannada News | Kogilu Layout Demolition: 80 Rehabilitation Applications Rejected

ಬೆಂಗಳೂರು, ಜನವರಿ 25: ಕೋಗಿಲು ಲೇಔಟ್ ಒತ್ತುವರಿದಾರರಿಗೆ ಆಘಾತಕಾರಿ ಸುದ್ದಿ ಎದುರಾಗಿದೆ. ಮನೆ ಹಂಚಿಕೆಗಾಗಿ ಸಲ್ಲಿಕೆಯಾಗಿದ್ದ 167 ಅರ್ಜಿಗಳ ಪೈಕಿ ಮೊದಲ ಹಂತದಲ್ಲಿ 80 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮನೆ ಒದಗಿಸುವ ಭರವಸೆ ನೀಡಲಾಗಿದ್ದ 26 ಜನರ ಅರ್ಜಿಗಳೂ ಕೂಡ ರಿಜೆಕ್ಟ್​​ ಆಗಿರುವುದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಉಳಿದ 87 ಅರ್ಜಿಗಳ ಪರಿಶೀಲನಾ ಕಾರ್ಯ ಪ್ರಸ್ತುತ ನಡೆಯುತ್ತಿದೆ. ಡಿಸೆಂಬರ್ 20ರಂದು ಕೋಗಿಲು ಲೇಔಟ್‍ನಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿತ್ತು. ವಿಚಾರ ದೇಶಾದ್ಯಂತ ಚರ್ಚೆಯಾದ ಬಳಿಕ ಕೆಲವೇ ದಿನಗಳಲ್ಲಿ ಮನೆ ಹಂಚಿಕೆ…

Read More

ಕುಟುಂಬದೊಂದಿಗೆ ಗಾಳಿಪಟ ಹಾರಿಸಿದ ಗೃಹ ಸಚಿವ ಅಮಿತ್ ಶಾ – Kannada News | Home Minister Amit Shah celebrates Uttarayan enjoys kite flying with family

ಅಹಮದಾಬಾದ್, ಜನವರಿ 14: ಗುಜರಾತ್‌ನಲ್ಲಿ ‘ಉತ್ತರಾಯಣ’ ಎಂದೂ ಕರೆಯಲ್ಪಡುವ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಮ್ಮ ಕುಟುಂಬ ಮತ್ತು ನರನ್‌ಪುರ ಪ್ರದೇಶದ ನಿವಾಸಿಗಳೊಂದಿಗೆ ಗಾಳಿಪಟ ಹಾರಿಸಿ ಆನಂದಿಸಿದರು. ಉತ್ತರ ಭಾರತದಲ್ಲಿ ಸಂಕ್ರಾಂತಿಯ ವೇಳೆ ಗಾಳಿಪಟ ಹಾರಿಸುವುದು ಸಂಪ್ರದಾಯವಾಗಿದೆ. ಹಾಗೇ, ಇಂದು ಬೆಳಗ್ಗೆ ಅಮಿತ್ ಶಾ ಜಮಾಲ್‌ಪುರ ಪ್ರದೇಶದ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಇರಾನ್​ ನಟಿಗೆ ಮೆಸೇಜ್ ಮಾಡಿದ್ದಕ್ಕೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​ಗೆ ಹೆಂಡತಿಯಿಂದ ಕಪಾಳಮೋಕ್ಷ! ಹಳೆಯ ವಿಡಿಯೋ ವೈರಲ್ – Kannada News | French president Macrons Wife Slapped him Over Flirty message With Iranian Actor Old Video Viral

ಪ್ಯಾರಿಸ್, ಮೇ 14: ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕಳೆದ ವರ್ಷ ಹೆಂಡತಿಯ ಜೊತೆಗಿನ ವಿದೇಶ ಪ್ರವಾಸದ ಸಮಯದಲ್ಲಿ ಮುಜುಗರಕ್ಕೀಡಾಗಿದ್ದರು. ವಿಮಾನದಿಂದ ಇಳಿಯುವಾಗಲೇ ಮ್ಯಾಕ್ರನ್ (Emmanuel Macron) ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು. ಅದಕ್ಕೆ ಕಾರಣವೇನೆಂಬುದು ಬಯಲಾಗಿದೆ. ಬಿಡುಗಡೆಯಾಗಿರುವ ಹೊಸ ಪುಸ್ತಕದ ಪ್ರಕಾರ, ಫ್ರೆಂಚ್ ಅಧ್ಯಕ್ಷ ಮತ್ತು ಇರಾನ್ ಮೂಲದ ನಟಿ ಗೋಲ್‌ಶಿಫ್ಟೆಹ್ ಫರಹಾನಿ ನಡುವೆ ನಡೆದ ಚಾಟ್ ಅನ್ನು ನೋಡಿದ್ದ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಕಳೆದ ವರ್ಷ ವಿದೇಶಿ…

Read More

‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್? – Kannada News | Ramayana Movie: Yash Clarifies No Ram Ravan Meet in Part 1. Is it a Spoiler?

‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣನ ಪಾತ್ರ ಮಾಡುತ್ತಿದ್ದು, ರಣಬೀರ್ ಕಪೂರ್ ಅವರು ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರದ್ದು ಸೀತೆಯ ಪಾತ್ರ. ಈ ಚಿತ್ರ ಎರಡು ಭಾಗದಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮೊದಲೇ ಯಶ್ ಅವರು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ರೀತಿ ಸಂದರ್ಶನ ನೀಡುವಾಗ ಅವರು ಒಂದು ಪ್ರಮುಖ ವಿಷಯ ರಿವೀಲ್ ಮಾಡಿದರೇ ಎನ್ನುವ ವಿಷಯ ಚರ್ಚೆಗೆ ಕಾರಣ ಆಗಿದೆ. ಆದರೆ, ಅದರ ಅಸಲಿಯತ್ತು ಬೇರೆಯೇ ಇದೆ. ಯಶ್ ಅವರು ‘ಸಿನಿಮಾಕಾನ್…

Read More

ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ – Kannada News | AI Impact Summit 2026, PM Narendra Modi welcomes world leaders

ನವದೆಹಲಿ, ಫೆಬ್ರುವರಿ 16: ರಾಷ್ಟ್ರ ರಾಜಧಾನಿಯ ಭಾರತ್ ಮಂಟಪಂನಲ್ಲಿ ಇವತ್ತಿನಿಂದ ಐದು ದಿನಗಳ ಕಾಲ ನಡೆಯುವ ಎಐ ಇಂಪ್ಯಾಕ್ಟ್ ಶೃಂಗಸಭೆಗೆ (AI Impact Summit 2026) ಜಾಗತಿಕ ನೇತಾರರು, ನಿಯೋಗಗಳು, ಉದ್ಯಮ ಮುಖಂಡರು ಮೊದಲಾದ ಅತಿಥಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಶೃಂಗಸಭೆಯ ಧ್ಯೇಯವಾಕ್ಯವಾದ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಆಶಯದಂತೆ ಈ ಎಐ ಸಭೆಯು ಸರ್ವವರಿಗೂ ಒಳಿತಾಗುವ ಪ್ರಗತಿದಾಯಕ ಭವಿಷ್ಯಕ್ಕೆ ನಾಂದಿ ಹಾಡಬಲ್ಲುದು ಎಂದು ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಕೃತಕ ಬುದ್ಧಿಮತ್ತೆಯನ್ನು ಚರ್ಚಿಸಲು ಜಗತ್ತನ್ನು…

Read More

Forgot UAN: ನಿಮ್ಮ EPF UAN ಸಂಖ್ಯೆ ಮರೆತಿದ್ದೀರಾ? ಚಿಂತಿಸಬೇಡಿ, ಈ ರೀತಿ ಸುಲಭವಾಗಿ ಮರುಪಡೆಯಿರಿ – Kannada News | Forgot UAN? Retrieve Your EPF UAN in Minutes

ಪ್ರತಿ ತಿಂಗಳು ಸಂಬಳದಿಂದ ಪಿಎಫ್ ಕಡಿತಗೊಳಿಸಲಾಗುತ್ತದೆ. ಪಿಎಫ್ ಖಾತೆಗೆ ಸಂಬಂಧಿಸಿದ ಪ್ರತಿಯೊಂದು ಸೌಲಭ್ಯಕ್ಕೂ ಈ 12-ಅಂಕಿಯ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಅಗತ್ಯವಿದೆ. ಆದರೆ ಅನೇಕ ಬಾರಿ ಉದ್ಯೋಗಿಗಳು ತಮ್ಮ ಯುಎಎನ್ ಸಂಖ್ಯೆಯನ್ನು ಮರೆತುಬಿಡುತ್ತಾರೆ. ಇಪಿಎಫ್ ಸೈಟ್‌ಗೆ ನಿಯಮಿತವಾಗಿ ಲಾಗಿನ್ ಆಗದಿರುವುದು ಸೇರಿದಂತೆ ಹಲವು ಕಾರಣಗಳಿವೆ. ಪ್ರತಿಯೊಬ್ಬ ಉದ್ಯೋಗಿ ತಮ್ಮ ವೃತ್ತಿಜೀವನದುದ್ದಕ್ಕೂ ಒಂದೇ ಯುಎಎನ್ ಅನ್ನು ಹೊಂದಿರುತ್ತಾರೆ. ನೀವು ಅದನ್ನು ಮರೆತರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಈಗ ನೀವು ನಿಮ್ಮ ಯುಎಎನ್ ಅನ್ನು ನಿಮಿಷಗಳಲ್ಲಿ ಮರಳಿ ಪಡೆಯಬಹುದು. ನೀವು…

Read More

Video Viral: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಚಂಡೀಗಢ: ವೈದ್ಯಕೀಯ ವೃತ್ತಿ ಎಂದರೆ ಅದೊಂದು ಪವಿತ್ರ ಸೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಕೇವಲ ‘ಹಣ ಮಾಡುವ ಯಂತ್ರ’ಗಳಂತೆ ನೋಡುತ್ತಿವೆ ಎಂಬ ಕಹಿಸತ್ಯವೊಂದನ್ನು ಯುವ ವೈದ್ಯೆಯೊಬ್ಬರು ಧೈರ್ಯವಾಗಿ ಬಯಲಿಗೆಳೆದಿದ್ದಾರೆ. ಚಂಡೀಗಢದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಈ ಘಟನೆ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಏನಿದು ಘಟನೆ? ಯುವ ವೈದ್ಯೆ ಡಾ. ಪ್ರಭ್ಲೀನ್ ಕೌರ್ ಅವರು ಚಂಡೀಗಢದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯೆಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಕೆಲಸಕ್ಕೆ ಸೇರಿದ ಮೊದಲ…

Read More

ಚಿಕಿತ್ಸೆ ಫಲಕಾರಿಯಾಗದೆ ಮಗಳು ಸಾವು, ಅಳಿಯನನ್ನೇ ಅಪಹರಿಸಿ ಕೊಂದ ಕುಟುಂಬ – Kannada News | Udaipur Revenge Killing: Daughter’s Family Abducts, Murders Son in Law After Her Death

ಉದಯಪುರ, ಏಪ್ರಿಲ್ 30:ಚಿಕಿತ್ಸೆ ಫಲಕಾರಿಯಾಗದೆ ಮಗಳು ಸತ್ತಿದ್ದಕ್ಕೆ, ಆಕೆಯ ಕುಟುಂಬದವರು ಅಳಿಯನನ್ನು ಅಪಹರಿಸಿ ಹತ್ಯೆ(Murder) ಮಾಡಿರುವ ಘಟನೆ ಉದಯಪುರದಲ್ಲಿ ನಡೆದಿದೆ. ಚೋಖಲಬಾರ ಗ್ರಾಮದ ಪಿಂಟೂಲಾಲ್ ವಡೇರಾ ಅವರ ಪತ್ನಿ ಪರು (25) ಏಪ್ರಿಲ್ 28 ರಂದು ಉದಯಪುರದ ಆಸ್ಪತ್ರೆಯಲ್ಲಿ ನಿಧನರಾದರು. ಏಪ್ರಿಲ್ 24 ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಾಗ, ಆಕೆಯ ತವರು ಮನೆಯಾದ ಅಂಬಾವಿ ಗ್ರಾಮದ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಮಗಳ ಸಾವಿನ ಸುದ್ದಿ…

Read More

ಎರಡು ವರ್ಷದ ಮಗುವಿಗೆ ಚಿತ್ರಹಿಂಸೆ ಕೊಟ್ಟು, ಹೊಡೆದು ಚರಂಡಿಗೆ ಎಸೆದ ತಂದೆ

ಲಕ್ನೋ, ಜೂನ್ 1: ಎರಡೂವರೆ ವರ್ಷದ ತನ್ನ ಪುಟ್ಟ ಹೆಣ್ಣುಮಗಳ ಮೇಲೆ ಅತಿಮಾನುಷವಾಗಿ ಹಲ್ಲೆ ನಡೆಸಿ, ರಸ್ತೆ ಬದಿಯ ಚರಂಡಿಗೆ ತಳ್ಳಿ ಕೊಲ್ಲಲು ಯತ್ನಿಸಿದ ತಂದೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೋನು ಅಲಿಯಾಸ್ ಯೋಗೇಂದ್ರ ಸಿಂಗ್ (50) ಎಂದು ಗುರುತಿಸಲಾಗಿದೆ. ಶನಿವಾರ ನಡೆದ ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ವಿಡಿಯೋ ಮೇ 30 ರಂದು ಮಧ್ಯಾಹ್ನ 2.30 ರ…

Read More

ಕರ್ನಾಟಕ ಹವಾಮಾನ ವರದಿ: ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಒಣ ಹವೆ, ಬೆಂಗಳೂರಿನಲ್ಲಿ ಶೀತ – Kannada News | Bengaluru temperature: Dry weather all over karnataka for next 4 days, misty weather in Bengaluru

ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಒಣ ಹವೆ ಬೆಂಗಳೂರು, ಜನವರಿ 21: ರಾಜ್ಯದೆಲ್ಲೆಡೆ ಕಳೆದ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದ್ದು (Weather Forecast), ಇನ್ನೂ ನಾಲ್ಕು ದಿನ ಇದೇ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ. ನಗರದಲ್ಲಿ ಚಳಿಯ ಪ್ರಮಾಣದಲ್ಲಿ ಏರಿಳಿಕೆಯಾಗುತ್ತಿದ್ದು, ಒಣ ಹವೆಯ ವಾತಾವರಣವಿದೆ. ಇಂದು ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ…

Read More